ಸುದ್ದಿಬಿಂದು ಬ್ಯೂರೋ
ಶಿರಸಿ: ಜಿಲ್ಲೆಯ ಅಭಿವೃದ್ಧಿ ವಿಷಯಗಳು ಬಂದಾಗ ಪರಿಸರ ವಾದಿಗಳ ಕಾರಣ ನೀಡುವ ಹಿಂದೂ ಹುಲಿ ಚುನಾವಣೆ ಬಂದಾಗ ಕೂಗುವುದು ಜಿಲ್ಲೆಯ ಜನಗಳಿಗೆ ಅಸಹ್ಯವಾಗಿದೆ.ಇಂತಹ ನಕಲಿ ನಾಯಕರ ಅವಶ್ಯಕತೆ ಈ ಜಿಲ್ಲೆಗೆ ಬೇಕಾಗಿಲ್ಲವೆಂದು ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಅಧ್ಯಕ್ಷ ಪ್ರಸನ್ನ ಶೆಟ್ಟಿ ಹೇಳಿದ್ದಾರೆ.

ಹಿಂದಿನ ಕಾಲದಲ್ಲಿ ರಸ್ತೆಯಲ್ಲಿ ಟಾರ್ ವಾಸನೆ ಬಂದಾಗ ಜನಗಳು ಚುನಾವಣೆ ಹತ್ತಿರ ಬಂದಿರಬೇಕು ಎಂದು ಮಾತನಾಡುತ್ತಿದ್ದರು ಆದರೆ ಈಗ ಕಾಲ ಬದಲಾಗಿದೆ, ಬೊಗಳೆ ಭಾಷಣ ಭಾವನಾತ್ಮಕವಾಗಿ ಕೂಗಿದರೆ ಜನಗಳು ಚುನಾವಣೆ ಬಂದಿರಬೇಕು ಎಂದು ಮಾತನಾಡುವ ಪರಿಸ್ಥಿತಿ ಬಂದಿದೆ. ನಾಲ್ಕು ವರೆ ವರ್ಷ ಕಾಣೆಯಾಗಿದ್ದ ಸಂಸದರು ತಮ್ಮ ವಿಲಾಸಿ ಜೀವನದ ಸಮಯದಲ್ಲಿ ಒಮ್ಮೆಯಾದರೂ ದೇವರಿಗೆ ಆಗರಾಬತ್ತಿ ಹಚ್ಚಿದ್ದಾರಾ ತಿಳಿಕೊಳ್ಳಬೇಕು.

ಇಂತಹ ನಕಲಿ ನಾಯಕರಿಂದ ಜಿಲ್ಲೆಗೆ ಹಾನಿಕಾರಕ. ಬಾಯಲ್ಲಿ ಮುಸ್ಲಿಂ ವಿರೋದಿಯಾದ ಸ್ವಯಂ ಘೋಷಿತ ಹಿಂದೂ ಹುಲಿ ತನ್ನ ಸುತ್ತಲು ಮತ್ತು ಬೇನಾಮಿಯಾಗಿ ಇದ್ದವರೆಲ್ಲ ಮುಸ್ಲಿಂ ಭಾಂದವರೇ.ಕೇವಲ ಮತಕ್ಕಾಗಿ ಈ ಬೂಟಾಟಿಕೆಗಳನ್ನು ನಿಲ್ಲಿಸಿ ಅಭಿವೃದ್ಧಿ ಮತ್ತು ಜನರ ಹಿತಕ್ಕಾಗಿ ದುಡಿಯಲಿ ಅದನ್ನ ಬಿಟ್ಟು ಚುನಾವಣೆ ಬಂದಾಗ ಇಲ್ಲ ಸಲ್ಲದ ಮಾತುಗಳನ್ನ ಹೇಳಿ ಯುವ‌ಸಮುದಾಯವನ್ನ ದಾರಿ ತಪ್ಪಿಸುವುದು ಬೇಡ.

ಇಷ್ಟೆಲ್ಲಾ ಮಾತನಾಡುವ ಈ ಸಂಸದನಿಗೆ ಆರು ಬಾರಿ ಆಯ್ಕೆ ಆದಾಗ ಭಟ್ಕಳದ ಚಿನ್ನದ ಪಳ್ಳಿ, ಶಿರಸಿ ಪಳ್ಳಿ ನೆನಪಾಗಲಿಲ್ಲ.ಈಗ ಯಾವ ವಿಚಾರವನ್ನಾದರೂ ಎತ್ತಿ ಜಿಲ್ಲೆಯಲ್ಲಿ ಶಾಂತಿ ಕದಡುವ ಕೆಲಸ ಮಾಡಲು ಮುಂದಾಗಿದ್ದಾರೆ. ಈ ಬಾರಿ ಟಿಕೆಟ್ ಸಿಗುವುದಿಲ್ಲ ಎಂಬುದು ಪಕ್ಕಾ ಆಗಿದೆ ಹಾಗಾಗಿ ಕೈಲಾಗದವರು ಮೈ ಎಲ್ಲಾ ಪರಚಿಕೊಂಡರು ಎನ್ನುವ ಹಾಗೆ ಏನಾದರೂ ಮಾಡಿ ಜಿಲ್ಲೆಯಲ್ಲಿ ಶಾಂತಿ ಕೆಡಿಸಿ ತಾನು ಮಜಾ ನೋಡಬೇಕು ಎನ್ನುವ ವಿಚಾರದಲ್ಲಿ ಈ ರೀತಿ ಮಾತನಾಡುತ್ತಿದ್ದಾರೆ.

ಹಿಂದೂ ರಕ್ತದ ಬಗ್ಗೆ ಮಾತನಾಡುವ ಇವರು ಹೊನ್ನಾವರದ ಪರೇಶಮೆಸ್ತಾ ಅವರ ಪ್ರಕರಣದಲ್ಲಿಯೂ ಹನಿ ರಕ್ತಕ್ಕೂ ನ್ಯಾಯಕೊಡಿಸುವುದಾಗಿ ದೊಡ್ಡದಾಗಿ ಮಾತನಾಡಿದ್ದರು.ಆದರೆ ಆ ತೀರ್ಪು ಏನಾಯತು,ಹೊರಾಟ ಮಾಡಿದವರ ಪರಿಸ್ಥಿತಿ ಏನಾಯತು ಎನ್ನುವುದನ್ನ ವಿಚಾರಿಸಿಲ್ಲ.ಈಗ ಮತ್ತೆ ರಕ್ತದ ವಿವಾರವನ್ನ ಮಾಡನಾಡುತ್ತಿದ್ದಾರೆ. ಜಿಲ್ಲೆಯ ಜನ ಬುದ್ದಿವಂತರಾಗಿದ್ದಾರೆ.

.