ಸುದ್ದಿಬಿಂದು ಬ್ಯೂರೋ
ಹಳಿಯಾಳ :
ದಾಂಡೇಲಿ ಅರಣ್ಯವ್ಯಾಪ್ತಿಯ ಕುಳಗಿ-ಭಾಗವತಿಯಲ್ಲಿ ರಸ್ತೆ ದಾಟುತ್ತಿದ್ದ ಆನೆ ಹಿಂಡಯಗಳನ್ನ‌ ಕಂಡು ಪ್ರಯಾಣಿಕರು ಭಯಭೀತರಾಗಿ ಕೆಲ ಸಮಯ ರಸ್ತೆಯಲ್ಲಿಯೆ ನಿಂತ ಘಟನೆ ನಡೆದಿದೆ‌.

ದಾಂಡೇಲಿ ಅರಣ್ಯವ್ಯಾಪ್ತಿಯ ಕುಳಗಿ ಭಾಗವತಿ ರಸ್ತೆಯಲ್ಲಿ ಎರಡು ಆನೆ ಮರಿಗಳ ಜೊತೆಗೆ ಹತ್ತಕ್ಕೂ ಹೆಚ್ಚು ಆನೆಗಳ ಹಿಂಡು ರಸ್ತೆಯನ್ನ ದಾಟುತ್ತಿದ್ದು, ಇದೇ ವೇಳೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರು ಕೆಲ ಸಮಯ ಭಯ ಭೀತರಾಗಿದ್ದರು. ಈ ವೇಳೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಆನೆ ದಾಡುತ್ತಿರುವ ದೃಶ್ಯವನ್ನ ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.

ಈ ಆನೆ ಹಿಂಡು ಆಹಾರವನ್ನ ಅರೆಸಿ ಒಂದು ಕಡೆಯಿಂದ ಇನ್ನೊಂದು ಕಡೆ ಓಡಾಟ ನಡೆಸುತ್ತಿರಬಹುದು ಎನ್ನಲಾಗಿದೆ.