suddibindu.in
ಭಟ್ಕಳ: ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಶಿರಾಲಿಯ ಚಿತ್ರಾಪುರ ಮಠಕ್ಕೆ ಭೇಟಿ ನೀಡಿದ ಸ್ಯಾಂಡಲ್‌ವುಡ್ ರಾಕಿಂಗ್ ಸ್ಟಾರ್ ಯಶ್ ದಂಪತಿ (Sandalwood Rocking Star Yash) ದೇವರ ದರ್ಶನ ಪಡೆದು, ರಾತ್ರಿ ಪೂರ್ತಿ ಅಲ್ಲೆ ವಾಸ್ತವ್ಯ ಮಾಡಿದ್ದಾರೆ.
ಬಳಿಕ ಚಿತ್ರಾಪುರ ಮಠದ(Chitrapur Math) ಸ್ವಾಮೀಜಿ ಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದು ಸತತ 2 ವರೆಗೆ ಗಂಟೆಗೂ ಅಧಿಕ ಕಾಲ ಸ್ವಾಮೀಜಿಗಳ ಜೊತೆಗೆ ಮಾತು ಕತೆ ನಡೆಸಿದರು. ಚಿತ್ರಾಪುರಕ್ಕೆ ಯಶ್ ರಾಧಿಕಾ ದಂಪತಿಗಳು ಕುಟುಂಬ ಸಮೇತರಾಗಿ ಬಂದಿರುವ ಸುದ್ದಿ ತಿಳಿದ ಅಭಿಮಾನಿಗಳು ಯಶ್ ಅಗಮನಕ್ಕಾಗಿ ಕಾಯುತ್ತಿದರು ಬಳಿಕ ಸ್ವಾಮೀಜಿ ಗಳೊಂದಿಗೆ ಮಾತುಕತೆ ನಡೆಸಿದ ನಂತರದಲ್ಲಿ ಹೊರಗೆ ಬಂದ ಯಶ್ ಹಾಗೂ ರಾಧಿಕಾ ಪಂಡಿತ ದಂಪತಿ ಅಭಿಮಾನಿಗಳ ಬಳಿ ಬಂದು ಸ್ವಲ್ಪ ಸಮಯ ಕಳೆದು ಫೋಟೋ(Photo) ಹಾಗೂ ಆಟೋಗ್ರಾಫ್(Autograph)ನೀಡಿ ತೆರಳಿದರು.
ಇವರೊಂದಿಗೆ ಯಶ್ ಯಶ್ ಹಾಗೂ ರಾಧಿಕಾ ಪಂಡಿತ ಮಕ್ಕಳು ಐರಾ ಮಗ ಯಥರ್ವ ಹಾಗೂ ರಾಧಿಕಾ ಪಂಡಿತ ತಂದೆ ತಾಯಿ ಆಗಮಿಸಿದದ್ದರು.ಇನ್ನೂ ನಟ ಶಯ್ ಆಗಮಿಸಿರುವ ಹಿನ್ನೆಲೆಯಲ್ಲಿ ಪೊಲೀಸ್ ಬಿಗು ಬಂದೋಬಸ್ತ ಮಾಡಲಾಗಿತ್ತು.