suddibindu.in
ಕಾರವಾರ : ಈ ಭಾರಿ ಸುರಿದ ಮಹಾ ಮಳೆಗೆ ಉತ್ತರಕನ್ನಡ ಜಿಲ್ಲೆ ನಲುಗಿ ಹೋಗಿದೆ.ಒಂದು ಘಟನೆ ಕಣ್ಣಮುಂದೆ ರಾಚುತ್ತಿರುವಾಗಲೇ ಉತ್ತರಕನ್ನಡ ಜಿಲ್ಲೆಯ ಕಾರವಾರದ ಕಾಳಿ‌ನದಿ ಸೇತುಗೆ ಕುಸಿದು ಬಿಳುವ ಮೂಲಕ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಇದರ‌ ಬೆನ್ನಲ್ಲೇ ‌ಇದೀಗ ಹೆದ್ದಾರಿಯಲ್ಲಿನ ಸೇತುವೆ ಮೇಲಿನ ಸಂಚಾರ ಹಗ್ಗದ ಮೇಲಿನ ನಡಿಗೆಯಂತಾಗಿದೆ.

ಕಾಳಿ ನದಿಯ ಸೇತುವೆ ರಾತ್ರಿ ಸಮಯದಲ್ಲಿ ಮುರಿದು ಬಿದ್ದಿರುವುದರಿಂದ ಘನಘೋರ ದುರಂತವೊಂದು ತಪ್ಪಿದೆ. ಒಂದು ವೇಳೆ ಹಗಲಿನ ವೇಳೆ ಈ ಸೇತುವೆ ಏನಾದರೂ ಕುಸಿದು ಹೋಗಿದ್ದು ಹೌದಾಗಿದ್ದರೆ ಎಷ್ಟು ಜನರ ಜೀವ ಬಲಿ ತೆಗೆದುಕೊಳ್ಳುತ್ತಿತ್ತು ಎಂದು ಊಹಿಸಲು ಸಾದ್ಯವಿಲ್ಲ. ಆದರೆ ಈ ಘಟನೆಯ ನಂತರದಲ್ಲಿ ಹೆದ್ದಾರಿಯಲ್ಲಿರುವ ಸೇತುವೆಗಳ ಮೇಲೆ ಸಂಚಾರ ಜನರ ನಿದ್ದೆಗೆಡಿಸುವಂತೆ ಮಾಡಿರುವುದು ಮಾತ್ರ ಸುಳ್ಳಲ್ಲ..

ಇದನ್ನೂ ಓದಿ

ಜಿಲ್ಲೆಯ ಕರಾವಳಿ ಹೆದ್ದಾರಿಯಲ್ಲಿ ಇನ್ನೂ ಕೂಡ ಪ್ರಮುಖ ಹೆದ್ದಾರಿಗಳು ಅಪಾಯದಲ್ಲಿದೆ.ಅಘನಾಶಿನಿ, ಶರಾವತಿ, ಗಂಗಾವಳಿ ಸೇರಿದಂತೆ ಇನ್ನೂ ಕೆಲವು ಸೇತುವೆಗಳು ಕಾಳಿ‌ನದಿ ಸೇತುವೆಗಿಂತಲ್ಲೂ ಹಳೆಯದಾಗಿದೆ.ಇದರ ಪರಿಸ್ಥಿತಿ ಸದ್ಯ ಹೇಗಿದೆ ಎನ್ನುವ ಬಗ್ಗೆ ಇದುವರಗೆ ಯಾವ ಪರಿಣಿತರಿಂದಲ್ಲೂ ಪರಿಶೀಲನೆ ನಡೆದಿರುವ ಉದಾರಣೆಯಿಲ್ಲ. ಕಾಳಿ ನದಿಯ ಸೇತುವೆ ಉರುಳಿ ಬಿದ್ದ‌ ಮೇಲಾದರೂ ಎಚ್ಚೇತ್ತುಕೊಳ್ಳದೆ ಇದ್ದರೆ ಇನ್ನೊಂದು ದಿನ ಅರ್ಧ ಆಯುಷ್ಯದಲ್ಲಿರುವ ಸೇತುವೆಗಳು ಉರುಳುವುದರಲ್ಲಿ ಯಾವುದೇ ಅನುಮಾನವಿಲ್ಲ..ಹೀಗಾಗಿ ಹಳೆಯ ಸೇತುವೆಗಳನ್ನ ಪರಿಶೀಲನೆ ನಡೆಸುವ ಮೂಲಕ ಮುಂದೆ ಆಗಬಹುದಾಗಿರುವ ಅನಾಹುತವನ್ನ ತಪ್ಪಿಸಬೇಕಿರುವುದು ಅವಶ್ಯಕವಾಗಿದೆ.

ಕಾಳಿ ಸೇತುವೆಗೆ ಭಾರವಾದ ಕೈಗಾ ಅಣುಸ್ಥಾವರ ಯೋಜನೆ?
ಹೌದು ಕಾಳಿ ನದಿಯ ಸೇತುವೆ ನಿರ್ಮಾಣವಾದ ಬೆನ್ನಲ್ಲೇ‌ ಕೈಗಾದಲ್ಲಿ ಅಣುಸ್ಥಾವರ ಕೂಡ ನಿರ್ಮಾಣವಾಗಿದೆ. ಅಣುಸ್ಥಾವರ‌ ನಿರ್ಮಾಣಕ್ಕಾಗಿ ನಿರಂತರವಾಗಿ ಅನೇಕ ವರ್ಷಗಳ ಕಾಲ‌ ಇದೇ ಸೇತುವೆಯ ಮೇಲೆ ಭಾರೀ ತೂಕದ ಮಷಿನ್ ಹೊತ್ತ ಅದೆಷ್ಟೋ ವಾಹನಗಳು ಇದೆ ಕಾಳಿ ನದಿಯ ಸೇತುವೆಯ ಮೇಲೆ ಸಂಚಾರ ಮಾಡಿದೆ. ಸೇತುವೆಯ ಧಾರಣಾ ಸಾಮರ್ಥ್ಯಕ್ಕಿಂತ ಹೆಚ್ಚಿನ ಭಾರದ ವಾಹನಗಳು ಸಂಚಾರ ಮಾಡಿದ್ದವು ಎಂದು ಸೇತುವೆ ಕುಸಿದ ಬಳಿಕ ಆಡಿಕೊಳ್ಳುತ್ತಿದ್ದಾರೆ. ಇನ್ನೂ ಇದರ ಜೊತೆಗೆ ಎರಡು ದಶಕದ ಹಿಂದೆ ಇದೇ ಸೇತುವೆಯ ಮೇಲೆ ಅದಿರು ತುಂಬಿದ ಸಾವಿರಾರೂ ಲಾರಿಗಳು ಅತೀಯಾದ ಭಾರವನ್ನ ಹೊತ್ತು ಕಾಳಿ ನದಿಯ ಸೇತುವೆಯ ಮೇಲೆ ಸಂಚಾರ ಮಾಡಿದೆ. ಇದರ ಜೊತೆಯಲ್ಲಿ ಗೋವಾದಿಂದ ಕಬ್ಬಿಣದ ರಾಡ್ ತುಂಬಿದ ಮಿತಿ ‌ಮೀರಿದ ಭಾರ ಹೊತ್ತ ಲಾರಿಗಳು ಇದೇ ಸೇತುವೆ ಮೂಲಕ ಮಂಗಳೂರು ಕಡೆ ಚಲಿಸುತ್ತಿದ್ದವು ಇವೆಲ್ಲಾ ಒಂದಿಷ್ಟು ಕಾರಣಗಳು ಸಹ ಸೇತುವೆ ಬೇಗ ಕುಸಿತಕ್ಕೆ ಒಳಗಾಗಿರಬಹುದು ಎನ್ನಲಾಗುತ್ತಿದೆ..ಆದರೆ ಸೇತುವೆ ಕುಸಿತಕ್ಕೆ ಪ್ರಮುಖ ಕಾರಣ ಏನು ಎನ್ನುವ ಬಗ್ಗೆ NHAI,IRB ಎಂಜಿನಿಯರ್ ತಂಡ ಸ್ಪಷ್ಟ ಪಡಿಸಬೇಕಿದೆ.

: