sudddibindu.in
Karwar: ಕಾರವಾರ : ಉತ್ತರ ಕನ್ನಡ(uttar kannada)ಜಿಲ್ಲೆಯ ಬಿಜೆಪಿಯ(BJP) ಮಂಡಲ ಪದಾಧಿಕಾರಿಗಳ ಆಯ್ಕೆ ನಿನ್ನೆಯಷ್ಟೆ ಪೂರ್ಣವಾಗಿದ್ದು, ಇದರ ಬೆನ್ನಲ್ಲೇ ಅಸಮಾಧಾನ ಸ್ಪೋಟಗೊಂಡಿದ್ದು, ರಾಜೀನಾಮೆ ಪರ್ವ ಆರಂಭವಾಗಿದೆ..
ಇದನ್ನು ಓದಿ:-ಚೌಕಡ,ಇಸ್ಪಿಟ್,ಆಟಿಣ್ : ಹನುಮಂತ ದೇವರ ಜಾತ್ರೆಯಲ್ಲಿ ಬಿಂದಾಸ್ ಗುಡುಗುಡಿ
ಜಿಲ್ಲೆಯ ಬಿಜೆಪಿ ಪದಾಧಿಕಾರಿಗಳ ಲಿಸ್ಟ್ ಹೊರ ಬೀಳುತ್ತಿದ್ದಂತೆ ಪಕ್ಷದ ಹಲವು ನಿಷ್ಠಾವಂತ ಹಾಗೂ ಪ್ರಾಮಾಣಿಕ ಕಾರ್ಯಕರ್ತರುಗಳ ಕಡೆಗಡನೆ ಆಗಿರುವುದರಿಂದ ಪಕ್ಷದೊಳಗಿನ ಅಸಮಾಧಾನ ಭುಗಿಲೇಳ ತೊಡಗಿದೆ. ಬಿಜೆಪಿ ಶಿಸ್ತಿನ ಪಕ್ಷ ತತ್ವ ಸಿದ್ಧಾಂತದಡಿಯಲ್ಲಿ ಕೆಲಸ ಮಾಡುತ್ತಿರುವ ಪಕ್ಷ ಎಂಬೆಲ್ಲ ಹೆಗ್ಗಳಿಕೆ ಇರುವುದು ನಿಜ ಪಕ್ಷದಲ್ಲಿ ಕೆಲಸ ಮಾಡುವ ಕಾರ್ಯಕರ್ತರುಗಳು ಕೂಡ ತುಂಬಾ ಪ್ರಾಮಾಣಿಕರು ಹಾಗೂ ಯಾವುದೇ ಫಲಾಪೇಕ್ಷೆ ಇಲ್ಲದೆ ಕೆಲಸ ಮಾಡುವವರಿರುತ್ತಾರೆ. ಆದರೆ ಇತ್ತೀಚೆಗೆ ಜಿಲ್ಲೆಯ ಬಿಜೆಪಿ ಪದಾಧಿಕಾರಿಗಳ ಲಿಸ್ಟ್ ಹೊರ ಬೀಳುತ್ತಿದ್ದಂತೆ ಪಕ್ಷದ ಪ್ರಾಮಾಣಿಕ ಹಾಗೂ ನಿಷ್ಠಾವಂತ ಕಾರ್ಯಕರ್ತರುಗಳನ್ನು ಜಿಲ್ಲೆಯ ಪದಾಧಿಕಾರಿಗಳ ಹಾಗೂ ಮಂಡಲ ಪದಾಧಿಕಾರಿಗಳ ಪಟ್ಟಿಯಿಂದ ಹೊರ ಇಟ್ಟಿರುವುದು ಹಲವರನ್ನ ರೊಚ್ಚಿಗೆಬ್ಬಿಸುವಂತೆ ಮಾಡಿದೆ..
ನೂತನ ಜಿಲ್ಲಾಧ್ಯಕ್ಷ ನೇಮಕದ ಬಳಿಕ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬ ವಾತಾವರಣ ನಿರ್ಮಾಣವಾಗಿದೆ. ಅವರು ಕೇವಲ ಪಟ್ಟಿಯಲ್ಲಿ ಬರೆದದ್ದನ್ನು ಓದಲು ಮಾತ್ರ ಶಕ್ತರೆ ಹೊರತು ಎಲ್ಲರನ್ನು ಕೂಡಿಸಿಕೊಂಡು ಹೋಗಲು ಸಾಧ್ಯವಿಲ್ಲ ಬಿಜೆಪಿಯ ಅನುಭವಿ ಮುಖಂಡರಿಂದ,ಕಾರ್ಯಕರ್ತರು ಸಹ ಆಡಿಕೊಳ್ಳುತ್ತಿದ್ದಾರೆ.ನೂತನ ಅಧ್ಯಕ್ಷರ ನಡವಳಿಕೆಯಿಂದಾಗಿ ಪಕ್ಷವನ್ನ ಈ ಹಿಂದಿನಿಂದ ಕಟ್ಟಿಕೊಂಡು ಬಂದ ಹಿರಿಯರ ಅಸಮಾಧಾನಕ್ಕೆ ಕಾರಣವಾಗಿದೆ. ಜಿಲ್ಲಾಧ್ಯಕ್ಷರ ಸುಳ್ಳು ಆಪಾದನೆಗಳನ್ನ ನಂಬಿ ವಿಭಾಗದವರು ಜಿಲ್ಲೆಯ ಸಂಘಟನೆಯನ್ನು ಹಾಳು ಮಾಡುವ ಅವರ ಕೆಲಸಕ್ಕೆ ಸಾತ್ ನೀಡಿದ್ದು ಈಗಾಗಲೇ ಸಂಘಟನೆ ತಳಮಟ್ಟಕ್ಕೆ ಇಳಿದಿದೆ.
ಪಕ್ಷವನ್ನ ಹಾಳು ಮಾಡಲೆಂದೆ ಹುಟ್ಟಿಕೊಂಡವರ ಮಾತಿಗೆ ಜಿಲ್ಲಾಧ್ಯಕ್ಷರು ಮಣೆ ಹಾಕುತ್ತಿದ್ದು ಪರಿಣಾಮ ಮುಂದಿನ ದಿನದಲ್ಲಿ ಜಿಲ್ಲೆಯಲ್ಲಿ ಪಕ್ಷ ಪಾತಾಳಕ್ಕೆ ಇಳಿಯುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಅನೇಕ ಬಿಜೆಪಿಗರೇ ಮಾತನಾಡಿಕೊಳ್ಳುತ್ತಿರುವುದು ಗುಟ್ಟಾಗಿ ಉಳಿದಿಲ್ಲ.
ಬಿಜೆಪಿ ಅಭ್ಯರ್ಥಿ ವಿರುದ್ಧವೆ ಸೋತ್ತಿದ್ದ ಜಿಲ್ಲಾಧ್ಯಕರು
ಹಾಲಿ ಜಿಲ್ಲಾಧ್ಯಕ್ಷರಾಗಿರುವ ಎನ್ ಎಸ್ ಹೆಗಡೆ ಅವರು ಈ ಹಿಂದೆ ಪಂಚಾಯತ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು.ಆಗ ಬಿಜೆಪಿಯ ಅಭ್ಯರ್ಥಿಯಾದ ನಾಗರಾಜ್ ಗೌಡರ ವಿರುದ್ಧ ಸೋತು ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿರುವುದೇ ಇವರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಇಂತವರನ್ನು ಜಿಲ್ಲಾಧ್ಯಕ್ಷರನ್ನಾಗಿ ಮಾಡಿದಾಗಲೇ ಸಂಘಟನೆ ಹಳ್ಳ ಹಿಡಿಯಲಿದೆ ಅಂದು ಜಿಲ್ಲೆಯ ಅನೇಕ ಅನುಭವಿ ಬಿಜೆಪಿ ಮುಖಂಡರುಗಳು ಆಡಿಕೊಂಡಿದ್ದರು.
ಅದೇನೆ ಇರಲಿ ಪಕ್ಷಕ್ಕಾಗಿ ತಮ್ಮ ಸಂಪೂರ್ಣ ಸಮಯವನ್ನು ಮೀಸಲಿಟ್ಟು ಮನೆ ಮಠ ಬಿಟ್ಟು ಹಗಲಿರುಳು ದುಡಿಯುವ, ಪಕ್ಷಕ್ಕೆ ಆಸ್ತಿಯಾಗಬಲ್ಲ ಹಲವಾರು ಕಾರ್ಯಕರ್ತರುಗಳನ್ನ ಉತ್ತಮ ಜವಾಬ್ದಾರಿ ನೀಡದೇ ಇರುವುದು ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ. ಪದಾಧಿಕಾರಿಗಳ ಪಟ್ಟಿಯಲ್ಲಿ ಪಕ್ಷಕ್ಕಾಗಿ ಕೆಲಸ ಮಾಡದೆ ಇರುವವರು ಕಳೆದ ಚುನಾವಣೆಯಲ್ಲಿ ಪಕ್ಷದ್ರೋಹ ಮಾಡಿದವರು ಇಂಥವರುಗಳಿಗೆ ಮಣೆ ಹಾಕಿದ್ದು ಸಂಘಟನೆ ಮಟ್ಟಷ್ಟು ಹಳ್ಳ ಹಿಡಿಯಲಿದೆ ಎಂದು ಬಿಜೆಪಿಗರೆ ಆಡಿಕೊಳ್ಳುತ್ತಿದ್ದಾರೆ.
ಜಿಲ್ಲೆಯಲ್ಲಿ ಇಷ್ಟೆಲ್ಲಾ ನಡೆಯುತ್ತಿದ್ದರು ಕೂಡ ವಿಭಾಗದವರು ಕಣ್ಮುಚ್ಚಿ ಕುಳಿತಿದ್ದು ಜಿಲ್ಲೆಯ ಅನೇಕರು ಸೇರಿ ಜಿಲ್ಲಾಧ್ಯಕ್ಷರನ್ನು ಬದಲಾಯಿಸಲು ರಾಜ್ಯಾಧ್ಯಕ್ಷರಿಗೆ ದೂರು ನೀಡಲು ಸಿದ್ದರಾಗಿದ್ದಾರೆ ಎಂಬ ವರದಿ ಇದೆ. ಅದರ ಮೇಲು ಯಾವುದೇ ಕ್ರಮ ತೆಗೆದುಕೊಳ್ಳದಿದ್ದರೆ ತಮ್ಮ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳಲು ಹಲವರು ಯೋಚಿಸುತ್ತಿದ್ದಾರೆನ್ನಲಾಗಿದ್ದು, ಈಗಾಗಲೇ ಹಲವಾರು ಜನ ರಾಜೀನಾಮೆ ನೀಡಿದ್ದಾರೆ.
ಒಟ್ಟಿನಲ್ಲಿ ಜಿಲ್ಲೆಯಲ್ಲಿ ಇದುವರಗೆ ಸಾಕಷ್ಟು ಹಿಡಿತ ಇಟ್ಟುಕೊಂಡು ಬಂದ ಬಿಜೆಪಿ ಈಗ ಜಿಲ್ಲಾಧ್ಯಕ್ಷರ ಸರ್ವಾಧಿಕಾರಿ ಧೋರಣೆಯ ಪರಿಣಾಮ ಸಂಪೂರ್ಣವಾಗಿ ಹಿಡಿತ ಕಳೆದು ಕೊಳ್ಳುವ ದಿನಗಳ ಎದುರಾದಂತೆ ಕಾಣುತ್ತಿದೆ.ಹೀಗಾಗಿ ಓರ್ವರಿಂದ ಪಕ್ಷ ಹಾಳಾಗುವುದನ್ನ ತಪ್ಪಿಸಲು ರಾಜ್ಯ ಬಿಜೆಪಿ ನಾಯಕರು ಮಧ್ಯಪ್ರವೇಶಿಸಬೇಕಿರುವುದು ತೀರಾ ಅನಿವಾರ್ಯವಾಗಿದೆ.