ಸುದ್ದಿಬಿಂದು ಬ್ಯೂರೋ
ಶಿರಸಿ : ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಾಹಕ ನಿರ್ವಹಿಸುತ್ತಿದ್ದ ಇಬ್ಬರೂ ಶಿಕ್ಷಕರಿಂದ ಶಿಕ್ಷಣ ಇಲಾಖೆಯಲ್ಲಿ (Education department) ಕಾರ್ಯ ನಿರ್ವಹಿಸುವ ಅಧಿಕ್ಷಕಿ ಹಾಗೂ ಇನ್ನೋರ್ವ ವ್ಯಕ್ತಿ ಸೇರಿ ಏಳು ಲಕ್ಷ ಹಣ (seven lakh) ಪಡೆದು ವಂಚಿಸಿರುವ (fraud) ಕುರಿತು ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಹಳಗಾದ ಶಿವಾಜಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ನವೀನ ಡಿ.ಗಾಂವಕರ ಹಾಗೂ ಶಿರಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ (field education officer) ಅಧಿಕ್ಷಕಿಯಾಗಿರುವ ಪುಷ್ಪಾ ಮಾಜಾಳಿಕರ್ ಈ ಇಬ್ಬರೂ ಸೇರಿಕೊಂಡು ವಂಚನೆ ಮಾಡಿದವರಾಗಿದ್ದಾರೆ ಎನ್ನಲಾಗಿದೆ.

ಶಿರಸಿ ನಗರದ ನೆಹರುನಗರದ ಖಾಸಗಿ ಶಾಲೆಯಲ್ಲಿ (private school)ಶಿಕ್ಷಕರಾಗಿರುವ ಪ್ರದೀಪ ನಾರಾಯಣ ನಾಯಕ ಎಂಬುವವರಿಗೆ ಸರಕಾರಿ ಶಾಲೆಯಲ್ಲಿ ಶಿಕ್ಷಕ ಹುದ್ದೆ ಕೊಡಿಸುವುದಾಗಿ ನವೀನ ಗಾಂವಕರ 5ಲಕ್ಷ ಹಣ ಪಡೆದುಕೊಂಡಿದ್ದು,

ಇನ್ನೂ ಅದೆ ರೀತಿ ಪುಷ್ಪಾ ಮಾಜಾಳಿಕರ್ ಇವರಿಂದ 2ಲಕ್ಷ ಹಣ ಪಡೆದಿಕೊಂಡು, ಕೆಲಸ ಕೊಡಿಸದೆ ಮೋಸ ಮಾಡಿದ್ದಾರೆ, ಈ ಬಗ್ಗೆ ವಂಚನೆಗೆ ಒಳಗಾಗಿರುವ ಪ್ರದೀಪ ನಾಯಕ ಅವರು ಶಿರಸಿ ನಗರದ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ(sirsi new market police station) ಮೋಸ ಮಾಡಿರುವ ನವೀನ ಗಾಂವಕರ ಹಾಗೂ ಪುಷ್ಪಾ ಮಾಜಾಳಿಕರ್ ಎಂಬುವವರ ವಿರುದ್ಧ ದೂರು ನೀಡಿದ್ದಾರೆ.ಇಬ್ಬರ ವಿರುದ್ಧ ಎಫ್ ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಬಂಧನಕ್ಕೆ ಮುಂದಾಗಿದ್ದು, ಪ್ರಕರಣ ದಾಖಲಾಗುತ್ತಿದ್ದಂತೆ ಇಬ್ಬರೂ ತಲೆ ಮರೆಸಿಕೊಂಡಿದ್ದಾರೆ ಎನ್ನಲಾಗಿದೆ‌.