Lokasabha Election 2024
suddibindu.in
ಬೆಂಗಳೂರು: ಲೋಕಸಭಾ ಚುನಾವಣೆ ಘೋಷಣೆಗೆ ಇನ್ನೇನು ಕೆಲವು ದಿನಗಳು ಮಾತ್ರ ಬಾಕಿ ಉಳಿಸಿದ್ದು, ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನ ಸಿದ್ದಪಡಿಸಿಕೊಂಡಿದ್ದು ಕರ್ನಾಟಕ ಸೇರಿ ಒಟ್ಟು 100ಕ್ಷೇತ್ರದಲ್ಲಿನ ಅಭ್ಯರ್ಥಿಗಳ ಪಟ್ಟಿ ಸಿದ್ದಪಡಿಸಿಕೊಂಡಿದೆ.ಈ ಭಾರಿ ಬಿಜೆಪಿಯ 60-70 ಹಾಲಿ ಸಂಸದರಿಗೆ ಟಿಕೆಟ್ ಕೈತಪ್ಪಲಿದೆ. ಈ ಬಾರಿ ಮಹಿಳೆಯರಿಗೆ ಹೆಚ್ಚಿನ ಕ್ಷೇತ್ರದಲ್ಲಿ ಅವಕಾಶ ನೀಡುವ ಸಾಧ್ಯತೆ ಇದೆ. ಇಂದು ಇಲ್ಲವೆ ನಾಳೆ ಮೊದಲ ಪಟ್ಟಿ ಒಳಗಡೆಯಾಗುವ ಸಾಧ್ಯತೆ ಇದೆ.
ಪ್ರಮುಖವಾಗಿ ಕ್ಷೇತ್ರದ ಜನರ ಜೊತೆ ಉತ್ತಮ ಸಂಬಂಧ ಇಟ್ಟುಕೊಳ್ಳದೆ ಹಾಗೂ ಅಭಿವೃದ್ಧಿ ವಿಚಾರದಲ್ಲಿ ಕ್ಷೇತ್ರವನ್ನ ಸಂಪೂರ್ಣವಾಗಿ ಕಡೆಗಣನೆ ಮಾಡಿದ ಹಾಲಿ ಸಂಸದರಿಗೆ ಟಿಕೆಟ್ ಕೈತಪ್ಪಲಿದೆ. ಅಷ್ಟೆ ಅಲ್ಲದೆ ಬಿಜೆಪಿ ನಡೆಸಿರುವ ಸರ್ವೆ ಆಧಾರದ ಮೇಲೆ ಟಿಕೆಟ್ ನೀಡಲಾಗುತ್ತಿದೆ.ರಾಜ್ಯದ ಕೆಲವೊಂದು ಕ್ಷೇತ್ರದಲ್ಲಿ ಈ ಬಾರಿ ಹಿಂದುಳಿದವರನ್ನೆ ಕಣಕ್ಕಿಳಿಸಲು ಬಿಜೆಪಿ ಮುಂದಾಗಿದೆ. ಪಕ್ಷದಲ್ಲಿ ಸಕ್ರಿಯವಾಗಿ ಗುರುತಿಸಿಕೊಳ್ಳದೆ ಇರುವವರನ್ನ ಹೊರಗಿಡಲು ಬಿಜೆಪಿ ಮುಂದಾಗಿದೆ.
ಇದನ್ನೂ ಓದಿ:-
- ಕಂದಾಯ ಅಧಿಕಾರಿಗಳ ಮೈ ಚಳಿ ಬಿಡಿಸಿದ ಆರ್ ವಿ ದೇಶಪಾಂಡೆ
- ರಾಜ್ಯದ ಜನತೆಗೆ ಬಿಸಿಯಾದ “ನಂದಿನಿ”
- ಲಿಂಗಾಯತ ಶಾಸಕರು ಬಿಜೆಪಿ ತೊರೆದು ಬನ್ನಿ : ಜಯಮೃತ್ಯುಂಜಯ ಸ್ವಾಮೀಜಿ ಕರೆ
ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ.
ನರೇಂದ್ರ ಮೋದಿ- ವಾರಾಣಾಸಿ
ಅಮಿತ್ ಶಾ- ಗಾಂಧಿನಗರ
ರಾಜನಾಥ್ ಸಿಂಗ್- ಲಕ್ನೋ
ಗುನಾ- ಜ್ಯೋತಿರಾಧಿತ್ಯ ಸಿಂಧಿಯಾ
ನಾಗಪುರ ಸರ್ಬಾನಂದ-ನಿತಿನ್ ಗಡ್ಕರಿ-
ಶಿವರಾಜ್ ಸಿಂಗ್ ಚೌಹಾಣ್- ವಿಧಿಶಾ
ಶೋಭಾ ಕರಂದ್ಲಾಜೆ:ಚಿಕ್ಕಮಗಳೂರು-
ಸೋನವಾಲ್- ದಿಬ್ರಾಗರ್
ಗುರುಗ್ರಾಮ- ರಾವ್ ಇಂದ್ರಜಿತ್
ಸಿರ್ಸಾ- ಸುನೀತಾ ದುಗ್ಗಲ್
ಆಗ್ರಾ- ಎಸ್‌ಪಿಎಸ್ ಬಘೇಲಾ
ರವಿ ಕಿಶನ್- ಗೋರಖ್ ಪುರ
ಪಶ್ಚಿಮ ದೆಹಲಿ- ಪ್ರವೇಶ್ ವರ್ಮಾ
ಈಶಾನ್ಯ ದೆಹಲಿ- ಮನೋಜ್ ತಿವಾರಿ
ಜಾಮ್ ನಗರ- ಪೂನಂ ಮೇಡಂ
ಹೂಗ್ಲಿ- ಲಾಕೆಟ್ ಚಟರ್ಜಿ
ಕೂಚ್ ಬಿಹಾರ್- ನಿಶಿತ್ ಪ್ರಾಮಾಣಿಕ್
ಅಸನಸೋಲ್- ಪವನ್ ಸಿಂಗ್
ಕನೂಜ್- ಸುಬ್ರತಾ ಪಾಠಕ್
ಪುರಿ- ಸಂಬೀತ್ ಪಾತ್ರಾ
ದೀಲೀಪ್ ಘೋಷ್- ಮೇದಿನಪುರ, ಪಶ್ಚಿಮ ಬಂಗಾಳ
ತಿರುವನಂತಪುರ ಗ್ರಾಮೀಣಾ- ಡಾ.ಮುರಳೀಧರ್