ಸುದ್ದಿ,ಜಾಹೀರಾತಿಗಾಗಿ ಸಂಪರ್ಕಿಸಿ :9916127361
www.suddibindu.in
ಕಾರವಾರ : ಕೇಂದ್ರದ ವಿರೋಧ ಪಕ್ಷದ ನಾಯಕರು ಹಾಗೂ ರಾಷ್ಟ್ರೀಯ ಕಾಂಗ್ರೆಸ್ ಮಾಜಿ ಅಧ್ಯಕ್ಷರಾಗಿರುವ ರಾಹುಲ್ ಗಾಂಧಿ ಅವರಿಗೆ ಫೇಸ್‌ಬುಕ್‌‌ನ ಫೇಕ್ ಪೇಜ್ ಒಂದರಲ್ಲಿ ಅವಮಾನ ಮಾಡಿ ಪೊಸ್ಟ್ ಮಾಡಿರುವುದಕ್ಕೆ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾಗಿರುವ ಆರ್ ಎಚ್ ನಾಯ್ಕ ಕಾಗಲ್ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ದೂರಿದ್ದಾರೆ.

ಬೆಂಗಳೂರಿನ ಇಲೆಕ್ಟ್ರಿಕಲ್ ಸಿಟಿ , ಹೋಂ ಟೌನ್ ನಿವಾಸಿಯಾಗಿರುವ ನಂದಿನಿ ಭಂಡಾರ್ಕರ್ ಎಂಬುವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ. ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷರು ಹಾಗೂ ವಿರೋಧ ಪಕ್ಷದ ನಾಯಕರಾಗಿರುವ ರಾಹುಲ್ ಗಾಂಧಿ ಅವರ ಭಾವಚಿತ್ರದ ಮುಖದ ಭಾಗದ ಮೇಲೆ ಚಪ್ಪಲಿಯ ಚಿತ್ರವನ್ನು ಇಟ್ಟು ರಾಹುಲ್ ಗಾಂಧಿಯವರ ಗೌರವಕ್ಕೆ ಹಾಗೂ ಕಾಂಗ್ರೆಸ್ ಪಕ್ಷದ ಗೌರವಕ್ಕೆ ಚ್ಯುತಿ ಬರುವಂತೆ, ಮತ್ತು ಕಾಂಗ್ರೆಸ್ ಕಾರ್ಯಕರ್ತರ ಭಾವನೆಗೆ ಘಾಸಿ ಆಗುವ ರೀತಿಯಲ್ಲಿ ಜನತೆಯಲ್ಲಿ ದ್ವೇಷ ಹುಟ್ಟಿಸುವ, ಹೀಯಾಳಿಸುವಂತೆ ಹಾಗೂ ಜನತೆಯಲ್ಲಿ ದ್ವೇಷ, ತಿ, ಕೋಮು ಗಲಭೆ ಸೃಷ್ಟಿಯಾಗುವಂತಹ ಬರಹಗಳನ್ನ‌ ಬರೆದು.

ಇದನ್ನೂ ಓದಿ

ತನ್ನ ಫೇಸ್ ಬುಕ್ ಖಾತೆಯಲ್ಲಿ ಅಪ್ಲೋಡ್ ಮಾಡಿ ಪೋಸ್ಟ್ ಮಾಡಿದ್ದಾರೆ ಆ ಫೇಸ್‌ಬುಕ್‌ ‌ಖಾತೆ 3.4k followers ಹೊಂದಿದ್ದು ಇವರ Face book ಖಾತೆಯ ಈ ಪೋಸ್ಟಿಗೆ 143 ಜನ ಲೈಕ್ ಕೂಡ ಕೊಟ್ಟಿದ್ದಾರೆ. ಇವರ ಪೊಸ್‌ನಲ್ಲಿ ಗರ್ವೆ ಸೆ ಕಹೋ ಹಮ್ ಹಿಂದೂ ಹೈ! ಎಂದು ಬರೆಯಲಾಗಿದೆ.

ಸಮಾಜದಲ್ಲಿ ಕೋಮು ಗಲಭೆ ಸೃಷ್ಟಿಸುವ ಪ್ರಚೋದನಕಾರಿ ಬರವಣಿಗೆ ಹಾಗೂ ರಾಹುಲ್ ಗಾಂಧಿ ಅವರ ಚಿತ್ರ ಇರುವ ಅವರ ಮುಖದ ಮೇಲೆ ಚಪ್ಪಲಿಯನ್ನು ಇಟ್ಟು ಚಿತ್ರವನ್ನು ಸಾಮಾಜಿಕ ಜಾಲತಾಣದ ತನ್ನದೇ ಫೇಸ್ ಬುಕ್ ಖಾತೆಯಲ್ಲಿ ಅಪ್ಲೋಡ್ ಮಾಡಿ ಮಾನಹಾನಿ ಮಾಡಿರುವ ನಂದಿನಿ ಭಂಡಾರ್ಕರ್ ಎನ್ನುವ ಮಹಿಳೆಯ ಮೇಲೆ ಎಫ್ ಆಯ್ ಆರ್ ದಾಖಲಿಸಿ ತಕ್ಷಣ ಅವರನ್ನ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ವಿನಂತಿಸಿಕೊಳ್ಳುವಂತೆ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಆರ್ ಎಚ್ ನಾಯ್ಕ ಜಿಲ್ಲಾ ಪೊಲೀಸ್ ‌ವರಿಷ್ಠಾಧಿಕಾರಿಗಳಿಗೆ ನೀಡಿದ ದೂರಿನ ಮನವಿಯಲ್ಲಿ ತಿಳಿಸಿದ್ದಾರೆ.