ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಭಾರತೀಯ ಜನತಾ ಪಕ್ಷದ ನಿಷ್ಠಾವಂತ ಕಾರ್ಯಕರ್ತನ ಮೇಲೆ ತಾಯಿ-ಮಗ ಸೇರಿಕೊಂಡು ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಧಾರವಾಡ ಜಿಲ್ಲೆಯ ತಾಲೂಕಿನ ಅಣ್ಣಿಗೇರಿ ಹಳ್ಳಿಕೇರಿ ಗ್ರಾಮದಲ್ಲಿ ಸಂಭವಿಸಿದೆ.

ಮೃತ್ಯುಂಜಯ ದಿಂಡಿ ಎಂಬಾತನೇ ಗಂಭೀರವಾಗಿ ಗಾಯಗೊಂಡಿದ್ದು, ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.ಕಂಪೌಂಡ್ ನಿರ್ಮಾಣದ ವೇಳೆಯಲ್ಲಿ ಪಕ್ಕದ ಮನೆಯ ನಿಂಗಪ್ಪ ದೇವಪ್ಪ ಗುಲಗಂಜಿ ಹಾಗೂ ಹನಮವ್ವ ಗುಲಗಂಜಿ ಕೂಡಿಕೊಂಡು, ಕಣ್ಣಿಗೆ ಖಾರದ ಪುಡಿ ಎರಚಿ,ಕೊಡಲಿ ಹಾಗೂ ಕುಡಗೋಲಿಂದ ಹಲ್ಲೆ ಮಾಡಿದ್ದು, ಅದೃಷ್ಟವಶಾತ್ ಮೃತ್ಯುಂಜಯ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಘಟನೆಗೆ ಸಂಬಂಧಿಸಿದಂತೆ ನಿಂಗಪ್ಪ ಗುಲಗಂಜಿಯನ್ನ ಅಣ್ಣಿಗೇರಿ ಠಾಣೆಯ ಪೊಲೀಸರು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಮಹಿಳೆಗಾಗಿ ಜಾಲ ಬೀಸಿದ್ದಾರೆ.

ಗಮನಿಸಿ