suddibindu
ಕಾರವಾರ :ಲೋಕಸಭಾ ಚುನಾವಣಾ ಕಾವು ರಂಗೇರತೊಡಗಿದೆ. ಇನ್ನು ಜಿಲ್ಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಅಬ್ಬರದ ಪ್ರಚಾರ ನಡೆಸುತ್ತಿದ್ದು ಇದರ ನಡುವೆ ಕೆಲ‌ ಖಾಸಗಿ ಸುದ್ದಿ ವಾಹಿನಿ ಒಂದು ನಡೆಸಿದ ಸರ್ವೆಗಳಲ್ಲಿ ಕೈ ಅಭ್ಯರ್ಥಿ ಮುಂದಿದ್ದಾರೆ ಎನ್ನಲಾಗಿದೆ.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಮೇ 7 ರಂದು ಚುನಾವಣೆ ನಡೆಯಲಿದೆ.ಇನ್ನು ಈ ಬಾರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಪೈಪೋಟಿ ನಡೆಯುತ್ತಿದ್ದು ಯಾರು ಗೆಲ್ಲಲ್ಲಿದ್ದಾರೆ ಎನ್ನುವ ಕುತೂಹಲ ಮೂಡಿಸಿದ್ದು ಇದರ ನಡುವೆ ಕೆಲ ಖಾಸಗಿ ಸರ್ವೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಯೇ ಮುಂದಿದ್ದಾರೆ ಎನ್ನಲಾಗಿದೆ. ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆ ಎಂದೇ ಕರೆಯಲಾಗುತ್ತಿತ್ತು. ಕ್ಷೇತ್ರದಿಂದ ಸಂಸದರಾಗಿ ಆರು ಬಾರಿ ಅನಂತ್ ಕುಮಾರ್ ಹೆಗಡೆ ಆಯ್ಕೆಯಾಗಿದ್ದರು.ಆದರೆ ಈ ಬಾರಿ ಬಿಜೆಪಿಯಲ್ಲಿ ಅಭ್ಯರ್ಥಿ ಬದಲಾವಣೆ ಮಾಡಿರುವುದು ಜಿಲ್ಲೆಯಲ್ಲಿ ದೊಡ್ಡ ಹಿನ್ನಡೆಯಾಗಲಿದೆ ಎನ್ನುವ ಅಂಶ ಬೆಳಕಿಗೆ ಬಂದಿದ್ದು ಇದು ಬಿಜೆಪಿ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಟಿಕೇಟ್ ವಂಚಿತ ಅನಂತ್ ಕುಮಾರ್ ಹೆಗಡೆ ಸದ್ಯ ಮುನಿಸಿಕೊಂಡಿದ್ದು ಈ ವರೆಗೆ ಚುನಾವಣಾ ಕಣಕ್ಕೆ ಬಂದಿಲ್ಲ. ಅಲ್ಲದೇ ಅಭ್ಯರ್ಥಿಗೆ ಬೆಂಬಲ ಕೊಡುವ ಬಗ್ಗೆಯೂ ಪ್ರಸ್ತಾಪ ಮಾಡಿಲ್ಲ. ಇನ್ನು ಅನಂತ್ ಕುಮಾರ್ ಅವರ ಬೆಂಬಲಿಗರು ಬಹುತೇಕರು ಈ ಬಾರಿ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಬೆಂಬಲಕ್ಕೆ ನಿಂತಿಲ್ಲ‌ ಎನ್ನಲಾಗಿದೆ. ಮೇಲ್ನೋಟಕ್ಕೆ ಬೆಂಬಲ ನೀಡಿದರು ಒಳಗೆ ವಿರೋಧ ಮಾಡುವವರೇ ಹೆಚ್ಚಿದ್ದು ಇದು ಬಿಜೆಪಿ ಅಭ್ಯರ್ಥಿಗೆ ದೊಡ್ಡ ಹಿನ್ನಡೆ ಯಾಗಿದೆ ಎನ್ನಲಾಗಿದೆ.

ಇನ್ನು ಜಿಲ್ಲೆಯಲ್ಲಿ ಯಲ್ಲಾಪುರ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದರು ಪಕ್ಷಕ್ಕೆ ಬೆಂಬಲ ನಿರೀಕ್ಷೆ ಮಟ್ಟದಷ್ಟು ಇಲ್ಲ ಎನ್ನಲಾಗಿದೆ. ಹೆಬ್ಬಾರ್ ಪುತ್ರ ವಿವೇಕ್ ಹೆಬ್ಬಾರ್ ಈಗಾಗಲೇ ಕಾಂಗ್ರೆಸ್ ಸೇರಿದ್ದು ಶಾಸಕ ಶಿವರಾಮ್ ಹೆಬ್ಬಾರ್ ಬಿಜೆಪಿಯಲ್ಲಿದ್ದರು ಕಾಂಗ್ರೆಸ್ ಗೆ ಬೆಂಬಲ ಕೊಡುತ್ತಿದ್ದಾರೆ.ಹೆಬ್ಬಾರ್ ಗೆ ಜಿಲ್ಲೆಯಲ್ಲಿ ತನ್ನದೇ ಆದ ಬೆಂಬಲಿಗರು ಇದ್ದು ಬಹುತೇಕ ಬೆಂಬಲಿಗರು ಕಾಂಗ್ರೆಸ್ ಬೆಂಬಲಿಸುವುದರಿಂದ ಕಾಗೇರಿಗೆ ದೊಡ್ಡ ಹಿನ್ನಡೆಯಾಗಲಿದೆ ಎನ್ನಲಾಗಿದೆ.

ಇನ್ನು ಹೆಬ್ಬಾರ್ ಹಾಗೂ ಅನಂತ್ ಕುಮಾರ್ ಹೆಗಡೆ ಅವರ ಮುನಿಸು ಕಾಗೇರಿಗೆ ದೊಡ್ಡ ಹಿನ್ನಡೆಯಾಗಲಿದೆ ಎನ್ನುವ ಅಂಶ ಕೆಲ ಸರ್ವೆಗಳಲ್ಲಿ ಬಂದಿದ್ದು ಬಿಜೆಪಿಗೆ ಇದು ತಲೆ ನೋವಾಗಿದೆ ಎನ್ನಲಾಗಿದೆ.ಇನ್ನೊಂದೆಡೆ ಪ್ರತಿ ಲೋಕಸಭಾ ಚುನಾವಣೆಯಲ್ಲಿ ಹಿಂದುತ್ವದ ಆಧಾರದ ಮೇಲೆ ಚುನಾವಣೆ ನಡೆಯುತ್ತಿತ್ತು. ಆದರೆ ಈ ಬಾರಿ ಬಿಜೆಪಿಯಲ್ಲಿ ಹಿಂದುತ್ವದ ಅಸ್ತ್ರ ಪ್ರಯೋಗ ಮಾಡುವಲ್ಲಿ ವಿಫಲವಾಗಿದೆ ಎನ್ನಲಾಗಿದೆ. ಅಭ್ಯರ್ಥಿ ಕಾಗೇರಿ ದುಬೈ ಭೇಟಿ ಇನ್ನಿತರ ಫೋಟೋ ವೈರಲ್ ಹಿಂದುತ್ವದ ಅಲೆ ಎಬ್ಬಿಸುವಲ್ಲಿ ವಿಫಲವಾಗಿದೆ ಎನ್ನಲಾಗಿದೆ. ಇದು ಸಹ ಬಿಜೆಪಿ ಹಿನ್ನಡೆಗೆ ಕಾರಣವಾಗಿದೆ ಎನ್ನಲಾಗಿದೆ.

ಇನ್ನು ಬಿಜೆಪಿಗೆ ಈ ಬಾರಿ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳು ಸಹ ದೊಡ್ಡ ಎಫೆಕ್ಟ್ ತರಲಿದೆ ಎನ್ನಲಾಗಿದೆ. ಗೃಹಲಕ್ಷ್ಮಿ, ಗೃಹಜ್ಯೋತಿ, ಯುವನಿಧಿ, ಶಕ್ತಿ ಹಾಗೂ ಅನ್ನಭಾಗ್ಯ ಯೋಜನೆಯ ಲಾಭ ತೆಗೆದುಕೊಂಡ ಹಲವರು ಕಾಂಗ್ರೆಸ್ ಪರ ನಿಲ್ಲುತ್ತಿದ್ದು ಅದರಲ್ಲೂ ಮಹಿಳಾ ಮತದಾರರು ಕಾಂಗ್ರೆಸ್ ಕೈ ಹಿಡಿಯುತ್ತಿದ್ದು ಬಿಜೆಪಿಗೆ ಇದು ಸಹ ಹಿನ್ನಡೆಗೆ ಕಾರಣವಾಗಿದೆ ಎನ್ನಲಾಗಿದೆ. ಸದ್ಯ ಬಿಜೆಪಿಯಲ್ಲಿ ಈ ಬಾರಿ ಅಭ್ಯರ್ಥಿಯನ್ನ ಗೆಲ್ಲಿಸಲೇ ಬೇಕು ಎಂದು ಮಾಜಿ ಶಾಸಕರುಗಳು, ಬಿಜೆಪಿ ಮುಖಂಡರು ಮುಂದಾಗಿದ್ದಾರೆ. ಇನ್ನು ಕಾಂಗ್ರೆಸ್ ನಲ್ಲಿ ಈ ಬಾರಿ ಅಭ್ಯರ್ಥಿ ಗೆಲ್ಲಿಸಲು ಸಚಿವ ಮಂಕಾಳ ವೈದ್ಯ ಹಾಗೂ ಮಾಜಿ ಸಚಿವ ಆರ್ ವಿ ದೇಶಪಾಂಡೆ ನೇತೃತ್ವ ವಹಿಸಿದ್ದು ಎರಡು ಪಕ್ಷಕ್ಕೂ ಈ ಬಾರಿಯ ಚುನಾವಣೆ ಪ್ರತಿಷ್ಠೆಯ ಕಣವಾಗಿದ್ದು ಅಂತಿಮವಾಗಿ ಮತದಾರರು ಯಾರ ಪರ ನಿಲ್ಲುತ್ತಾರೆ ಎನ್ನುವುದನ್ನ ಕಾದು ನೋಡಬೇಕಾಗಿದೆ.

ಜಿಲ್ಲೆ ಇಬ್ಬಾಗಕ್ಕೆ ಮುಂದಾಗಿದ್ದ ಕಾಗೇರಿ.
ಇನ್ನೊಂದೆಡೆ ಬಿಜೆಪಿ ಅಭ್ಯರ್ಥಿ ಕಾಗೇರಿ ಉಸ್ತುವಾರಿ ಸಚಿವರಾಗಿದ್ದ ವೇಳೆ ಜಿಲ್ಲೆ ಒಡೆಯುವ ಪ್ರಯತ್ನ ಮಾಡಿರುವುದು, ಹಾಗೂ ಕರಾವಳಿ ಭಾಗದ ಮೇಲಿನ ನಿರಾಸಕ್ತಿ ಈ ಬಾರಿ ಕರಾವಳಿ ಭಾಗದ ಮತದಾರರ ಮುನಿಸಿಗೆ ಕಾರಣವಾಗಿದೆ ಎನ್ನಲಾಗಿದ್ದು ಇದು ಸಹ ಚುನಾವಣೆಯ ಮೇಲೆ ದೊಡ್ಡ ಎಫೆಕ್ಟ್ ಬೀಳಲಿದೆ ಎನ್ನಲಾಗಿದೆ. ಮೆಡಿಕಲ್‌ ಕಾಲೇಜನ್ನು ಶಿರಸಿಗೆ ಕೊಂಡೊಯ್ಯಲು ಮುಂದಾಗಿದ್ದ ಕಾಗೇರಿ ಮುಂದಾಗಿದ್ದರು.ಈ ವೇಳೆ ಜಿಲ್ಲೆಯಲ್ಲಿ ದೊಡ್ಡ ಹೋರಾಟವೆ ನಡೆದಿರುವುದು ಇಂದಿಗೂ ಯಾರೂ ಕೂಡ ಮರೆತಿಲ್ಲ.ಶಿಕ್ಷಣ ಕ್ಷೇತ್ರವನ್ನೂ ಕೂಡ ಇವರು ಸಚಿವರಾಗಿದ್ದಾಗಲೇ ಇಬ್ಬಾಗ ಮಾಡಿದ್ದಾರೆ. ಇದರಿಂದಾಗಿ ಶೈಕ್ಷಣಿಕ ಕೆಲಸಕ್ಕೆ ಹೋಗಲು ಜೋಯಿಡಾ ಜನರು ಇಂದಿಗೂ ಪರದಾಟ ನಡೆಸುವಂತಾಗಿದೆ. ಇದರ ಜೊತೆಗೆ ಇನ್ನೂ ಅನೇಕ ಇಲಾಖೆಯನ್ನ ಜಿಲ್ಲಾ ಕೇಂದ್ರದಿಂದ ಶಿರಸಿಗೆ ಹೊತ್ತೊಯ್ಯದ್ದಿರುವ ಕೀರ್ತಿ ಕಾಗೇರಿಯವರಿಗೆ ಸಲ್ಲುತ್ತದೆ.