ಸುದ್ದಿಬಿಂದು ಬ್ಯೂರೋ
ಶಿರಸಿ : ಕಂದಾಯ (Revenue)ಜಮೀನಿನಲ್ಲಿ ಅನಾಧಿಕಾಲದಿಂದ ಅತಿಕ್ರಮಣ ಮಾಡಿಕೊಂಡು ವಾಸವಾಗಿದ್ದ ರೈತನೋರ್ವನಿಗೆ ಸ್ಥಳದಿಂದ ಒಕ್ಕಲೆಬ್ಬಿಸಿದ ಬಳಿಕ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ರೈತ‌ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಆತನಿಗೆ ಒಕ್ಕಲೆಬ್ಬಿಸಿ ಆತ್ಮಹತ್ಯೆಗೆ ಕಾರಣವಾದ ಕಂದಾಯ ಅಧಿಕಾರಿಗಳ ವಿರುದ್ಧ ಕಾನೂನು(Law)ಕ್ರಮ ಜರುಗಿಸಬೇಕೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರನಾಥ್ ನಾಯ್ಕ ಆಗ್ರಹಿಸಿದ್ದಾರೆ.

ಉತ್ತರಕನ್ನಡ (uttara Kannada) ಜಿಲ್ಲೆಯ ಶಿರಸಿ ತಾಲೂಕಿನ ದೊಡ್ನಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಅನಾದಿಕಾಲದಿಂದ ಇರುವ ಕಂದಾಯ ಭೂಮಿಯನ್ನ ಸೋಮಯ್ಯ ಜೋಗಿ ಎಂಬುವವರು ಅತಿಕ್ರಮಣ ಮಾಡಿಕೊಂಡು ವಾಸವಾಗಿದ್ದರು.ಇವರು ವಾಸವಾಗಿದ್ದ ಜಾಗಕ್ಕೆ ನುಗ್ಗಿದ ಕಂದಾಯ ಅಧಿಕಾರಿಗಳು ಸೋಮಯ್ಯ ಅವರ ಮೈ ಮೇಲೆ ಕೈ ಹಾಕಲು ಮುಂದಾಗಿದ್ದು, ಕಾನೂನಿಗೆ ವಿರುದ್ಧವಾಗಿ ಅವರನ್ನ ಒಕ್ಕಲೆಬ್ಬಿಸುವ ಕೆಲಸ ಮಾಡಿದ್ದು, ಇದರಿಂದಾಗಿ ಅವರು ಮಾನಸಿಕವಾಗಿ ನೊಂದು ಆತ್ಮಹತ್ಯೆಗೆ ಯತ್ನಿಸಿದ್ದರು. ಆದರೆ ಆ ವೇಳೆ ತೀವ್ರ ಅಸ್ವಸ್ಥರಾಗಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು(Mangalore)ಆಸ್ಪತ್ರೆಗೆ ದಾಖಲಿಸಿದರು ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ.

ಅವರು ಆತ್ಮಹತ್ಯೆ ಮಾಡಿಕೊಳ್ಳಲು ಒಕ್ಕಲೆಬ್ಬಿಸಿರುವುದೆ ಪ್ರಮುಖ‌ ಕಾರಣವಾಗಿದೆ. ಇವರು ದೊಡ್ಡಳ್ಳಿ ಗ್ರಾಮ ಸರ್ವೇ 30: 21 ಕಂದಾಯ ಭೂಮಿಯನ್ನ ಅತಿಕ್ರಮಿಸಿ, ಸಾಗುವಳಿ ಮಾಡಿಕೊಂಡು ಬರುತ್ತಿದ್ದು, ಅತಿಕ್ರಮಣ ಕ್ಷೇತ್ರದ ಮೇಲೆ ಅವಲಂಭಿತರಾಗಿದ್ದರು.

ಅಕ್ಟೋಬರ್ 7, 2023 ರಂದು ಸ್ಥಳೀಯ ಕಂದಾಯ ಇಲಾಖೆಯ ಅಧಿಕಾರಿಗಳು ಕಂದಾಯ ಕಾಯಿದೆಯ ಅನುಸರಿಸದೇ, ಬಲಪ್ರಯೋಗದಿಂದ ಒಕ್ಕಲೆಬ್ಬಿಸುವ ಪ್ರಕ್ರೀಯೆಯ ಸಂದರ್ಭದಲ್ಲಿ ರೈತ ಸೋಮಯ್ಯ ಜೋಗಿ ಮನನೊಂದು ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಶಿರಸಿಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ, ಮಂಗಳೂರಿನ ಕೆ.ಎಸ್. ಹೆಗಡೆ ಆಸ್ಪತ್ರೆಯಲ್ಲಿ (K.S. Hegade Hospital) ಚಿಕಿತ್ಸೆ ಪಡೆಯುತ್ತಿರುವ ಸಂದರ್ಭದಲ್ಲಿ ಮೃತ ಮೃತಪಟ್ಟಿರುವುದು ಖೇದಕರ.


ಇಂತಹ ಘಟನೆಗಳ ಪುನರಾವರ್ತನೆ ಜರುಗದಂತೆ ಕ್ರಮವಹಿಸಬೇಕುಂದು ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ.