ಸುದ್ದಿಬಿಂದು ಬ್ಯೂರೋ
ಹಳಿಯಾಳ : ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಬಟ್ಟೆ ಅಂಗಡಿ ಸೇರಿದಂತೆ ಮೂರು ಅಂಗಡಿಗಳು ಕಳ್ಳತನವಾಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಹಳಿಯಾಳ ಪಟ್ಟಣದಲ್ಲಿ ನಡೆದಿದೆ..

ಪಟ್ಟಣದ ಮುಖ್ಯ ಬಸ್ ನಿಲ್ದಾಣದ ರಸ್ತೆಯಲ್ಲಿರುವ. ಜ್ಯೋತಿ ಮೆಡಿಕಲ್, ಎಕೆ ಫ್ಯಾಶನ್ ಬಟ್ಟರ ಅಂಗಡಿ ಹಾಗೂ ಸ್ಡಾರ್ ಪಾನ್ ಶಾಪ್ ಅಂಗಡಿಯ ಬೀಗ ಮುರಿದು ಒಳನುಗ್ಗಿದ್ದ ಕಳ್ಳರು ಅಂಗಡಿಯಲ್ಲಿದ್ದ ಸಾವಿರಾರು ರೂಪಾಯಿ ಹಣವನ್ನ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.

ಈ ಬಗ್ಗೆ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿದೆ.ಇತ್ತೀಚೆಗೆ ಹಳಿಯಾಳ ತಾಲೂಕಿನಲ್ಲಿ ಈ ರೀತಿ ಕಳ್ಳತನ ಪ್ರಕಾರಗಳು ಹೆಚ್ಚಾಗುತ್ತಿದ್ದು, ಕೆಲವೊಂದು ಪ್ರಕರಣವನ್ನ ಈಗಾಲೇ ಪೊಲೀಸರು ಪತ್ತೆ ಹಚ್ಚಿದ್ದಾರೆ.