ಯಲ್ಲಾಪುರ : ಯಾರೋ ವಿರೋಧಿಗಳು ನನಗೆ ಸೋಲಿನ ಭಯ ಇದೆ ಎಂದು ನನ್ನ ಪ್ರಚಾರದ ಸ್ಪೀಡ್ 90ಕ್ಕೆ ಕೊಂಡೊಯ್ಯಲ್ಲ. ಈ ಹಿಂದಿ‌ನಿಂದಲು 70_60ಸ್ಪೀಡಲ್ ಹೋಗಿ ಗೆದ್ದು ಬಂದವನು ನಾನು.ಯಾರು ಏನೆ ಅಂದ್ರು ನಾವು 70ರ ಸ್ಪೀಡ್ ಅಲ್ಲಿ ಹೋಗಿಯೇ ನನ್ನ ಜನರನ್ನ ಮುಟ್ಟುತ್ತೆವೆ. ಎಂದು ಯಲ್ಲಾಪುರ ಶಾಸಕ ಹಾಗೂ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ವಿರೋಧಿಗಳಿಗೆ ಟಾಂಗ್ ಕೊಟ್ಟಿದ್ದಾರೆ.

ಅವರು ಇಂದು ಯಲ್ಲಾಪುರದ ಎಪಿಎಂಸಿ ಮೈದಾನದಲ್ಲಿ ನಡೆದ ಎಸ್ ಟಿ ಸಮುದಾಯದ ಬೃಹತ್ ಸಮಾವೇಶದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ್ದರು. ಇಲ್ಲಿ ಮೂಲ ಬಿಜೆಪಿ ಹೊಸ ಬಿಜೆಪಿ ಕಾರ್ಯಕರ್ತರು ಎನ್ನೋ ಇಬ್ಭಾಗ ಭಿನ್ನಾಭಿಪ್ರಾಯ ನೀತಿ ನನ್ನ ಕ್ಷೇತ್ರದಲ್ಲಿ ಇಲ್ಲ.ತಾನು ಕಾಂಗ್ರೇಸ್ ನಲ್ಲಿದ್ದಾಗ ಇದ್ದ ನನ್ನ ಎಲ್ಲ ಅಭಿಮಾನಿಗಳು ಮತ್ತು ಕಾರ್ಯಕರ್ತರನ್ನ ಬಿಜೆಪಿಗೆ ಕರೆತಂದಿದ್ದೆನೆ ಮತ್ತು ಕರೆ ತರುತ್ತೆನೆ.

ಅಲ್ಲಿ ಈಗ ಸ್ವಲ್ಪ ಮುಖಂಡರು ಉಳಿದುಕೊಂಡಿದ್ದಾರೆ ಅವರನ್ನೂ ಕೂಡಾ ಸದ್ಯದಲ್ಲೆ ಬಿಜೆಪಿಗೆ ಕರೆತರುತ್ತೆನೆ. ಎಂದು ಹೆಬ್ಬಾರ್ ವಿರೋಧಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.