ಸುದ್ದಿಬಿಂದು ಬ್ಯೂರೋ
ಶಿರಸಿ :
ಚುನಾವಣೆ ರಾಜಕೀಯದಿಂದ ನಿವೃತ್ತರಾಗುವಂತೆ ವಿಧಾನ ಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೂ ಹೈಕಮಾಂಡ್ ಸೂಚನೆ ನೀಡಿದೆ ಎನ್ಬಲಾಗಿದೆ.

ಈಗಾಗಲೆ ಬಿಜೆಪಿ ಹೈಕಮಾಂಡ ನಿಂದ ರಾಜಕೀಯದಿಂದ ನಿವೃತ್ತಿ ಪಡೆಯುವಂತೆ ಕರೆ ಬಂದಿದೆ ಎನ್ನುವ ಸುದ್ದಿ ರಾಜಕೀಯ ವಲಯದಲ್ಲಿ ಹರಡಿದೆ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಕ್ಷೇತ್ರ ತ್ಯಾಗಕ್ಕೆ ಪಕ್ಷದ ಸೂಚನೆಯ ಬೆನ್ನಲ್ಲೇ ವಿಶ್ವೇಶ್ವರ ಹೆಗಡೆ ಅವರಿಗೂ ಅಂತಹ ಸೂಚನೆ ನೀಡಲಾಗಿದೆ, ಜೊತೆಗೆ, ಸುರೇಶ ಕುಮಾರ ಸೇರಿದಂತೆ 6 -7 ಹಿರಿಯ ನಾಯಕರಿಗೆ ಹೈಕಮಾಂಡ್ ಸೂಚಿಸಿದೆ ಎನ್ನಲಾಗಿದೆ.

6 ಬಾರಿ ವಿಧಾನಸಭೆಗೆ ಆಯ್ಕೆಯಾಗಿರುವ, ಪಕ್ಷದಲ್ಲಿ ಹಾಗೂ ಕ್ಷೇತ್ರದಲ್ಲಿ ಉತ್ತಮ ಹೆಸರು ಹೊಂದಿರುವ ಕಾಗೇರಿ ಅವರಿಗೆ ಚುನಾವಣೆ ರಾಜಕೀಯ ನಿವೃತ್ತಿಗೆ ಪಕ್ಷ ಸೂಚನೆ ನೀಡಿದೆ ಎನ್ನುವ ಸುದ್ದಿ ಕ್ಷೇತ್ರದಲ್ಲಿ ಭಾರೀ ಆಘಾತಕ್ಕೆ ಕಾರಣವಾಗಿದೆ. ರಾಜಕೀಯದಲ್ಲಿ ಯಾವುದೇ ಕಪ್ಪು ಚುಕ್ಕೆ ಹೊಂದಿರದ ಕಾಗೇರಿ ಅವರು ಇಷ್ಟು ದಿಢೀರ್ ಆಗಿ ನಿವೃತ್ತರಾಗುವುದನ್ನು ಯಾರೂ ನಿರೀಕ್ಷಿಸಿಲ್ಲ. ಅವರು ರಾಜಕೀಯದಲ್ಲಿ ಇನ್ನಷ್ಟು ಎತ್ತರಕ್ಕೆ ಏರುತ್ತಾರೆನ್ನುವ ನಿರೀಕ್ಷೆಯಲ್ಲಿ ಅವರ ಅಭಿಮಾನಿಗಳಿದ್ದಾರೆ.

ಈ ಬಾರಿ ಕಾಗೇರಿ ಅವರಿಗೆ ಟಿಕೆಟ್ ತಪ್ಪಿಸಿ, ಸಂಘ ಪರಿವಾರದ ಕೆ ಜೆ ನಾಯ್ಮ ಅವರಿಗೆ ಟಿಕೆಟ್ ನೀಡಲಾಗುತ್ತದೆ ಎನ್ನುವ ಚರ್ಚೆಗಳು ನಡೆಯುತ್ತಿದೆ. ಆದರೆ ಕಾಗೇರಿ ಅವರಿಗೆ ಟಿಕೆಟ್ ತಪ್ಪಿಸಲಾಗುತ್ತಿದೆ ಎನ್ನುವುದನ್ನು ಯಾರೂ ನಿರೀಕ್ಷಿಸಿರಲಿಲ್ಲ. ಇದರಲ್ಲಿ ಜಿಲ್ಕೆಯ ಹಿರಿಯ ಕೇಂದ್ರದ ನಾಯಕರು ಸಹ ಕಾಗೇರಿ ಸೇರಿ ಜಿಲ್ಲೆಯ ಇನ್ನೂ ಒಂದಿಷ್ಟು ಹಾಲಿ ಶಾಸಕರಿಗೆ ಟಿಕೆಟ್ ನೀಡದಂತೆ ಹೈ ಕಮಾಂಡ ಮೇಲೆ ಒತ್ತಡ ಹಾಕಿದ್ದಾರೆ ಎನ್ನುವ ಚರ್ಚೆಗಳು ದೆಹಲಿ ಮೂಲದಿಂದ ತಿಳಿದು ಬಂದಿದೆ.