ಸುದ್ದಿಬಿಂದು ಬ್ಯೂರೋ
ಬೆಂಗಳೂರು : ಉತ್ತರಕನ್ನಡ ಜಿಲ್ಲೆಯ ಭಟ್ಕಳ ಕ್ಷೇತ್ರದಿಂದ ಎರಡನೇ ಭಾರೀ ಶಾಸಕರಾಗಿ ಆಯ್ಕೆ ಆಗಿದ್ದ ಮಂಕಾಳು ವೈದ್ಯ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಪೈನಲ್ ಆಗಿದೆ.
ಜಿಲ್ಲೆಯಲ್ಲಿ ಕಾಂಗ್ರೆಸ್ ನಿಂದ ನಾಲ್ವರು ಶಾಸಕರು ಆಯ್ಕೆಯಾಗಿದ್ದು, ಭಟ್ಕಳದಿಂದ ಮಂಕಾಳ ವೈದ್ಯ,ಕಾರವಾರದಿಂದ ಸತೀಶ್ ಸೈಲ್, ಹಳಿಯಾಳದಿಂದ ಜಿಲ್ಲೆಯ ಹಿರಿಯ ರಾಜಕಾರಣಿ ಆರ್ ವಿ ದೇಶಪಾಂಡೆ, ಹಾಗೂ ಶಿರಸಿಯಿಂದ ಮೊದಲ ಭಾರಿಗೆ ಭೀಮಣ್ಣ ನಾಯ್ಕ ಶಾಸಕರಾಗಿ ಆಯ್ಕೆ ಆಗಿದ್ದಾರೆ. ಸಚಿವರ ಆಯ್ಕೆಯ ಎರಡನೇ ಪಟ್ಟಿಯಲ್ಲಿಯೂ ಸಹ ಆರ್ ವಿ ದೇಶಪಾಂಡೆ ಅವರ ಹೆಸರನ್ನ ಕೈ ಬಿಡಲಾಗಿದೆ ಎನ್ನಲಾಗುತ್ತಿದೆ.
ಮೇ 27ರಂದು ರಾಜ್ಯದಲ್ಲಿ 24 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಮಂಕಾಳು ವೈದ್ಯ ಅವರಿಗೆ ಮೀನುಗಾರಿಕೆ ಹಾಗೂ ಬಂದರು ಇಲಾಖೆ ಖಾತೆ ಜೊತೆಗೆ ಉತ್ತರಕನ್ನಡ ಜಿಲ್ಲೆಯ ಉಸ್ತುವಾರಿ ಹೊಣೆಗಾರಿಕೆ ಸಹ ನೀಡುವ ಎಲ್ಲಾ ಸಾಧ್ಯತೆ ಹೆಚ್ಚಾಗಿದೆ.