ಸುದ್ದಿಬಿಂದು ಬ್ಯೂರೋ ವರದಿ
ಜೋಯಿಡಾ : ಹಣ ಮಾಡುವ ಹಪಹಪಿತನಕ್ಕೆ ಬಿದ್ದಿರುವ ಬೋಟಿಂಗ್ ಮಾಲೀಕರು ಇಲಾಖೆ ನೀಡಿರುವ ನಿಯಮವನ್ನೆ ಗಾಳಿಗೆ ತೂರಿ ಪ್ರವಾಸಿಗರ ಜೀವದ ಜೊತೆ ಚಲ್ಲಾಟಕ್ಕೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.
ಉತ್ತರಕನ್ನಡ ಜಿಲ್ಲೆಯಲ್ಲಿನ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಇಲಾಖೆ ಪ್ರತಿಯೊಂದು ಚಟುವಟಿಕೆಗೂ ಕಟ್ಟುನಿಟ್ಟಿನ ನಿಯಮದೊಂದಿಗೆ ಅವಕಾಶ ನೀಡಿದೆ. ಆದರೆ ದಾಂಡೇಲಿಯ ಗಣೇಶಗುಡಿಯ ಇಳವಾದಲ್ಲಿ ಬೋಟಿಂಗ್ ನಡೆಸುವ ಮಾಲೀಕರು ಹಣ ಮಾಡುವ ಹಪಹಪಿತನದಲ್ಲಿ ಪ್ರವಾಸೋದ್ಯಮ. ಇಲಾಖೆ ನೀಡಿರುವ ನಿಮಾವಳಿಯನ್ನ ಗಾಳಿಗೆ ತೂರಿ ನಿಯಮಬಾಹಿರವಾಗಿ ಬೋಟಿಂಗ್ ಮಾಡುವ ವೇಳೆ ಜಾತ್ರೆಯಂತೆಯಲ್ಲಿ ಜನ ನುಗ್ಗಿದಂತೆ ಚಿಕ್ಕಮಕ್ಕಳು ಸೇರಿದಂತೆ ಬೋಟ್ ಸಾಮರ್ಥ್ಯಕ್ಕಿಂತ ಅಧಿಕ ಪ್ರವಾಸಿಗರನ್ನ ತುಂಬಿಕೊಂಡು ಬೋಟಿಂಗ್ ನಡೆಸುತ್ತಿದ್ದಾರೆ.
ಪ್ರವಾಸೋದ್ಯಮ ಇಲಾಖೆ ನೀಡಿರುವ ನಿಯಮದಂತೆ ಸಣ್ಣ ಮಕ್ಕಳನ್ನು ಬೋಟಿಂಗ್ ಗೆ ಕರೆದೊಯ್ಯುವಂತಿಲ್ಲ. ಆದರೆ ಇಲ್ಲಿ ಬೋಟ್‌ನ ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರನ್ನ ಹತ್ತಿಸಿಕೊಂಡು ಬೋಟಿಂಗ್ ನಡೆಸುವುದರೊಂದಿಗೆ ಪುಟ್ಟಪುಟ್ಟ ಮಕ್ಕಳನ್ನು ಸಹ ತೆಗೆದುಕೊಂಡು ಹೋಗಲಾಗುತ್ತಿದೆ. ಈ ಹಿಂದೆ ಸಹ ಇದೆ ರೀತಿ ಆಗಿದ್ದ ವೇಳೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಆದರೂ ಸಹ ಬೋಟಿಂಗ್ ದಂಧೆ ನಡೆಸುವ ಮಾಲೀಕರು ಇಲಾಖೆಯ ಕಣ್ಣತಪ್ಪಿಸಿ ಪದೆ ಪದೆ ಇಂತಹ ಕೆಲಸ ಮಾಡುತಲ್ಲೆ ಇರುತ್ತಾರೆ. ಇಲಾಖೆಯ ನಿಯಮ ಮೀರಿ ಬೋಟಿಂಗ್ ಮಾಡುವ ಸಂದರ್ಭದಲ್ಲಿ ಏನಾದರೂ ಅವಘಡಗಳು ನಡೆದೆ ಅದಕ್ಕೆ ಯಾರು ಹೊಣೆ.? ನಿಮಾವಳಿ ಮೀರಿ ಬೋಟಿಂಗ್ ಸೇರಿದಂತೆ ಉಳಿದ ಯಾವೇಲ್ಲಾ ಚಟುವಟಿಕೆ ನಡೆಸುತ್ತಿದ್ದಾರೆ ಅಂತಹವರ ಮೇಲೆ ಪ್ರವಾಸೋದ್ಯಮ ಇಲಾಖೆ ತಕ್ಷಣ ಸೂಕ್ತ ಕ್ರಮ ಜರಗಿಸಬೇಕಿದೆ..ಇಲ್ಲದೆ ಹೋದರೆ ಹಣ ಮಾಡುವ ಈ ದಂಧೆಕೋರರು ಜಿಲ್ಲೆಯ ಪ್ರವಾಸೋದ್ಯಮ ಇಖೆಗೆ ಕಪ್ಪುಚುಕ್ಕೆ ತರುವುದರಲ್ಲಿ ಎರಡು ಮಾತಿಲ್ಲ..
ಗಮನಿಸಿ