ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ನಮ್ಮ‌ ಕ್ಷೇತ್ರದ ಶಾಸಕರು ಹಾಗೂ ಆತ್ಮೀಯರಾಗಿರುವ ಸತೀಶ್ ಸೈಲ್ ಅವರಿಗೆ ಶಿಕ್ಷೆಯಾಗಿರುವುದು‌ ಮನಸ್ಸಿಗೆ ನೋವಾಗಿದೆ ಕಾನೂನೂ ಹೋರಾಟದ ಮೂಲಕ ಅವರಿಗೆ ಶೀಘ್ರದಲ್ಲಿ ನ್ಯಾಯ ಸಿಗುವಂತಾಗಲಿ ಎಂದು ಮಾಜಿ ಸಚಿವ ಹಾಗೂ ಜೆಡಿಎಸ್ ಮುಖಂಡ ಆನಂದ ಅಸ್ನೋಟಿಕರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಶಾಸಕ‌ ಸೈಲ್ ಅವರಿಗೆ ಶಿಕ್ಷೆಯಾಗಿರುವುದು ವೈಯಕ್ತಿಕವಾಗಿ ತುಂಬಾ ನೋವಾಗಿದೆ.ಅವರು ಮುಂದೆ ಕಾನೂನು ಹೋರಾಟ ಮಾಡುವ ಮೂಲಕ‌ ನ್ಯಾಯ ಸಿಲಿದೆ ಎನ್ನುವ ವಿಶ್ವಾಸವಿದೆ.ಅವರಿಗೆ ಶಿಕ್ಷೆ ಆದ ನಂತರ ಅನೇಕರು ಸಾಮಾಜಿಕ ಜಾಲತಾಣ ಹಾಗೂ ವೈಯಕ್ತಿಕವಾಗಿ ನನಗೆ ಪೋನ್ ಮಾಡಿ ಮುಂದಿನ ದಿನದಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಬೇಕು ಎಂದು ಹೇಳತ್ತಾ ಇದ್ದಾರೆ. ಈ ಸಂದರ್ಭದಲ್ಲಿ ಎಲ್ಲರಿಗೂ ಕೈ ಮುಗಿದು ಹೇಳ್ತಾ ಇದ್ದೇನೆ. ಈ ಸಂದಂರ್ಭದಲ್ಲಿ ಯಾರು ಕೂಡ ರಾಜಕೀಯ ಮಾಡುವುದು ಬೇಡ.ಅವರಿಗೆ ಕಾನೂನು ಹೋರಾಟ ಮಾಡಲು ಸಾಕಷ್ಟು ಅವಕಾಶವಿದೆ. ಆ ಮೂಲಕ ನ್ಯಾಯ ಸಿಗಲಿದೆ ಎನ್ನುವ ವಿಶ್ವಾಸವಿದೆ.

ಈ ವೇಳೆಯಲ್ಲಿ ರಾಜಕೀಯ ಮಾಡಬಾರದು, ಮಾನವೀಯತೆಯನ್ನ ತೋರಿಸುವಂತಾಗಬೇಕು. ಅವರ ಈ ಸಂದಂರ್ಭದಲ್ಲಿ ಅವರ ಕುಟುಂಬ ಸಾಕಷ್ಟು ನೋವಿನಲ್ಲಿ ಇರುತ್ತದೆ.ಅವರಿಗೆ ದೈರ್ಯ ತುಂಬುವ ಕೆಲಸವಾಗಬೇಕು.ಎಲ್ಲರಿಗೂ ಕೈ ಮುಗಿದು ಬೇಡಿಕೊಳ್ಳತ್ತೆ‌ನೆ ಯಾರೂ ಕೂಡ ತಾಳ್ಮೆ ಕಳೆದುಕೊಳ್ಳಬೇಡಿ, ಸೈಲ್ ಅವರು ಆದಷ್ಟು ಬೇಗ ಹೊರ ಬಂದು ಇನ್ನೂ ಹೆಚ್ಚಿನ ಜನರ ಸೇವೆ ಮಾಡುವ ಭಾಗ್ಯ ಸಿಗುವಂತಾಗಲಿ ಎಂದು ನಾನು ಸಹ ದೇವರಲ್ಲಿ ಪ್ರಾರ್ಥಿಸುವುದಾಗಿ ಆನಂದ ಅಸ್ನೋಟಿಕರ್ ತಮ್ಮ ಫೇಸ್ಬುಕ್ ನಲ್ಲಿ ವಿಡಿಯೋ ಅಪ್ಲೋಡ್ ಮಾಡಿಕೊಂಡಿದ್ದಾರೆ.

ಗಮನಿಸಿ