ಸುದ್ದಿಬಿಂದು ಬ್ಯೂರೋ
ರಾಣೆಬೆನ್ನೂರು (ಶಿರಸಿ) : ಮಗಳನ್ನು ದುಬೈಗೆ ಕಳುಹಿಸಿ ಊರಿಗೆ ವಾಪಸ್ ಆಗುತ್ತಿದ್ದ ವೇಳೆ ಕಾರು ಮರಕ್ಕೆ ಡಿಕ್ಕಿ(Car accident) ಹೊಡೆದ ಪರಿಣಾಮವಾಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಉತ್ತರಕನ್ನಡ ಜಿಲ್ಲೆಯ ಶಿರಸಿ(Sirsi) ಮೂಲದ ಇಬ್ಬರೂ ಸ್ಥಳದಲ್ಲೆ ಮೃತಪಟ್ಟಿರುವ ಘಟನೆ.ರಾಣೆನ್ನೂರು (ranebennur) ತಾಲೂಕಿನ ಇಟಗಿ ಮುಖ್ಯರಸ್ತೆಯ ತೇರೆದಹಳ್ಳಿಯಲ್ಲಿ ನಡೆದಿದೆ.
ಅಪಘಾತದಲ್ಲಿ ಶಿರಸಿ ಮೂಲದವರಾದ ಗಣೇಶ ದೈವಜ್ಞ (47) ಜಯಂತಿ ದಿನೇಶ ಶೇಟ್ (50) ಮೃತರು. ಬೆಂಗಳೂರಿನಿಂದ ಶಿರಸಿಗೆ (bangalore to sirsi) ಪ್ರಯಾಣಿಸುತ್ತಿದ್ದ ವೇಳೆ ಈ ಅಪಘಾತ ಉಂಟಾಗಿದೆ.
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ. (kempegowda airport) ಮಗಳನ್ನು ದುಬೈಗೆ (dubai) ಕಳುಹಿಸಿ ಊರಿಗೆ ಹಿಂದಿರುಗುತ್ತಿದ್ದ ವೇಳೆ ಈ ದುರಂತ ನಡೆದಿದ್ದು, ನಿದ್ದೆಗಣ್ಣಿನಲ್ಲಿ ಕಾರು ಚಲಾಯಿಸಿದ್ದರಿಂದ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಈ ಬಗ್ಗೆ ಹಲಗೇರಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.