suddibindu.in
ಅಂಕೋಲಾ : ಶಿರೂರು ಬಳಿ ಗುಡ್ಡಕುಸಿತ ಉಂಟಾಗಿ ಹತ್ತು ಮಂದಿ ಸಾವನ್ನಪ್ಪಿ ಮೂರಕ್ಕೂ ಹೆಚ್ಚು ಮನೆಗಳು ನೆಲಸಮವಾಗಿದ್ದು, ತೆರವು ಕಾರ್ಯಮುಂದುವರೆದಿದೆ. ದುರಂತ ಈ ದುರಂತ ಸ್ಥಳಕ್ಕೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ನಾಳೆ ಶನಿವಾರ ಶಿರೂರಿಗೆ ಆಗಮಿಸಲಿದ್ದಾರೆಂದು ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ ಮಾಹಿತಿ ನೀಡಿದ್ದಾರೆ.
ಅವರು ಬೆಂಗಳೂರಿನಿಂದ ಹುಬ್ಬಳ್ಳಿಗೆ ಆಗಮಿಸಿ ಅಲ್ಲಿದ್ದ ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಲಿದ್ದಾರೆ. ಮೊದಲು ಗುಡ್ಡಕುಸಿತ ಸ್ಥಳಕ್ಕೆ ಆಗಮಿಸಿ ಬಳಿಕ ಮನೆ ಕುಸಿತವಾಗಿರುವ ಉಳುವರೆ ಗ್ರಾಮಕ್ಕೆ ತೆರಳಿ ಪರಿಶೀನೆ ನಡೆಸಲಿದ್ದಾರೆ. ಬಳಿಕ ಅವರು ಇಲ್ಲಿಂದ ಗೋವಾಕ್ಕೆ ತೆರಳಿ ಅಲ್ಲಿಂದ ದೆಹಲಿಗೆ ಪ್ರಯಾಣಿಸಲಿದ್ದಾರೆ.
ನಾಳೆ ಶಿರೂರಿಗೆ ಆಗಮಿಸಲಿರುವ ಕೇಂದ್ರ ಸಚಿವ ಕುಮಾರಸ್ವಾಮಿ
