suddibindu.in
ಸಿದ್ದಾಪುರ: ಕಳೆದ ಮೂರು ವರ್ಷಕ್ಕೂ ಹೆಚ್ಚಿನ ಸಮಯ ಸಿದ್ದಾಪುರ ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ವಸಂತ ನಾಯ್ಕ ಅವರು ಲೋಕಸಭಾ ಚುನಾವಣಾ ಬಳಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ರಾಜಕೀಯವಾಗಿ ಹಲವು ಚರ್ಚೆಗಳಿಗೆ ಕಾರಣವಾಗುತ್ತಿದೆ.
ಇದನ್ನು ಓದಿ
- ಯಕ್ಷಗಾನ ಅಕಾಡೆಮಿಯ ಕೇಂದ್ರ ಕಚೇರಿ ಮಂಗಳೂರಿಗೆ ಸ್ಥಳಾಂತರಿಸುವ ಕ್ರಮ ಸರಿಯಲ್ಲ
- ಅನಂತಮೂರ್ತಿ ಹೆಗಡೆ ಪ್ರತಿಭಟನೆಗೆ ಸ್ಥಳದಲ್ಲೆ ಆದೇಶಿಸಿದ ಡಿಸಿ
- ಭಾರತ್ ಸೈನ್ಯಕ್ಕೆ ಬೆಚ್ಚಿಬಿದ್ದ ಪಾಕ್ : 5 ಸಾವಿರ ಸೈನಿಕರ ರಾಜೀನಾಮೆ
ಲೋಕಸಭಾ ಚುನಾವಣೆಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಟಿಕೇಟ್ ಘೋಷಣೆ ಆದ ನಂತರದಲ್ಲಿ ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷ ಹಾಗೂ ಸಿದ್ದಾಪುರ ಭಾಗದ ಪ್ರಭಾವಿ ಮುಖಂಡ ಅನಂತಕುಮಾರ ಹೆಗಡೆ ಅವರ ಆಪ್ತರಾಗಿದ್ದ ಕೆ ಜಿ ನಾಯ್ಕ ಹಣಜಿಬೈಲ್ ಅವರು ಅಸಮಧಾನ ಹೊಂದಿದ್ದರು.ನಂತರದಲ್ಲಿ ಪಕ್ಷದ ಹೈಕಮಾಂಡ ಕೆ ಜಿ ನಾಯ್ಕ ಅವರ ಜೊತೆ ಮಾತು ಕತೆ ನಡೆಸಿ ಮುಂದಿನ ಚುನಾವಣೆಯಲ್ಲಿ ಶಿರಸಿ ಸಿದ್ದಾಪುರ ಕ್ಷೇತ್ರದಲ್ಲಿ ಸ್ಪರ್ಧೆಗೆ ಅವಕಾಶ ನೀಡುವುದಾಗಿ ಭರವಸೆ ನೀಡಿದ್ದರು ಎನ್ನಲಾಗಿದೆ.
ಹೀಗಾಗಿ ಕೆ ಜಿ ನಾಯ್ಕ ಅವರ ರಾಜಕೀಯಕ್ಕೆ ಬ್ರೇಕ್ ಹಾಕಬೇಕೆಂದು ಇದೀಗ ವಸಂತ ನಾಯ್ಕ ಅವರನ್ನ ಬಿ ಜೆ ಪಿಗೆ ಸೇರ್ಪಡೆ ಮಾಡಿಕೊಂಡು ಮುಂದಿನ ದಿನದಲ್ಲಿ ಅವರಿಗೆ ಸ್ಥಾನ ನೀಡಬೇಕೆಂದು ಅನಂತಕುಮಾರ ಹೆಗಡೆ ಅವರ ವಿರೋಧಿ ಬಣ ರಣತಂತ್ರ ರೂಪಿಸಲಾಗಿದೆ ಎನ್ನುವ ಚರ್ಚೆ ನಡಿತ್ತಾ ಇದೆ, ಲೋಕಸಭಾ ಚುನಾವಣೆಯಲ್ಲಿ ವಸಂತ ನಾಯ್ಕ ಅವರು ಪಕ್ಷದ ಪರ ಕೆಲಸ ಮಾಡದಂತೆ ಬಿಜೆಪಿಯ ಒಂದು ಬಣ ನೋಡಿಕೊಂಡಿತ್ತು ಎನ್ನಲಾಗಿದೆ. ಹೀಗಾಗಿ ಕೆ ಜಿ ನಾಯ್ಕ ಅವರನ್ನ ರಾಜಕೀಯವಾಗಿ ದೂರವಿಡಲು ವಸಂತ ನಾಯ್ಕ ಅವರನ್ನ ಬಿಪಿಗೆ ಕರೆತರುವ ಪ್ರಯತ್ನ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಬಣದಿಂದ ನಡೆಯುತ್ತಿದೆ ಎನ್ನಲಾಗಿದೆ.
ಆದರೆ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿರುವ ವಸಂತ ನಾಯ್ಕ ತಮ್ಮ ವೈಯಕ್ತಿಕ ಕಾರಣದಿಂದ ಪಕ್ಷ ಸಂಘಟನೆ ಮಾಡಲು ಸಾಧ್ಯವಾಗದೆ ಇರುವ ಕಾರಣಕ್ಕೆ ಬ್ಲಾಕ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಆದರೆ ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ವಸಂತ ನಾಯ್ಕ ಬಿಜೆಪಿ ಸೇರಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರತ್ತಾ ಇದೆ..