ಸುದ್ದಿಬಿಂದು ಬ್ಯೂರೋ
ಬೆಂಗಳೂರು : ಚಂದ್ರನಲ್ಲಿ ವಿಕ್ರಂ ಇದೆ ಅಗಸ್ಟ್ ,23, 2023ರಂದು ಯಶಸ್ವಿಯಾಗಿ ಲ್ಯಾಂಡ್ ಆಗಿದ್ದು, ಈಡಿ ಭಾರತೀಯರಿಗೆ ಸಂತಸ ತಂದಿದೆ.ಇದೀಗ ಈ ದಿನವನ್ನ ರಾಷ್ಟೀಯ ಸ್ಫೇಸ್ ಡೇ(National Space Day) ಎಂದು ದೇಶದ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಘೋಷಣೆ ಮಾಡಿದ್ದಾರೆ..
ಇಂದು ಶನಿವಾರ ಬೆಂಗಳೂರಿನಲ್ಲಿರುವ ಇಸ್ರೋ ಕಚೇರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೋ ವಿಜ್ಞಾನಿಗಳನ್ನ ಅಭಿನಂದಿಸಿದ್ದಾರೆ. ಈ ವೇಳೆ ಮಾತ್ನಾಡಿದ ಮೋದಿ ಪೀಣ್ಯದ ಇಸ್ರೋ ಕಮಾಂಡ್ ಸೆಂಟರ್ನಲ್ಲಿ ಇಸ್ರೋ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ನಿಮ್ಮನ್ನು ಭೇಟಿಯಾಗಿದ್ದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ.
ಇಸ್ರೋ ವಿಜ್ಞಾನಿಗಳ (ISRO Scientists) ಸಾಧನೆಗೆ ಇಡೀ ದೇಶವೇ ಹೆಮ್ಮೆಪಡುತ್ತಿದೆ ಎಂದು ಹೇಳಿದರು. ಅವರು ಚಂದ್ರನಲ್ಲಿ ವಿಕ್ರಮ್ ಲ್ಯಾಂಡ್ ಆಗಿರುವ ದಿನವನ್ನ ರಾಷ್ಟೀಯ ಸ್ಫೇಸ್ ಡೇ ಎಂದು ಘೋಷಣೆ ಮಾಡಿದ್ದಾರೆ. ಅಲ್ಲದೆ ವಿಕ್ರಮ್ ಲ್ಯಾಂಡ್ ಆಗುರುವ ಸ್ಥಳಕ್ಕೆ ‘ಶಿವಶಕ್ತಿ’ ಎಂದು ನಾಮಕರಣ ಮಾಡಿದ್ದಾರೆ. ಇನ್ನೂ ಚಂದ್ರಯಾನ -2ಸ್ಪರ್ಶಿಸಿದ ಸ್ಥಳಕ್ಕೂ ನಾಮಕರಣ ಮಾಡಿದ್ದು, ಅದಕ್ಕೆ ‘ತಿರಂಗಾ’ ಎಂದು ಘೋಷಣೆ ಮಾಡಿದ್ದಾರೆ.
ದೃಢ ಇಚ್ಚಾಶಕ್ತಿ ಇದಕ್ಕೆ ಖಂಡಿತಾ ಫಲ ಸಿಗುತ್ತದೆ. ಇದಕ್ಕೆ ನಮ್ಮ ಇಸ್ರೋ ವಿಜ್ಞಾನಿಗಳೆ ಸಾಕ್ಷಿ, ವಿಜ್ಞಾನಿಗಳು ಇಷ್ಟೇಲ್ಲಾ ಕಷ್ಟ ಪಟ್ಟ ಬಳಿಕ ಯಶಸ್ಸು ಸಿಕ್ಕಿದೆ. ನಮ್ಮ ಹಲವು ಯೋಜನೆಗಳು ಬಾಹ್ಯಾಕಾಶವನ್ನ ಅವಲಂಬಿಸಿದೆ. ದೇಶದ ಜನತೆ ವಿಜ್ಞಾನಿಗಳ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಯಾವುದೇ ವೈಫಲ್ಯವು ಅಂತಿಮ ಅಲ್ಲ ಎನ್ನಿಸುತ್ತದೆ.