ಸುದ್ದಿಬಿಂದು ಬ್ಯೂರೋ
ಕಲಬುರಗಿ:
ಅಕ್ರಮವಾಗಿ ಮರಳು ಸಾಗಾಟ ಮಾಡಲಾಗುತ್ತಿದೆ ಎನ್ನುವ ಬಗ್ಗೆ ಮಾಹಿತಿ ತಿಳಿದ ಮರಳು ಸಾಗಾಟ ತೆಗೆಯುವ ಸ್ಥಳಕ್ಕೆ ಹೋಗಿ ಅಕ್ರಮ ಮರಳು ಸಾಗಟ ತಡೆಗೆ ಮುಂದಾಗದ್ದ ಪೊಲೀಸ್ ಮೇಲೆ ಟ್ರ್ಯಾಕ್ಟರ್ ಹಾಯಿಸಿ ಹತ್ಯೆ ಮಾಡಿರುವ ಪ್ರಕರಣ ನೆಲೋಗಿ ಪೊಲೀಸ್ ಠಾಣೆ ವ್ಯಾಪ್ತಿಯ ನಾರಾಯಣಪುರದ ಬಳಿ ನಡೆದಿದೆ.

ಭೀಮು ಚಹ್ವಣ ಎಂಬುವವರೆ ಈ ಅಕ್ರಮ ಮರಳು ದಂಧೆಕೋರರಿಂದ ಹತ್ಯೆಯಾಗಿರುವ ಪೊಲೀಸ್ ಸಿಬ್ಬಂದಿಯಾಗಿದ್ದಾರೆ. ಟ್ರ್ಯಾಕ್ಟರ್ ಹಿಂಬದಿಯ ಚಕ್ರದಲ್ಲಿ ಸಿಲುಕಿರುವುದು ಕಂಡು ಬಂದಿದೆ. ಘಟನೆಯಿಂದ ಇಲಾಖೆಯ ಸಿಬ್ಬಂದಿಗಳು ಜರ್ಝರಿತಗೊಂಡಿದ್ದಾರೆ.

ಅಕ್ರಮ ಮರಳು ಸಾಗಾಟ ದಂಧೆಯನ್ನ ತಡೆಗಟ್ಟಲು ಇಲಾಖೆ ಹಲವು ರೀತಿಯಲ್ಲಿ ಪ್ರಯತ್ನ ನಡೆಸಿದ್ದರೂ ಯಾವುದೇ ಪ್ರಯೋಜನ ಆಗದೇ ಇರುವುದೇ ಅಚ್ಚರಿಯಾಗಿದೆ. ಅದಕ್ಕಾಗಿ ಓರ್ವ ಸಿಬ್ಬಂದಿ ಪ್ರಾಣವನ್ನ ತೆಗೆದ ಕಿರಾತಕರನ್ನ ಪೊಲೀಸರು ಹೆಡಮುರಿಗೆ ಕಟ್ಟಬೇಕಿದೆ.