ಸುದ್ದಿಬಿಂದು ಬ್ಯೂರೋ
ಬೆಂಗಳೂರು
: ಉತ್ತರಕನ್ನಡ ಜಿಲ್ಲೆಯ ಭಟ್ಕಳ ಕ್ಷೇತ್ರದಿಂದ ಎರಡನೇ ಭಾರೀ ಶಾಸಕರಾಗಿರುವ ಮಂಕಾಳು ವೈದ್ಯ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಬಹುತೇಕ ಫಿಕ್ಸ್ ಎನ್ನಲಾಗುತ್ತಿದೆ.

ಮಂಕಾಳು ವೈದ್ಯಾ ಅವರಿಗೆ ಮೀನುಗಾರಿಕೆ ಹಾಗೂ ಬಂದರು ಖಾತೆ ನೀಡುವ ಸಾಧ್ಯತೆ ಇದ್ದು, ಸಚಿವ ಸ್ಥಾನದ ಜೊತೆಗೆ ಉಡುಪಿ ಜಿಲ್ಲೆಯ ಉಸ್ತುವಾರಿ ನೀಡುವ ಸಾಧ್ಯತೆ ಇದೆ. ಮೊದಲ ಹಂತದಲ್ಲಿ 8 ಶಾಸಕರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಇದೀಗ ಎರಡನೇ ಹಂತದಲ್ಲಿ ಒಟ್ಟು 18ಶಾಸಕರಿಗೆ ಸಚಿವ ಸ್ಥಾನ ನೀಡಲು ಕಾಂಗ್ರೆಸ್ ಹೈಕಮಾಂಡ ತೀರ್ಮಾನಿಸಿದೆ.

ಈಗಾಲೆ ಹೈಕಮಾಂಡ ಈ 18ಶಾಸಕರಿಗೆ ಸಚಿವ ಸ್ಥಾನ ಬಹುತೇಕ ಫೈನಲ್ ಆಗಿದೆ ಎನ್ನಲಾಗಿದ್ದು, ಅಂತಿಮ ಮುದ್ರೆ ಬಿಳುವುದು ಮಾತ್ರ ಬಾಕಿ ಇದ್ದು, ನೂತನ ಸಚಿವರ ಪಟ್ಟಿ ಇಂದು ರಾತ್ರಿ ಇಲ್ಲವೆ ನಾಳೆ ಕೇಂದ್ರ ನಾಯಕರಿಂದ ರಾಜ್ಯ ನಾಯಕರ ಕೈ ಸೇರುವ ಸಾಧ್ಯತೆ ಇದೆ.