ಸುದ್ದಿಬಿಂದು ಬ್ಯೂರೋ
ಶಿರಸಿ :
ಬಿಜೆಪಿಯಲ್ಲಿ ಟಿಕೆಟ್ ಸಿಕ್ಕಲ್ಲವೆಂದು ಅಸಮಾಧಾನಕ್ಕೆ ಒಳಗಾದ ಹೊಸದುರ್ಗ ಶಾಸಕ ಗೊಳಿಹಟ್ಟಿ ಶೇಖರ ಇಂದು ವಿಧಾನಸಭಾಧ್ಯಕ್ಷರ ಮೂಲಕ ಬಿಜೆಪಿಗೆ ರಾಜೀನಾಮೆ ಸಲ್ಲಿಸಿದ್ದು. ಈ ಮೂಲಕ ರಾಜ್ಯ ಬಿಜಪಿ ನಿಧಾನವಾಗಿ ಖಾಲಿಯಾಗುತ್ತಿದೆ.

ಚಿತ್ರದುರ್ಗದಿಂದ ತಮ್ಮ ಬೆಂಬಲಿಗರೊಂದಿಗೆ ಶಿರಸಿಗೆ ಆಗಮಿಸಿದ ಗೊಳಿಹಟ್ಟಿ ಶಿರಸಿಯ ಮಾರಿಕಾಂಬಾ ದೇವಸ್ಥಾನಕ್ಕೆ ತೆರಳಿ ಪೂಜೆಸಲ್ಲಿಸಿದ್ದರು. ಬಳಿಕ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಕಚೇರಿಗೆ ಆಗಮಿಸಿದ ಗೊಳಿಹಟ್ಟಿ ಶೇಖರ ಶಾಸಕ ಸ್ಥಾನಕ್ಕೆ ಹಾಗೂ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಬಳಿಕ ಮಾಧ್ಯಮವರೊಂದಿಗೆ ಮಾತನಾಡಿದ ಗೊಳಿಹಟ್ಟಿ ಶೇಖರ ಅವರು. ನಾನು ಈಗ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ.ಮುಂದೆ ಯಾವ ಪಕ್ಷಕ್ಕೆ ಸೇರಬೇಕು ಎನ್ನುವ ಬಗ್ಗೆ ಕಾರ್ಯಕರ್ತರ ಹಾಗೂ ಅಭಿಮಾನಿಗಳ ಜೊತೆ ಚರ್ಚಿಸಿ ನಾಳೆ ತೀರ್ಮಾನಿಸುತ್ತೆನೆ. ಎಂದಿದ್ದಾರೆ. ಇವರು ಎರಡು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದರು.

ಮೊದಲು ಪಕ್ಷೇತರವಾಗಿ ಗೆದ್ದ ಗೊಳಿಹಟ್ಟಿ ಶೇಖರ ಅವರು ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಶಾಸಕರಾಗಿದ್ದರು. ಆದರೆ ಈ ಬಾರಿ ಅವರಿಗೆ ಪಕ್ಷದ ಟಿಕೆಟ್ ಕೈ ತಪ್ಪಿರುವುದರಿಂದ ಅವರು ಇದೀಗ ರಾಜೀನಾಮೆ ಸಲ್ಲಿಸಿದ್ದಾರೆ.‌