ಸುದ್ದಿಬಿಂದು ಬ್ಯೂರೋ
ಕುಮಟಾ : ರಸ್ತೆ ಕಾಮಗಾರಿ ನಡೆಸುತ್ತಿದ್ದ ಗುತ್ತಿಗೆ ಕಂಪನಿಯ ಲಾರಿಗಳಿಂದ ಬ್ಯಾಟರಿ ಕದ್ದಿದ್ದ ಇಬ್ಬರು ಆರೋಪಿಗಳನ್ನು ಕದ್ದ ಬ್ಯಾಟರಿ ಸಮೇತ ಕುಮಟಾ ಪೊಲೀಸರು ಬಂಧಿಸಿದ್ದಾರೆ.

ಕತಗಾಲದ ಕಪ್ಪೆಗುಳಿಯ ನಿವಾಸಿಗಳಾದ ಪ್ರಸಾದ ನಾಗರಾಜ ಮುಕ್ರಿ(24), ಮಣಿಕಂಠ ತಿಮ್ಮಪ್ಪ ಮುಕ್ರಿ (24) ಬಂಧಿತ ಆರೋಪಿಗಳಾಗಿದ್ದಾರೆ.

ಉತ್ತರಕನ್ನಡ ಜಿಲ್ಲೆಯ ಕುಮಟಾ-ಶಿರಸಿ ರಸ್ತೆ ಕಾಮಗಾರಿ ನಡೆಸುತ್ತಿರುವ ಆರ್‌ಎನ್‌ಎಸ್ ಇನ್ಸಾಸ್ಟಕ್ಟರ್ ಕಂಪನಿಯ ಎರಡು ಲಾರಿಗಳು ಜುಲೈ 24ರಂದು ರಾತ್ರಿ ಕಪ್ಪೆಗುಳಿಯ ಕ್ಯಾಂಪ್ ಸೈಟಿನಲ್ಲಿ ನಿಂತಿದ್ದಾಗ ಒಟ್ಟೂ 60 ಸಾವಿರರೂ. ಮೌಲ್ಯದ ಎಕ್ಸೆಡ್ ಕಂಪನಿಯ 4 ಬ್ಯಾಟರಿಗಳನ್ನು ಕಳುವು ಮಾಡಲಾಗಿತ್ತು.ಈ ಕುರಿತು ಪ್ರಕರಣ ದಾಖಲಾಗಿತ್ತು.