ಸುದ್ದಿಬಿಂದು ಬ್ಯೂರೋ
ಕಾರವಾರ :
ಮೊದಲ ಬಾರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಮಂತ್ರಿಯಾಗಿ ಪ್ರಮಾಣವನ ಸ್ವೀಕರಿಸಿದ ಸೊರಬಾ ಕ್ಷೇತ್ರದ ಶಾಸಕ,ಸಚಿವ ಮಧು ಬಂಗಾರಪ್ಪ ಅವರನ್ನ ಮಾವ ಶಿರಸಿ ಕ್ಷೇತ್ರದ ನೂತನ ಶಾಸಕ ಭೀಮಣ್ಣ ನಾಯ್ಕ ಅವರು ತಮ್ಮ ಅಳಿಯ ಮಧು ಬಂಗಾರಪ್ಪ ಅವರನ್ನ ಬಿಗಿದಪ್ಪಿ ಅಭಿನಂದನೆ ಸಲ್ಲಿಸಿದ್ದಾರೆ.

ಮಧು ಬಂಗಾರಪ್ಪ ಅವರು ಶಾಸಕ ಭೀಮಣ್ಣ ನಾಯ್ಕ ಅವರ ಅಕ್ಕನ ಮಗನಾಗಿದ್ದು, ತಮ್ಮ ಅಳಿಯ ಮಧು ಬಂಗಾರಪ್ಪ ಸಚಿವರಾಗಿ ಮೊದಲ ಬಾರಿಗೆ ಪ್ರಮಾಣವಚನ ಸ್ವೀಕರಿಸಿರುವುದು ಮಾವ ಭೀಮಣ್ಣ ನಾಯ್ಕ ಅವರಿಗೆ ಖುಷಿ ತಂದಿದೆ‌. ಈ ಭಾರಿ ಮಾವ-ಅಳಿಯ ಇಬ್ಬರೂ ವಿಧಾನಸಭೆ ಪ್ರವೇಶಿಸಿದ್ದಾರೆ.ಮಧು ಬಂಗಾರಪ್ಪ ಅವರು ಈ ಹಿಂದೆ ಒಮ್ಮೆ ಶಾಸಕರಾಗಿದ್ದರು ಸಚಿವರಾಗಿರಲಿಲ್ಲ. ಆದರೆ ಇದೀಗ ಎರಡನೇ ಭಾರೀ ಆಯ್ಕೆ ಆದ ಇವರು ಸಚಿವರಾಗಿದ್ದಾರೆ‌.

ದಿ. ಎಸ್ ಬಂಗಾರಪ್ಪ ಅವರು ರಾಜ್ಯದ ಮುಖ್ಯಮಂತ್ರಿ ಹುದ್ದೆ ಸೇರಿದಂತೆ ರಾಜ್ಯ ಸಚಿವ ಸಂಪುಟದಲ್ಲಿ ಹಲವು ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು, ಅವರ ಬಳಿಕ ಸರಿಸುಮಾರು ಎರಡು ದಶಕದ ಬಳಿಕ ಇದೀಗ ಮತ್ತೆ ಬಂಗಾರಪ್ಪ ಅವರ ಕುಟುಂಬಕ್ಕೆ ರಾಜ್ಯ ಸರಕಾರದಲ್ಲಿ ಮಂತ್ರಿಸ್ಥಾನ ಸಿಕ್ಕಂತಾಗಿದೆ.