ಜೊಯೀಡಾ: ಗೋವಾ ದಿಂದ ಕರ್ನಾಟಕದತ್ತ ಅಕ್ರಮವಾಗಿ ಗೋವಾ ಮದ್ಯ ಸಾಗಾಟ ಮಾಡಿತಿದ್ದ ವಾಹನ ಹಾಗೂ ಓರ್ವ ವ್ಯಕ್ತಿಯನ್ನು ಬಂಧಿಸಿದ ಘಟನೆ.

ಜೊಯಿಡಾತಾಲೂಕಿನ ಅನಮೋಡ ಅಬಕಾರಿ ತನಿಖಾ ಠಾಣೆಯಲ್ಲಿ ನಡೆದಿದೆ. ಗೋವಾ ಮದ್ಯ ಸಾಗಾಟ ಮಾಡುತ್ತಿದ್ದ ಆಂದ್ರಪ್ರದೇಶ ಮೂಲದ ರಾಮಿರೆಡ್ಡಿ ಬಾಲಗಂಗಿರೆಡ್ಡಿ ಎಂಬುವವನನ್ನು ಬಂಧಿಸಲಾಗಿದ್ದು ಬಂಧಿತರಿಂದ 178.200 ಲೀಟರ್ ನ 8,28600 ರೂ ಮೌಲ್ಯದ ಗೋವಾ ಮದ್ಯ ಬೋಲೆನೋ ವಾಹನ ವಶಕ್ಕೆ ಪಡೆಯಲಾಗಿದೆ.

ಅಬಕಾರಿ ದಾಳಿಯಲ್ಲಿ ಅಬಕಾರಿ ಉಪ ಆಯುಕ್ತ ಜಗದೀಶ ಎನ್. ಕೆ ಮತ್ತು ಶಂಕರಗೌಡ ಪಾಟೀಲ ಅಬಕಾರಿ ಉಪ ಅಧೀಕ್ಷಕರು ಯಲ್ಲಾಪುರ ಇವರ ಮಾರ್ಗದರ್ಶನದಲ್ಲಿ ಅಬಕಾರಿ ಉಪನಿರೀಕ್ಷಕ ಶ್ರೀಕಾಂತ ಬಿ ಅಸೂದೆ ಅಬಕಾರಿ ಸಿಬ್ಬಂದಿಗಳಾದ ಬಾಲಕೃಷ್ಣ ಕೆ, ಆರ್ ಎನ್ ನಾಯಕ ಪಾಲ್ಗೊಂಡಿದ್ದರು.