ಸುದ್ದಿಬಿಂದು ಬ್ಯೂರೋ
ಶಿರಸಿ: ಕಳೆದ ಕೆಲ ವರ್ಷಗಳ ಹಿಂದೆ ಒಬ್ಬರೇ ಬಾವಿ ತೋಡುವ ಮೂಲಕ ಬೆರಗು ಮೂಡಿಸಿದ್ದ ಮಹಿಳೆ ಓರ್ವರು ಇದೀಗ ಅಂಗನವಾಡಿ ‌ಮಕ್ಕಳ‌ ಬಾಯಾರಿಕೆ ನಿಗಿಸಲು ಮತ್ತೆ‌ ಒಬ್ಬರೆ ಬಾವಿ ತೆಗೆಯುವ ಕಾರ್ಯಕ್ಕೆ ಮುಂದಾಗಿದ್ದಾರೆ.ಆ ಸಾಹಸಿ ಮಹಿಳೆ ಕುರಿತಾದ ಒಂದು ವರದಿ ಇಲ್ಲದೆ.

ಉತ್ತರಕನ್ನಡ ಜಿಲ್ಲೆಯ ಶಿರಸಿಯ ಗಣೇಶ ನಗರದ ಗೌರಿ ನಾಯ್ಕ ಎಂಬ ಮಹಿಳೆಯೆ ಈ ಸಾಹಸಕ್ಕೆ‌ ಕೈ ಹಾಕಿದ್ದಾರೆ. 55 ವರ್ಷದ ಗೌರಿ ನಾಯ್ಕ‌ ಅವರ ಉತ್ಸಾಹ, ಸಾಹಸ ನಿಜಕ್ಕೂ ಪ್ರತಿಯೊಬ್ಬರು ಮೆಚ್ಚಲೆ‌ ಬೇಕು.ಗಣೇಶ ನಗರದ ಅಂಗನವಾಡಿ ಕೇಂದ್ರ-6ರ ಆವಾರದ ಹಿಂಬದಿಯಲ್ಲಿ ಓರ್ವ ಮಹಿಳೆ‌ ಯಾರ ಸಹಾಯವಿಲ್ಲದೆ‌ ಬಾವಿ ತೋಡುವ ಕೆಲಸ ಮಾಡುತ್ತಿದ್ದಾರೆ. ಕಳೆದ ಒಂದು ವಾರದಿಂದ ಗೌರಿ ನಾಯ್ಕ, ಗಂಗೆ ಹರಿಸಲು ಪ್ರಯತ್ನಿಸುತ್ತಿದ್ದಾರೆ. ಇದುವರೆಗೆ ಎಂಟು ಅಡಿ ಬಾವಿ ತೆಗೆದಿದ್ದಾರೆ. ಗಣೇಶನಗರ ಹುತ್ತಾರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಪ್ರದೇಶದಲ್ಲಿ ಪ್ರತಿ ಬಾರಿ ಬೆಸಿಗೆಯಲ್ಲಿ ನೀರಿನ ಬವಣೆ ಎದುರಾಗುತ್ತದೆ. ಗ್ರಾಮ ಪಂಚಾಯಿತಿಯಿಂದ ನೀರು ಪೂರೈಕೆಯಾದರೂ ಸ್ಥಳೀಯವಾಗಿ ನೀರಿನ ಮೂಲ ಸಿಗುತ್ತಿಲ್ಲ. ಹೀಗಾಗಿ ಬೇಸಿಗೆ ಬಂತೆಂದರೆ ನೀರಿನ ಬವಣೆ ಶುರುವಾಗುತ್ತದೆ. ಸಾಕಷ್ಟು ಬಾವಿ, ಬೋರ್‌ವೆಲ್‌ಗಳಲ್ಲಿ ನೀರಿನ ಲಭ್ಯತೆಯಿಲ್ಲದೇ ತೊಂದರೆಯಾಗಿದೆ. ಇಂತಹ ಪ್ರದೇಶದಲ್ಲಿ ಮಣ್ಣನ್ನು ಅಗೆದು ಸುಮಾರು 4 ಅಡಿ ಸುತ್ತಳತೆಯ ಬಾವಿ ತೆಗೆದು ನೀರು ಹರಿಸುವ ಪ್ರಯತ್ನಕ್ಕೆ ಮಹಿಳೆ ಮುಂದಾಗಿದ್ದಾರೆ.

ರಾಜ್ಯ ಸರ್ಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಇವರನ್ನ ಸನ್ಮಾನಿಸಿದೆ. ಗೌರಿ ನಾಯ್ಕ ಕಳೆದ ಆರು ವರ್ಷಗಳ ಹಿಂದೆ‌ ತಮ್ಮ‌ ಮನೆಯ ಹಿಂಬದಿಯಲ್ಲಿ 65ಅಡಿ ಆಳದ ಬಾವಿ ತೋಡಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಮನೆಯ ಹಿಂಬದಿಯಲ್ಲಿ ಸುಮಾರು 45 ಅಡಿ ಆಳದ ಇನ್ನೊಂದು ಬಾವಿ ತೋಡಿದ್ದಾರೆ. ಈಗ ಅಂಗನವಾಡಿಯ ನೀರಿನ ತೊಂದರೆ ನೀಗಿಸಿಲು ಇನ್ನೊಂದು ಬಾವಿ ತೆಗೆಯುವ ಸಾಹಸಕ್ಕೆ ಮಾಡುತ್ತಿದ್ದಾರೆ