suddibindu.in
ಕಾರವಾರ : ಉತ್ತರಕನ್ನಡ ಜಿಲ್ಲೆಯಲ್ಲಿ ಅನೇಕ ರಣಮಳೆ ಮುಂದುವರದಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದ್ದು, ತಾಲೂಕಿನ ಚೆಂಡಿಯಾ ಭಾಗಶಃ ಮುಳುಗಡೆಯಾಗಿದೆ, ಚೆಂಡಿಯಾ ಬಳಿ ಹೆದ್ದಾರಿಯಲ್ಲಿ ಲಘುವಾಹನ ಸಂಚಾರ ಬಹುತೇಕ ಸ್ಥಗಿತವಾಗಿದೆ.
ಈಗಾಗಲೇ ಅನೇಕ ಕುಟುಂಬವನ್ನ ಸ್ಥಳಾಂತರ ಮಾಡಲಾಗಿದೆ. ರಾತ್ರೋ ರಾತ್ರಿ ಚೆಂಡಿಯಾ ಗ್ರಾಮಸ್ಥರನ್ನ ಬೇರೆಡೆ ಸ್ಥಳಾಂತರ ಮಾಡದೆ ಇದ್ದರೆ ಚೆಂಡಿಯಾ ಗ್ರಾಮಕ್ಕೆ ಗ್ರಾಮವೇ ಸಂಪೂರ್ಣ ಮುಳುಗಡೆ ಆಗುವ ಸಾಧ್ಯತೆ ಹೆಚ್ಚಾಗಿದೆ.ಕದಂಬಾ ನೌಕಾನೆ ಹಾಗೂ ಐಆರ್‌ಬಿ ಕಂಪನಿಯ ಅವೈಜ್ಞಾನಿಕ ಕಾಮಗಾರಿಯಿಂದ ಜನ ಹೈರಾಣಾಗಿದ್ದಾರೆ. ಚೆಂಡಿಯಾ ಸಮೀಪ ರಾಷ್ಟ್ರೀಯ ಹೆದ್ದಾರಿ, 66ರ ಮೇಲೆ ಭಾರೀ ಪ್ರಮಾಣದಲ್ಲಿ ಹೆದ್ದಾರಿಯಲ್ಲಿ ತುಂಬಿ ಹರಿಯುತ್ತಿದ್ದು, ಲಘುವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ.
ಇದನ್ನೂ ಓದಿ
- ಹನಿಟ್ರ್ಯಾಪ್ ಪ್ರಕರಣವನ್ನ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ : ಗೃಹ ಸಚಿವ ಡಾ.ಜಿ ಪರಮೇಶ್ವರ ಹೇಳಿಕೆ
- ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಆಡಳಿತ ಕಚೇರಿ ನವೀಕರಣಕ್ಕೆ ಐದು ಲಕ್ಷ ಘೋಷಿಸಿದ ಶಾಸಕ ಸತೀಶ್ ಸೈಲ್
- ಗೃಹ ಸಚಿವರನ್ನ ಜಿಲ್ಲೆಗೆ ಸ್ವಾಗತಿಸಿಕೊಂಡ ಸಚಿವ ಮಂಕಾಳ್ ವೈದ್ಯ
ಈಗಾಗಲೇ ಜಿಲ್ಲೆಗೆ NDRF ತಂಡವನ್ನ ಕರೆಸಿಕೊಳ್ಳಲಾಗಿದ್ದು, ಸದ್ಯ ಅವರು ಅಂಕೋಲಾ,ಹೊನ್ನಾವರ ತಾಲೂಕಿನಲ್ಲಿ ವಾಸ್ತವಸ್ತವಿದ್ದು ತಕ್ಷಣವೆ NDRF ತಂಡವನ್ನ ಚೆಂಡಿಯಾಕ್ಕೆ ಕರೆಸಿಕೊಳ್ಳುವ ಸಾಧ್ಯತೆ ಇದೆ. ಚೆಂಡಿಯಾ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಕೈ ಮಿರುವ ಹಂತಕ್ಕೆ ಬಂದು ನಿಂತಿದೆ..ಹೀಗಾಗಿ ಅಲ್ಲಿನ ಜನರನ್ನ ತಕ್ಷಣದಲ್ಲಿ ಸ್ಥಳಾಂತರ ಮಾಡಲೇ ಬೇಕಾದ ತೀರಾ ಅನಿವಾರ್ಯತೆ ಇದೆ..