ಸುದ್ದಿಬಿಂದು ಬ್ಯೂರೋ
ಅಂಕೋಲಾ : ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ ಇತ್ತೀಚಿನ ದಿನದಲ್ಲಿ ‌ಮಹಿಳೆಯರ, ಯುವತಿಯರ ನಾಪತ್ತೆ ಪ್ರಕರಣ ಹೆಚ್ಚಾಗಿದೆ. ಒಂದೇ ತಿಂಗಳಲ್ಲಿ ನಾಲ್ವರು ಯುವತಿಯರು ಹಾಗೂ ಓರ್ವ ‌ಮಹಿಳೆ ನಾಪತ್ತೆಯಾಗಿರುವುದು ಪೊಲೀಸ್ ಇಲಾಖೆಯಲ್ಲಿ ದಾಖಲಾಗಿರುವ ದೂರಿನಿಂದ ಗೋತ್ತಾಗಿದೆ.

ಕುಮಟಾದ ನೆಲ್ಲಿಕೇರಿ ಕಾಲೇಜಿಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದ ವಿದ್ಯಾರ್ಥಿನಿ 17ವರ್ಷದ ಶ್ವೇತಾ ನಾಯ್ಕ ಇದೇ ತಿಂಗಳ 7ರಂದು ಮನೆಯಿಂದ‌ ಕಾಲೇಜಿಗೆ ಹೋಗಿದ್ದವಳು ಮನೆಗೆ ಬಾರದೆ ನಾಪತ್ತೆಯಾಗಿದ್ದಾಳೆ.

ಇನ್ನೂ ಅಂಕೋಲಾ‌ ತಾಲೂಕಿನ ಶಟಗೇರಿಯಲ್ಲಿರುವ ತನ್ನ‌ ಮನೆಯಲ್ಲಿ ರಾತ್ರಿ ಊಟ ಮಾಡಿ‌‌ ಮಲಗಿಕೊಂಡಿದ್ದ 17ವರ್ಷದ ಸಾವಿತ್ರಿ ಹನುಮಂತ ಪಂಚಪುತ್ರ ಎಂಬಾಕೆ ನಾಪತ್ತೆಯಾಗಿದ್ದು, ನಾಪತ್ತೆಯಾಗಿರುವ ಯುವತಿಯನ್ನ ಹುಡುಕಿಕೊಡುವಂತೆ ಅಂಕೋಲಾ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುರುಡೇಶ್ವರದ ಆರ್ ಎನ್‌ಎಸ್ ಕಾಲೇಜಿಗೆ ಹೋಗಿದ್ದ 18ವರ್ಷದ ವಿದ್ಯಾರ್ಥಿನಿ ಕಾಲೇಜಿನಿಂದ ಮನೆಗೆ ಬಾರದೆ ಸಂಬಂಧಿಕರ ಮನೆಗೂ ಬಾರದೆ ನಾಪತ್ತೆಯಾಗಿದ್ದರುವ ಬಗ್ಗೆ ದೂರು ದಾಖಲಾಗಿತ್ತು. ಆದರೆ ಇದೀಗ ಮನೆಗೆ ವಾಪಸ‌ ಆಗಿದ್ದಾರೆ.

ಶಟಗೇರಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ವಿವಾಹಿತ ಮಹಿಳೆಯಾಗಿರುವ 32ವರ್ಷದ ಸಾವಿತ್ರಿ ಈಶ್ವರ ಮೇಸ್ತಾ ಇವಳು ತನ್ನ 12ವರ್ಷದ ಮಗಳಾಗಿರುವ ದೀಪಿಕಾ ಮೇಸ್ತಾಳ ಜೊತೆ ಮನೆಯಿಂದ ಹೊರಗಡೆ ಹೋದವಳು ಮನೆಗೆ ಬಾರದೆ ನಾಪತ್ತೆಯಾಗಿದ್ದು, ಈ ಬಗ್ಗೆ ನಾಪತ್ತೆಯಾಗಿರುವ ಸಾವಿತ್ರ ಮೇಸ್ತಾಳ ಪತಿ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪತ್ನಿ ಹಾಗೂ ಮಗಳನ್ನ ಹುಡುಕಿ ಕೊಡುವಂತೆ ದೂರು ದಾಖಲಿಸಿದ್ದಾರೆ.

ಕಾರವಾರದ ಕ್ರಿಮ್ಸ್ ನಲ್ಲಿ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ಎರಡನೇ ವರ್ಷದಲ್ಲಿ ಓದುತ್ತಿರುವ ಬೇಲೇಕೇರಿಯ ಖಾರ್ವಿವಾದ 20ವರ್ಷದ ಯುವತಿ ನಾಗರತ್ನ ರಾಜಾ ನಾಯ್ಕ ಎಂಬಾಕೆ ಕೂಡ ನಾಪತ್ತೆಯಾಗಿದ್ದಾಳೆ‌. ಈಕೆ ನಿನ್ನೆ ರಾತ್ರಿ ಊಟ ಮಾಡಿ ಮಲಗಿದ್ದವಳು ರಾತ್ರಿ ಒಂದು ಗಂಟೆಯಿಂದ ಮುಂಜಾನೆ 5-30ರ‌ ಒಳಗಾಗಿ ಮನೆಯಿಂದ ನಾಪತ್ತೆಯಾಗಿದ್ದಾಳೆ. ಈಕೆ ನಾಪತ್ತೆಯಾಗಿರುವ ಬಗ್ಗೆ ಸಹ ಅಂಕೋಲಾ‌ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣವನ್ನ ದಾಖಲಿಸಿಕೊಂಡಿರುವ ಅಂಕೋಲಾ ಪೊಲೀಸರು ನಾಪತ್ತೆ ಆಗಿರುವವರ ಪತ್ತೆ ಕಾರ್ಯ ನಡೆಸುತ್ತಿದ್ದಾರೆ.

ಅಂಕೋಲಾ ತಾಲೂಕಿನಲ್ಲೆ ಅತೀ ಹೆಚ್ಚು ಯುವತಿಯರು ಹಾಗೂ ವಿವಾಹಿತ ಮಹಿಳೆ ನಾಪತ್ತೆ ಆಗುತ್ತಿರುವುದು ಸಾಕಷ್ಟು ಅಚ್ಚರಿಗೂ ಕಾರಣವಾಗಿದೆ. ಇವರಾಗಿಯೇ ನಾಪತ್ತೆ ಆಗಿದ್ದಾರೇ ಇಲ್ಲ ಯಾರಾದ್ರೂ ಇವರನ್ನ ಅಪಹರಣ ಮಾಡಿದ್ದಾರೆಯೇ ಎನ್ನುವ ಅನುಮಾನ ಹೆಚ್ಚಾಗಿದೆ. ಎಲ್ಲವೂ ಪೋಲೀಸ್ ತನಿಖೆಯ ಬಳಿಕವೆ ಗೊತ್ತಾಗಬೇಕಿದೆ.