ಸುದ್ದಿಬಿಂದು ಬ್ಯೂರೋ
ಕುಮಟಾ : “ಶಾಸಕರು ಲಗಾಮು ಇಲ್ಲದೆ ಮಾತನಾಡುತ್ತಿದ್ದಾರೆ. ಶಾಸಕರು ಮೊದಲು ಮಾತು ಹಿಡಿತದಲ್ಲಿ ಇಟ್ಟುಕೊಳ್ಳುವುದನ್ನು ಕಲಿಯಬೇಕು, ಅಧಿಕಾರಿಯೊಬ್ಬರ ಶರ್ಟ್ ಹಿಡಿದು ಎಳೆತರುತ್ತೇನೆ ಎಂದು ಹೇಳಿದ್ದಾರೆ. ಇದು ಶಾಸಕರ ಗೂಂಡಾಗಿರಿ ವರ್ತನೆ ಅಲ್ಲದೆ ಬೇರೇನೋ ಸೂಚಿಸುತ್ತದೆ. ಕಾನೂನಿನ ಅಡಿಯಲ್ಲಿ ಅವರ ಶರ್ಟ್ ಹಿಡಿಯುವ ಕೆಲಸ ನಾವು ಮಾಡಬೇಕಾಗಿ ಬರುತ್ತದೆ. ಬೇರೆಯವರಿಗೆ ಗೂಂಡಾಗಳು ಎಂದು ಹೇಳುವ ಇವರೇ ಗೂಂಡಾವರ್ತನೆ ನಡೆಸುತ್ತಿದ್ದಾರೆ” ಎಂದು ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ ಶಾಸಕ ದಿನಕರ ಶೆಟ್ಟಿ ವಿರುದ್ಧ ಗುಡುಗಿದ್ದಾರೆ.
ಪಟ್ಟಣದ ಜೆಡಿಎಸ್ ಕಾರ್ಯಾಲಯದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸೂರಜ್ ನಾಯ್ಕ, ಶಾಸಕನಾದವನು ಶಾಸಕನಾಗಿ ವರ್ತಿಸಬೇಕು, ಅದನ್ನು ಬಿಟ್ಟು ತಾನೊಬ್ಬ ಶಾಸಕ ಎಂದು ಬಾಯಿಗೆ ಬಂದಂತೆ ಮಾತನಾಡಿದರೆ ಸುಮ್ಮನೆ ಕೂರಲು ಸಾಧ್ಯವಿಲ್ಲ. ಕ್ಷೇತ್ರದ ಜನರು ಬುದ್ಧಿವಂತರಿದ್ದಾರೆ. ಅವರೇ ಇದಕ್ಕೆಲ್ಲಾ ಉತ್ತರಿಸಬೇಕಾದ ದಿನ ಬರಬಹುದು. ನಿಮ್ಮ ಶರ್ಟ್ ಹಿಡಿಯಲು ಸಿದ್ಧರಾಗಿದ್ದೇವೆ. ಇದು ಪಾಳೆಗಾರಿಕೆ ಅಲ್ಲ. ನೀವೊಬ್ಬ ಜನಸೇವಕ. ನಿಮ್ಮ ವರ್ತನೆಯನ್ನು ಜನ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಅದು ಯಾವ ಮಾರ್ಗದಲ್ಲಿ ಗೆದ್ದಿದ್ದಾರೋ ಗೊತ್ತಿಲ್ಲ. ಹೀನಾಯವಾಗಿ ಸೋತಿರುವವರಂತೆ ವರ್ತಿಸುತ್ತಿದ್ದಾರೆ. ಪಕ್ಷದ ಕಾರ್ಯಕರ್ತರು ಹಾಗೂ ಜನಸಾಮಾನ್ಯರ ವಿರುದ್ಧ ಮನಸ್ಸಿಗೆ ಬಂದವರಂತೆ ಮಾತನಾಡುತ್ತಿದ್ದಾರೆ. ಶಾಸಕರಿಗೆ ಅವರ ಕಾರ್ಯಕರ್ತರು ಹಾಗೂ ಜನಸಾಮಾನ್ಯರ ಮೇಲೆನೇ ಭರವಸೆ ಇಲ್ಲ ಎಂದು ಕೆಳಮಟ್ಟದ ಮಾತನಾಡುತ್ತೀರಿ. ಶಾಸಕರ ವರ್ತನೆಯನ್ನು ನನ್ನ ವೈಯಕ್ತಿಕವಾಗಿ, ಪಕ್ಷದ ಪರವಾಗಿ ಹಾಗೂ ಗೆಳೆಯರ ಪರವಾಗಿ ಮತ್ತು ಕ್ಷೇತ್ರದ ಸಮಸ್ತ ಜನತೆಯ ಪರವಾಗಿ ಖಂಡಿಸುತ್ತೇನೆ'' ಎನ್ನುವ ಮೂಲಕ
ಮೊದಲು ಜನಸೇವಕರಾಗಿ ಇರುವುದನ್ನು ಕಲಿಯಿರಿ” ಎಂದು ಕಿವಿ ಹಿಂಡಿದ್ದಾರೆ.