ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಅರಣ್ಯವಾಸಿಗಳಿಗೂ ಕಾನೂನು ಜ್ಞಾನ ಇರಬೇಕು ಎಂಬ ಹಿನ್ನಲೆಯಲ್ಲಿ ಕಳೆದ ಒಂದುವರೆ ತಿಂಗಳಿಂದ ಶುರುವಾದ ಕಾನೂನು ಜಾಗೃತಿ ಅಭಿಯಾನಕ್ಕೆ ಭಾರೀ ಬೆಂಬಲ ಸಿಕ್ಕಿದೆ.ಪ್ರತಿ ಗ್ರಾಮದಲ್ಲಿಯೂ ಅರಣ್ಯವಾಸಿಗಳು ತಮ್ಮ ಹಕ್ಕಿಗಾಗಿ ಧ್ವನಿ ಎತ್ತಿ ಕಾನೂನು ಜ್ಞಾನದ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಅರಣ್ಯವಾಸಿಗಳಿಗೆ ಈಹಿಂದೆ ಒಂದು ನೊಟೀಸ್ ನೀಡಲಾಗಿತ್ತು 1930ರ ದಾಖಲಾತಿಯನ್ನ ನೀಡಿ ಅಕ್ರಮ ಸಕ್ರಮ ಮಾಡಿಕೊಳ್ಳಿ ಎಂದು.ಆದ್ರೆ ಅಕ್ರಮ ಸಕ್ರಮಕ್ಕೆ 1930ದಾಖಲಾತಿ ಇಲ್ಲದೆ ಮತ್ತು ಕಾನೂನು ಜ್ಞಾನ ಇಲ್ಲದೆ ಅರಣ್ಯವಾಸಿಗಳು ಪರದಾಟ ನಡೆಸುತ್ತಿದ್ದಾರೆ, ಈ ಹಿನ್ನಲೆಯಲ್ಲಿ ಕಳೆದ ಒಂದುವರೆ ತಿಂಗಳಿಂದ ಶುರುವಾದ ಕಾನೂನು ಜಾಗೃತಿ ಜಾಥಾ ಅಭಿಯಾನ ಯಶಸ್ಸು ಕಾಣುತ್ತಿದೆ.ಈಗ ಜಿಲ್ಲೆಯ ಅರಣ್ಯದಲ್ಲಿ ತಮ್ಮ ಜೀವನ ಕಂಡುಕೊಂಡಿದ್ದ 85ಸಾವಿರ ಅರಣ್ಯವಾಸಿಗಳಿಗೆ ಕಾನೂನು ಜಾಗೃತಿ ಅವಶ್ಯಕತೆ ಇದೆ ಎನ್ನುವ ಸದುದ್ದೇಶದಿಂದ ಫೆ 15 ರಿಂದ ಕಾನೂನು ಜಾಗೃತಿ ಅಭಿಯಾನ ಪ್ರತಿ ಗ್ರಾ.ಪಂ ಮಟ್ಟದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಈಗ ಉಪ್ಪಿನ ಸತ್ಯಾಗ್ರಹ ನಡೆದ ಸ್ಥಳ ಕರ್ನಾಟಕದ ಬಾರ್ಡೋಲಿ ಅಂಕೋಲಾದಲ್ಲಿ ಹಮ್ಮಿಕೊಳ್ಳಲಾಗಿದ್ದು ಸಾವಿರಾರು ಸಂಖ್ಯೆಯಲ್ಲಿ ಅರಣ್ಯವಾಸಿಗಳು ಕಾನೂನು ಜಾಗೃತಿ ಜಾತಾದಲ್ಲಿ ಪಾಲ್ಗೊಂಡು ಕಾನೂನು ಜ್ಞಾನ ತಿಳಿದುಕೊಂಡರು ಮತ್ತು ತಮ್ಮ ಹಕ್ಕಿಗಾಗಿ ಹೋರಾಟ ನಡೆಸುತ್ತಿದ್ದಾರೆ…
ಇನ್ನು ಫೆಬ್ರುವರಿ 15 ರಿಂದ ಆರಂಭವಾದ ಅಭಿಯಾನದಲ್ಲಿ ಎಲ್ಲಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಅರಣ್ಯವಾಸಿಗಳ ಕಾನೂನು ಅಭಿಯಾನ ಜಾಗೃತಿ ಜಾಥವು ಜಿಲ್ಲೆಯ 163 ಗ್ರಾ.ಪಂ ವ್ಯಾಪ್ತಿಯಲ್ಲಿ ನಡೆಯಲಿದೆ, ಈಗಾಗಲೆ 99 ಕಡೆ ಯಶಸ್ವಿಯಾಗಿ ನಡೆದಿದೆ, ಹೋರಾಟಗಾರರ ಸಂಘಟನೆಯ ರಾಜ್ಯದ 16 ಜಿಲ್ಲೆಗಳಲ್ಲಿ ಜಾಗೃತಾ ಕಾರ್ಯಕ್ರಮ ಕೂಡಾ ನಡೆಯಲಿದೆ ಅಂತೆ.ರಾಜ್ಯಾದಂತ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ಕಳೆದ 33 ವರ್ಷದಿಂದ ಸಾಂಘಿಕ ಮತ್ತು ಕಾನೂನತ್ಮಕ ವಿವಿಧ ರೀತಿಯ ಹೋರಾಟಗಳನ್ನ ಮಾಡಿಕೊಂಡು ಬಂದ್ರು ಕೂಡಾ ಸರಕಾರದಿಂದ ಅರಣ್ಯವಾಸಿಗಳಿಗೆ ಪಟ್ಟ ನೀಡಲು ಸಾದ್ಯವಾಗುತ್ತಿಲ್ಲ, ಇದರೊಂದಿಗೆ ಮುಂದೆ ಅರಣ್ಯವಾಸಿಗಳು ಕಾನೂನು ಹೋರಾಟ ನಡೆಸುವ ನಿಟ್ಟಿನಲ್ಲಿ ಕಾನೂನು ಜ್ಞಾನ ಹೆಚ್ಚಿಸಲು ಜಾಗೃತಿ ಜಾಥಾ ಅಭಿಯಾನ ಶುರುವಾಗಿ ಈಗ ಯಶಸ್ಸು ಕಾಣುತ್ತಿದೆ…
ಹೋರಾಟವೇ ಮುಖ್ಯ ದೇಯ ಎಂದುಕೊಂಡು ಹಕ್ಕಿಗಾಗಿ ಪರದಾಡುತ್ತಿರುವ ಉತ್ತರ ಕನ್ನಡ ಜಿಲ್ಲೆಯ ಅರಣ್ಯವಾಸಿಗಳು ಕಾನೂನು ಜಾಗೃತಿ ಅಭಿಯಾನ ಶುರುಮಾಡಿ ಈಗ ಯಶಸ್ಸು ಕಾಣುತ್ತಿದ್ದಾರೆ.
ಇದನ್ನೂ ಓದಿ