ಕಾರವಾರ : ರಾಜ್ಯವಿಧಾಸಭಾ ಚುನಾವಣೆಗೆ ಇನ್ನೂ ಕೆಲವೆ ದಿನಗಳು ಬಾಕಿ ಉಳಿದಿದ್ದು, ಚುನಾವಣಾ ಆಯೋಗ ದಿನಾಂಕವನ್ನ ಘೋಷಣೆ ಮಾಡುವೊಂದೆ ಬಾಕಿ ಇದೆ. ಈ ನಡುವೆ ಕಾಂಗ್ರೆಸ್ ನಾಳೆಯೇ ತಮ್ಮ ಪಕ್ಷದ 100ರಿಂದ 120 ಕ್ಷೇತ್ರದ ಅಭ್ಯರ್ಥಿಗಳ ಹೆಸರನ್ನ ಘೋಷಣೆ ಮಾಡುವ. ಸಾಧ್ಯತೆ ಇದ್ದು, ಇದರಲ್ಲಿ ಉತ್ತರ ಕನ್ನಡ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿ ಘೋಷಣೆ ಆಗುವ ಸಾಧ್ಯತೆ ಸಹ ಇದೆ.
ಈಗಾಗಲೇ ರಾಜ್ಯದಲ್ಲಿ ಐವತ್ತಕ್ಕೂ ಹೆಚ್ಚು ಕ್ಷೇತ್ರದಲ್ಲಿ ಟಿಕೇಟ್ ಗಾಗಿ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಅದರಲ್ಲಿ ಹತ್ತು ಕ್ಷೇತ್ರದ ಅಭ್ಯರ್ಥಿಗಳ ಕಗ್ಗಂಟು ಸಂಧಾನದ ಮೂಲಕ ಬಗೆಹರಿದಿದೆ ಎನ್ನಲಾಗಿದೆ. ನಾಳೆ ದೆಹಲಿಯಲ್ಲಿ ಕೇಂದ್ರ ಚುನಾವಣಾ ಸಮಿತಿ ಮಿಟಿಂಗ್ ನಡೆಯಲ್ಲಿದ್ದು, ಈ ಸಭೆಯಲ್ಲಿ ಉಳಿದ ಕ್ಷೇತ್ರದಲ್ಲಿ ಟಿಕೇಟ್ ಕಗ್ಗಂಟು ಬಗೆಹರಿಯುವ ಸಾಧ್ಯತೆ ಸಹ ಇದೆ.
ಇನ್ನೂ ಉತ್ತರಕನ್ನಡ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಎರಡು ಕ್ಷೇತ್ರದ ಅಭ್ಯರ್ಥಿಗಳ ಹೆಸರು ಘೋಷಣೆ ಆಗುವ ಸಾಧ್ಯತೆ ಇದೆ. ಪ್ರಮುಖವಾಗಿ ಕಾರವಾರ ಹಾಗೂ ಭಟ್ಕಳ ಈ ಎರಡು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ನಾಳೆ ಬಿಡುಗಡೆ ಮಾಡುವ ಮೊದಲ ಲಿಸ್ಟ್ ನಲ್ಲೇ ಹೊರಬಿಳುವ ಸಾಧ್ಯತೆ ಇದೆ.
ಕಾರವಾರ ಕ್ಷೇತ್ರದಿಂದ ಸತೀಶ ಸೈಲ್ ಹಾಗೂ ಭಟ್ಕಳ ಕ್ಷೇತ್ರದಲ್ಲಿ ಮಂಕಾಳು ವೈದ್ಯ ಅವರ ಹೆಸರು ಫೈನಲ್ ಆಗಲಿದೆ ಎಂದು ಕಾಂಗ್ರೆಸ್ ಮೂಲಗಳಿಂದ ತಿಳಿದು ಬಂದಿದೆ.