ಇಂದಿನ ಪಂಚಾಂಗ
ಶ್ರೀ ಶೋಭಕೃತುನಾಮ ಸಂವತ್ಸರ-ಉತ್ತರಾಯಣ-ಶಿಶಿರ ಋತು-ಮಾಘ ಮಾಸ-ಶುಕ್ಲಪಕ್ಷ-ಗುರುವಾರ
ತಿಥಿ: ಷಷ್ಠಿ ತಿಥಿಯು 04.05 ರವರೆಗೂ ಇದ್ದು ನಂತರ ಸಪ್ತಮಿ ಆರಂಭವಾಗುತ್ತದೆ
ನಕ್ಷತ್ರ : ಅಶ್ವಿನಿ ನಕ್ಷತ್ರವು 03.07 ರವರೆಗೂ ಇದ್ದು ನಂತರ ಭರಣಿ ನಕ್ಷತ್ರ ಆರಂಭವಾಗುತ್ತದೆ.
ಸೂರ್ಯೋದಯ: ಬೆಳಗ್ಗೆ 06.42
ಸೂರ್ಯಾಸ್ತ: ಸಂಜೆ 06.23
ರಾಹುಕಾಲ: ಮಧ್ಯಾಹ್ನ 01.30 ರಿಂದ 03.00

ಈ ದಿನದ ಅದೃಷ್ಟದ ಸಂಖ್ಯೆ :7-3-1-4

ಮೇಷ ರಾಶಿ : ಆರೋಗ್ಯದ ಬಗ್ಗೆ ಎಚ್ಚರ ವಹಿಸಿ. ಉತ್ತಮ ಆಹಾರ ಸೇವಿಸಿ. ಆದರೆ ಆಹಾರ ಸೇವನೆಯಲ್ಲಿ ಇತಿ ಮಿತಿ ಇರಲಿ.ಉದ್ಯೋಗದಲ್ಲಿ ಆತುರದ ನಿರ್ಧಾರದಿಂದಾಗಿ ಸಂದಿಗ್ದ ಪರಿಸ್ಥಿತಿ ಎದುರಾಗುತ್ತದೆ. ವ್ಯಾಪಾರ ವ್ಯವಹಾರದಲ್ಲಿ ನಷ್ಟದ ಮಾತಿರದು. ಅವಶ್ಯಕತೆ ಇದ್ದಾಗ ಆತ್ಮೀಯ ಸ್ನೇಹಿತರೊಬ್ಬರ ಸಹಾಯ ದೊರೆಯುತ್ತದೆ. ಖರ್ಚು ವೆಚ್ಚಗಳು ಹೆಚ್ಚಾಗೇ ಇರುತ್ತದೆ. ದಿನವಿಡಿ ಆತ್ಮೀಯರ ಜೊತೆ ಸಂತಸದಿಂದ ಕಳೆಯುವಿರಿ.
ಅದೃಷ್ಟ ಸಂಖ್ಯೆ :, 3 ಅದೃಷ್ಟ ಬಣ್ಣ : ಕೆಂಪು

ವೃಷಭ ರಾಶಿ : ಎಲ್ಲರ ಜೊತೆ ಸಂತಸದಿಂದ ದಿನ ಕಳೆಯುವಿರಿ. ಉದ್ಯೋಗದಲ್ಲಿ ಹೆಚ್ಚಿನ ಪ್ರಯತ್ನದಲ್ಲಿ ಉನ್ನತ ಮಟ್ಟ ತಲುಪುವಿರಿ. ಸ್ನೇಹ, ಪ್ರೀತಿಯಿಂದ ಮಾತ್ರ ನಿರೀಕ್ಷಿತ ಫಲಿತಾಂಶ ಪಡೆಯಲು ಸಾಧ್ಯ. ವಿದ್ಯಾಭ್ಯಾಸದಲ್ಲಿ ವಿನೂತನ ಬದಲಾವಣೆಗಳಿವೆ. ತಾಯಿಯ ಜೊತೆ ಹಣಕಾಸಿನ ವಿಚಾರದಲ್ಲಿ ಮನಸ್ತಾಪ ಇರುತ್ತದೆ. ಹಿರಿಯ ನಾಗರಿಕರಿಗೆ ವಿಶೇಷ ಅನುಕೂಲತೆಗಳು ದೊರೆಯುತ್ತವೆ.
ಅದೃಷ್ಟ ಸಂಖ್ಯೆ : 6 ಅದೃಷ್ಟ ಬಣ್ಞ : ನೇರಳೆ

ಮಿಥುನ ರಾಶಿ :ವಿದ್ಯಾರ್ಥಿಗಳಿಗೆ ವಿದೇಶಕ್ಕೆ ತೆರಳುವ ಅವಕಾಶ ದೊರೆಯುತ್ತದೆ.ಉದ್ಯೋಗದಲ್ಲಿನ ವಾದ ವಿವಾದಗಳನ್ನು ಕುತೂಹಲದಿಂದ ಆಲಿಸುವಿರಿ. ಒಂಟಿತನ ಬಾಧಿಸುತ್ತದೆ. ಗಂಟಲ ಬೇನೆ ಉಂಟಾಗುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಬೇಸರದ ಸನ್ನಿವೇಶವೊಂದು ನಡೆಯುತ್ತದೆ. ಜಗಳ ಕದನವನ್ನು ಇಷ್ಟ ಪಡದೆ ಬುದ್ಧಿವಂತಿಕೆಯಿಂದ ಸಮಸ್ಯೆಯಿಂದ ಪಾರಾಗುವಿರಿ. ವಿದ್ಯಾರ್ಥಿಗಳು ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಾರೆ.
ಅದೃಷ್ಟ ಸಂಖ್ಯೆ :9, ಅದೃಷ್ಟ ಬಣ್ಣ : ಹಳದಿ

ಕರ್ಕ ರಾಶಿ :ಉತ್ತಮ ಆರೋಗ್ಯಕ್ಕಾಗಿ ಆಹಾರ ಕ್ರಮವನ್ನು ಬದಲಾಯಿಸಿಕೊಳ್ಳಿರಿ.ವ್ಯಾಪಾರ ವ್ಯವಹಾರದಲ್ಲಿ ಶಾಂತಿ ಸಂಯಮದ ಅವಶ್ಯಕತೆ ಇರುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಅತಿಯಾದ ಆತ್ಮವಿಶ್ವಾಸ ಮತ್ತು ಆತುರ ತೊಂದರೆಗೆ ಕಾರಣವಾಗಬಹುದು. ವಿದ್ಯಾರ್ಥಿಗಳಿಗೆ ಅನಾಯಾಸವಾಗಿ ನಿರೀಕ್ಷಿತ ಯಶಸ್ಸು ದೊರೆಯುತ್ತದೆ. ವಿದ್ಯಾರ್ಥಿಗಳ ಧೈರ್ಯದ ಗುಣ ಉದ್ಯೋಗವಾಕಾಶ ನೀಡಲಿದೆ
ಅದೃಷ್ಟ ಸಂಖ್ಯೆ : 4 ಅದೃಷ್ಟ ಬಣ್ಣ : ಹಸಿರು

ಸಿಂಹ ರಾಶಿ :ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಆದಾಯ ದೊರೆಯುತ್ತದೆ.ಉದ್ಯೋಗ ಬದಲಾಯಿಸಲು ತೀರ್ಮಾನಿಸುವಿರಿ. ಆಡುವ ಮಾತಿನಲ್ಲಿ ನಿಖರತೆ ಇರುವುದಿಲ್ಲ. ಕುಟುಂಬದ ಹಣಕಾಸಿನ ವಿಚಾರದಲ್ಲಿ ಅಂತಿಮ ನಿರ್ಣಯವನ್ನು ತೆಗೆದುಕೊಳ್ಳುವಿರಿ. ಆರೋಗ್ಯದಲ್ಲಿ ಏರಿಳಿತ ಇರುತ್ತದೆ. ಮಕ್ಕಳ ಜೊತೆ ಮನರಂಜನಾ ಸ್ಥಳಕ್ಕೆ ತೆರಳುವಿರಿ. ಉಪಯೋಗವಿರದ ವಿಚಾರಗಳಿಗೆ ಹಣ ಖರ್ಚು ಮಾಡಬೇಕಾಗುತ್ತದೆ.

ಅದೃಷ್ಟ ಸಂಖ್ಯೆ :7, ಅದೃಷ್ಟ ಬಣ್ಣ: ನೀಲಿ

ಕನ್ಯಾ ರಾಶಿ: ಕುಟುಂಬದಲ್ಲಿ ನೆಮ್ಮದಿ ನೆಲೆಸಲು ಕಾರಣರಾಗುವಿರಿ. ವ್ಯಾಪಾರ ವ್ಯವಹಾರದಲ್ಲಿ ಲಾಭ ನಷ್ಟ ಸರಿ ಸಮನಾಗಿಇರುತ್ತದೆ. ಏಕಾಂಗಿಯಾಗಿ ಉದ್ಯೋಗದಲ್ಲಿನ ಕೆಲಸ ಕಾರ್ಯಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಿರಿ. ಬಿಡುವಿನ ವೇಳೆ ಅವಶ್ಯಕತೆ ಇದ್ದವರಿಗೆ ಸಹಾಯ ಮಾಡುವಿರಿ. ಪ್ರಯತ್ನಕ್ಕೆ ತಕ್ಕ ಪ್ರತಿಫಲ ಪಡೆಯುವಿರಿ. ವಿದ್ಯಾರ್ಥಿಗಳಿಗೆ ವಿದೇಶಿ ಸಂಸ್ಥೆಯಲ್ಲಿ ಉದ್ಯೋಗ ದೊರೆಯುತ್ತದೆ. ಅನಿರೀಕ್ಷಿತ ಧನಲಾಭವಿದೆ.
ಅದೃಷ್ಟ ಸಂಖ್ಯೆ ‌:10, ಅದೃಷ್ಟ ಬಣ್ಣ: ನೇರಳೆ

ತುಲಾ ರಾಶಿ : ಉದ್ಯೋಗದಲ್ಲಿ ಮಾನಸಿಕ ಒತ್ತಡ ಇರುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಹಿನ್ನೆಡೆ ಇರುವುದಿಲ್ಲ. ಚಾಡಿ ಮಾತನ್ನು ನಂಬದಿರಿ. ಶಾಂತಿ ಸಹನೆಯಿಂದ ವರ್ತಿಸಿದಲ್ಲಿ ಯಾವುದೇ ತೊಂದರೆ ಎದುರಾಗದು. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಯಶಸ್ಸು ದೊರೆಯುತ್ತದೆ. ವಯೋವೃದ್ದರಿಗೆ ಅನಾರೋಗ್ಯದ ತೊಂದರೆ ಇರುತ್ತದೆ. ಬಿಡುವಿಲ್ಲದ ಕೆಲಸದ ನಡುವೆ ವಿಶ್ರಾಂತಿ ಪಡೆಯಿರಿ. ಮನೆಯಲ್ಲಿ ಮಂಗಳ ಕಾರ್ಯವೊಂದು ನಡೆಯುತ್ತದೆ.
ಅದೃಷ್ಟ ಸಂಖ್ಯೆ : 5, ಅದೃಷ್ಟ ಬಣ್ಣ: ಗುಲಾಬಿ

ವೃಶ್ಚಿಕ ರಾಶಿ :ವ್ಯಾಪಾರ ವ್ಯವಹಾರದಲ್ಲಿ ಬೇಸರ ಉಂಟಾಗುವ ಸ್ಸಾಧ್ಯತೆಗಳಿವೆ. ಅನಾವಶ್ಯಕ ಖರ್ಚು ವೆಚ್ಚಗಳನ್ನು ನಿಯಂತ್ರಿಸಲು ವಿಫಲರಾಗುವಿರಿ. ವಿದ್ಯಾರ್ಥಿಗಳ ಮಾನಸಿಕ ಧೈರ್ಯ ಕಡಿಮೆ ಅಗುತ್ತದೆ. ಹಣಕಾಸಿನ ವ್ಯವಹಾರವೊಂದು ಅಪೂರ್ಣವಾಗಬಹುದು. ಆತ್ಮವಿಶ್ವಾಸ ಇದ್ದಲ್ಲಿ ತೊಂದರೆ ಮರೆಯಾಗುತ್ತವೆ. ವಿದೇಶ ಅಥವಾ ದೂರದ ಪ್ರದೇಶಕ್ಕೆ ಉದ್ಯೋಗವನ್ನು ಅರಸಿ ತೆರಳುವ ಸಾಧ್ಯತೆಗಳಿವೆ. ಬರಹಗಾರರಿಗೆ ಉನ್ನತ ಗೌರವ ದೊರೆಯುತ್ತದೆ.
ಅದೃಷ್ಟ ಸಂಖ್ಯೆ : 8, ಅದೃಷ್ಟ ಬಣ್ಣ: ಬಿಳಿ

ಧನು ರಾಶಿ : ಉದ್ಯೋಗದಲ್ಲಿ ಸಹೋದ್ಯೋಗಿಗಳ ನಡುವೆ ನಂಬಿಕೆ ವಿಶ್ವಾಸ ಇರುತ್ತದೆ. ಉದ್ಯೋಗದಲ್ಲಿನ ವಿವಾದವೊಂದು ಬಗೆಹರಿಯಲಿದೆ. ವ್ಯಾಪಾರ ವ್ಯವಹಾರದಲ್ಲಿ ನಿರೀಕ್ಷಿತ ಆದಾಯ ದೊರೆಯುತ್ತದೆ. ಮಕ್ಕಳು ಹಟದಿಂದ ತಮ್ಮ ಅಸೆ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳುತ್ತಾರೆ. ಏಕಾಂಗಿಯಾಗಿ ಜೀವನದ ಸಮಸ್ಯೆಗಳನ್ನು ಪರಿಹರಿಸುವಿರಿ. ಸ್ವಾಭಿಮಾನಿಗಳಾದ ನೀವು ಇತರರಿಗೂ ಸ್ಪೂರ್ತಿಯಾಗುವಿರಿ. ಅವಶ್ಯಕತೆ ಇರುವವರಿಗೆ ಹಣ ಸಹಾಯ ಮಾಡುವಿರಿ.
ಅದೃಷ್ಟ ಸಂಖ್ಯೆ : 11, ಅದೃಷ್ಟ ಬಣ್ಣ : ಬಿಳಿ

ಮಕರ ರಾಶಿ : ವ್ಯಾಪಾರ ವ್ಯವಹಾರದಲ್ಲಿ ಸ್ಥಿರತೆ ಕಾಣಲಿದೆ. ವಿದ್ಯಾರ್ಥಿಗಳು ತಪ್ಪು ಕಲ್ಪನೆಯಿಂದ ತಮ್ಮ ಗುರಿಯಿಂದ ದೂರ ಸರಿಯುತ್ತಾರೆ. ಮಾತಿನಲ್ಲಿ ಹಿಡಿತ ಇದ್ದಲ್ಲಿ ವಿವಾದಗಳಿಂದ ಪಾರಾಗಬಹುದು. ಮಕ್ಕಳಿಗೆ ಬೇಸರ ಬರುವಂತೆ ಮಾತನಾಡುವಿರಿ. ನಿಧಾನವಾಗಿ ಸ್ವಂತ ಕೆಲಸ ಕಾರ್ಯಗಳಿಗೆ ಮೊದಲ ಪ್ರಾಶಸ್ತ್ಯ ನೀಡುವಿರಿ. ಬುದ್ದಿವಂತಿಕೆಯಿಂದ ಹಣ ಸಂಪಾದಿಸುವಿರಿ. ಮಾತಿಗಿಂತ ಮೌನವೇ ಲೇಸು ಎಂಬ ತೀರ್ಮಾನಕ್ಕೆ ಬರುವಿರಿ.
ಅದೃಷ್ಟ ಸಂಖ್ಯೆ : 6, ಅದೃಷ್ಣ ಬಣ್ಣ:ಕಂದು

ಕುಂಭ ರಾಶಿ : ಕುಟುಂಬದಲ್ಲಿ ಬಿಗುವಿನ ವಾತಾವರಣ ಇರುತ್ತದೆ. ದೈಹಿಕವಾಗಿ ಶ್ರಮ ಪಡದೆ ಬುದ್ಧಿವಂತಿಕೆಯಿಂದ ಕೆಲಸ ಸಾಧಿಸುವಿರಿ. ಉದ್ಯೋಗದಲ್ಲಿ ಅನ್ಯರ ಸಹಾಯದಿಂದ ಜವಾಬ್ದಾರಿ ಪೂರೈಸುವಿರಿ. ಆಡುವ ಮಾತನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದು. ನಿಮ್ಮ ಬುದ್ಧಿವಂತಿಕೆಗೆ ಎದುರಾಳಿಗಳು ಗಲಿಬಿಲಿಗೊಳ್ಳುತ್ತಾರೆ. ಹೊಸ ಮನೆ ಕೊಳ್ಳುವ ಬಗ್ಗೆ ಮಾತು ಕತೆ ನಡೆಯುತ್ತದೆ. ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುವಿರಿ.
ಅದೃಷ್ಟ ಸಂಖ್ಯೆ : 5, ಅದೃಷ್ಟ ಬಣ್ಣ: ತಿಳಿ ಹಸಿರು

ಮೀನ ರಾಶಿ :ಆತ್ಮವಿಶ್ವಾಸ ಜೀವನದ ಹೊಸ ಮಾರ್ಗಕ್ಕೆ ಕಾರಣವಾಗುತ್ತದೆ. ಸ್ಥಿರವಾದ ಮನಸ್ಸಿನಿಂದ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ಉದ್ಯೋಗದಲ್ಲಿ ಯಾವುದೇ ವಿಚಾರವನ್ನು ಮುಂದೂಡಬೇಡಿ. ಕೆಲಸ ಕಾರ್ಯಗಳನ್ನು ನಿರಾಸಕ್ತಿಯಿಂದ ಮಾಡುವಿರಿ. ಹಣಕಾಸಿನ ತೊಂದರೆ ಇರುವುದಿಲ್ಲ. ಕುಟುಂಬದ ಸದಸ್ಯರ ಅನುಕಂಪ ದೊರೆಯಲಿದೆ. ಇದರಿಂದಾಗಿ ಜವಾಬ್ದಾರಿ ಕಡಿಮೆ ಆಗುತ್ತದೆ. ಸೋಲನ್ನು ಒಪ್ಪದೆ ಪ್ರತಿ ಕೆಲಸದಲ್ಲಿ ಹೋರಾಟದ ಹಾದಿಯಲ್ಲಿ ನಡೆಯುವಿರಿ. ವಿದ್ಯಾರ್ಥಿಗಳು ಎಲ್ಲರೊಂದಿಗೆ ಹೊಂದಿಕೊಂಡು ಬಾಳುವರು.
ಅದೃಷ್ಟ ಸಂಖ್ಯೆ :12, ಅದೃಷ್ಟ ಬಣ್ಣ: ನೀಲಿ