ಸುದ್ದಿಬಿಂದು ಬ್ಯೂರೋ
ಬೆಂಗಳೂರು : ಗೋಲ್ಡನ್ ಸ್ಟಾರ್ ಗಣೇಶಗೆ ಅರಣ್ಯ ಇಲಾಖೆ ನೋಟಿಸ್ ನೀಡಿದೆ. ಬಂಡೀಪುರ ಅರಣ್ಯ ವ್ಯಾಪ್ತಿಯ ಜಕ್ಕಳ್ಳಿ ಸಮೀಪ ನಟ ಗಣೇಶ್ ನಿರ್ಮಿಸುತ್ತಿರುವ ಕಟ್ಟಡ ನಿರ್ಮಾಣ ಸ್ಥಗಿತಗೊಳಿಸುವಂತೆ ಆರಣ್ಯ ಇಲಾಖೆ ನೋಟಿಸ್ ನೀಡಿದೆ. ಸೂಕ್ಷ್ಮ ಅರಣ್ಯ ವಲಯದಲ್ಲಿ ಕಟ್ಟಡ ನಿರ್ಮಿಸುತ್ತಿರುವದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಗಣೇಶಗೆ ನೋಟೀಸ್ ನೀಡಿದೆ.
ಒಂದು ವಾರದ ಒಳಗೆ ನೋಟಿಸ್ ಗೆ ಉತ್ತರಿಸುವಂತೆ ಅರಣ್ಯ ಇಲಾಖೆ ಹೇಳಿದೆ. ನೋಟಿಸಿಗೆ ಉತ್ತರಿಸಿದ ಬಳಿಕ ಕಟ್ಟಡ ನಿರ್ಮಾಣ ಕಾಮಗಾರಿ ನಡೆಸುವಂತೆ ಹೇಳಿದೆ. ಮಾನಿಟರಿಂಗ್ ಕಮಿಟಿ ಮುಂದೆ ನೋಟೀಸಗೆ ಉತ್ತರಿಸುವಂತೆ ಹೇಳಲಾಗಿದೆ. ಬಂಡೀಪುರ ಅರಣ್ಯ ವ್ಯಾಪ್ತಿಯ ಜಕ್ಕಳ್ಳಿ ಪ್ರದೇಶದಲ್ಲಿ ಕೇವಲ ತಾತ್ಕಾಲಿಕ ಕಟ್ಟಡಕ್ಕೆ ಮಾತ್ರ ಅನುಮತಿ ಇದೆ. ಶಾಶ್ವತ ಕಟ್ಟಡಕ್ಕೆ ಅನುಮತಿ ಇಲ್ಲ ಎನ್ನಲಾಗಿದೆ.
ನೋಟಿಸ್ ಗೆ ಪ್ರತಿಕ್ರಿಯಿಸಿರುವ ನಟ ಗಣೇಶ್, ಅಲ್ಲಿ ಶಾಶ್ವತ ಕಟ್ಟಡ ಕಟ್ಟುತ್ತಿಲ್ಲ, ತಾತ್ಕಾಲಿಕ ಕಟ್ಟಡ ಕಟ್ಟುತ್ತಿರುವದಾಗಿ ಗಣೇಶ ಹೇಳಿದ್ದಾರೆ. ವಕೀಲರೊಂದಿಗೆ ಚರ್ಚಿಸಿ ನೋಟಿಸ್ ಗೆ ಉತ್ತರಿಸುವದಾಗಿ ಗೋಲ್ಡನ್ ಸ್ಟಾರ್ ಗಣೇಶ ತಿಳಿಸಿದ್ದಾರೆ.