ಕುಮಟ : ಮಾರ್ಚ್ 15ರಂದು ಫಲಾನುಭವಿಗಳ ಸಮ್ಮೇಳನ ಹಾಗೂ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಬೇಕಿದ್ದ ಸಿ ಎಂ ಪ್ರವಾಸವನ್ನ 17ಕ್ಕೆ ಮುಂದುಡಲಾಗಿದೆ.
ಮಾರ್ಚ್ 15ರಂದು ಸಿ ಎಂ ಬಸವರಾಜ್ ಬೊಮ್ಮಾಯಿ ಅವರು ಪಟ್ಟಣದ ಮಣಕಿ ಮೈದಾನದಲ್ಲಿ ಆಯೋಜನೆ ಮಾಡಲಾಗಿದ್ದ ಫಲಾನುಭವಿಗಳ ಸಮ್ಮೇಳ ಹಾಗೂ ಮಿನಿ ವಿಧಾನಸೌಧ ಉದ್ಘಾಟನೆ ಹಾಗೂ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೇರವೆರಿಸಬೇಕಿತ್ತು.
ಆದರೆ ಅನಿರ್ವಾಯ ಕಾರಣದಿಂದ ಮಾರ್ಚ್ 15ಕ್ಕೆ ನಡೆಯಬೇಕಿದ್ದ ಸಿ ಎಂ ಕಾರ್ಯಕ್ರಮವನ್ನ ಇದೀಗ ಮಾರ್ಚ್ 17ರಂದು ನಡೆಸಲು ಜಿಲ್ಲಾಡಳಿತ ನಿರ್ಧರಿಸಿದ್ದು, ಅಂದು ನಡೆಯಲಿರುವ ಎಲ್ಲಾ ಕಾರ್ಯಕ್ರಮದಲ್ಲಿ ಸಿ ಎಂ ಬಸವರಾಜ್ ಬೊಮ್ಮಾಯಿ ಪಾಲ್ಗೊಳ್ಳಲಿದ್ದಾರೆ