suddibindu.in
ಅಂಕೋಲಾ: ಸರಕಾರದ ಸಮಸ್ತ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯಕ್ಕೆ ಸ್ಥಳೀಯ ಯುವಕರು ಮುಂದಾಗಿ ಅವರ ಕಷ್ಟಗಳಿಗೆ ಸ್ಪಂದಿಸುವಂತಾಗಬೇಕು, ಶಿಕ್ಷಕರ ಸಮ್ಮುಖದಲ್ಲಿ ಅವರ ವಿದ್ಯಾರ್ಥಿಗಳು ಸನ್ಮಾನಕ್ಕೊಳಪಡುವುದು, ಶಿಕ್ಷಕರಿಗೆ ಆನಂದದ ಮಹಾಪೂರವೇ ಸರಿ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ ಹೇಳಿದರು.

ತೆಂಕಣಕೇರಿಯ ವೆಂಕಟರಮಣ ದೇವಸ್ಥಾನದ ಸಭಾಭವನದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜೀವನದಲ್ಲಿ ಅನುಭವವೇ ಸಾಧನೆಗೆ ದಾರಿದೀಪ, ಮುಂದಿನ ದಿನಗಳಲ್ಲಿ ತಾಲೂಕಮಟ್ಟದಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಸನ್ಮಾನಿಸುವಂತಾಗಬೇಕು,ಶೈಕ್ಷಣಿಕವಾಗಿ ಮುಂದುವರೆದರೆ ಮಾತ್ರ ಆರ್ಥಿಕವಾಗಿ ಪ್ರಭಲರಾಗಲು ಸಾಧ್ಯ,ತಾಲೂಕಿನ ಸಾಂಸ್ಕೃತಿಕ ಲೋಕದ ರಾಯಬಾರಿಯಾಗಿ ಗುರುತಿಸಿಕೊಂಡಿರುವ ಈ ಗ್ರಾಮ ಶೈಕ್ಷಣಿಕವಾಗಿಯೂ ಮುಂದುವರೆಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು. ಈ ಸಂದರ್ಭದಲ್ಲಿ ತೆಂಕಣಕೇರಿ ಸಭಾಭವನಕ್ಕೆ ಶಾಸಕರಿಗೆ ಮನವಿ ಮಾಡಿ ಅನುದಾನಗಳನ್ನು ಕೊಡಿಸಲು ಪ್ರಯತ್ನಿಸುವೆ ಎಂದರು.

ಕಾರ್ಯಕ್ರಮದ ಉದ್ಗಾಟಕರಾಗಿ ಆಗಮಿಸಿ ಮಾತನಾಡಿದ ಜಿಪಂ ಮಾಜಿ ಸದಸ್ಯ ಜಗದೀಶ ನಾಯಕ ಮೊಗಟಾ, ಸಾಂಸ್ಕೃತಿಕ ಮನಸುಗಳ ತವರೂರುರಾದ ತೆಂಕಣಕೇರಿ ಗ್ರಾಮದಲ್ಲಿ ಇಂತಹ ಕಾರ್ಯಕ್ರಮಗಳ ಮೂಲಕ ಹಲವಾರು ಪ್ರತಿಭೆಗಳನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಶ್ಲಾಘನೀಯ, ಕಲಾ ಪೋಷಕರಿಂದ ಮಾತ್ರ ಕಲಾವಿದರ ಬೆಳವಣಿಗೆಗೆ ಸಹಕಾರಿ,ಒತ್ತಡದ ಜೀವನದಲ್ಲಿ ಸಂಗೀತ ಸಂಜೆಯಂತಹ ಕಾರ್ಯಕ್ರಮಗಳು ಮನಸ್ಸಿಗೆ ಉಲ್ಲಾಸ ನೀಡುತ್ತದೆ ಎಂದರು.

ಹಿರಿಯ ಪತ್ರಕರ್ತ ವಿಠ್ಠಲದಾಸ್ ಕಾಮತ ಮಾತನಾಡಿ ಶ್ರೀಕಾಂತ ನಾಯ್ಕರವರಂತ ಸಂಘಟಕ ಹಾಗೂ ಕಲಾಪೋಷಕರಿದ್ದರೆ ಮಾತ್ರ ಕಾರ್ಯಕ್ರಮಗಳು ರೂಪುಗೊಳ್ಳಲು ಸಾಧ್ಯ,ಸಾಂಸ್ಕೃತಿಕ ಮತ್ತು ಶೈಕ್ಷಣಿಕ ವಿಭಾಗದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಗೌರವಿಸುವ ಕಾರ್ಯದಿಂದ ಅವರಿಗೆ ಮತ್ತಷ್ಟು ಸಾಧನೆಮಾಡಲು ಪ್ರೋತ್ಸಾಹಿಸುವಂತಾಗುತ್ತದೆ ಎಂದರು.

ಮಹಾಲಸಾ ರಂಗಸಜ್ಜಿಕೆಯ ಮಾಲಕ ಮೋಹನ ನಾಯ್ಕ, ಹಾರ್ಮೋನಿಯಂ ವಾದಕ ಅಭಯ ಮರಬಳ್ಳಿ, ಹಾರ್ಮೋನಿಯಂ ವಾದಕ ಮತ್ತು ಶಿಕ್ಷಕ ಗಣೇಶ ನಾಗ್ವೇಕರ, ಸಂಗೀತ ಶಿಕ್ಷಕ ಕೃಷ್ಣಮೂರ್ತಿ ಗುನಗಾ, ತಬಲಾ ವಾದಕ ಶಶಿಧರ ಭಟ್, ಕೃಷಿ ಸಾಧಕಿ ತುಳಸೀ ಗೌಡ, ಸಾಮಾಜಿಕ ಕಾರ್ಯಕರ್ತ ಮಂಜುನಾಥ ಹರಿಕಂತ್ರ ಜೂಗ, ನಿವೃತ್ತ ಪೊಲೀಸ್ ಅಧಿಕಾರಿ ಹನುಮಂತ ನಾಯ್ಕ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾವಿದ್ಯಾರ್ಥಿ ಒಕ್ಕೂಟದ ರಾಜ್ಯಾಧ್ಯಕ್ಷ ರಾಘು ನಾಯ್ಕ,ಬೊಬ್ರುವಾಡ ಗ್ರಾಪಂ ಸದಸ್ಯ ಜೈವಂತ್ ನಾಯ್ಕ,ಮಾಜಿ  ಸದಸ್ಯ ರಾಜೇಶ್ ಎಂ ನಾಯ್ಕ,ವೆಂಕಟರಮಣ ದೇವಸ್ಥಾನದ ಅಧ್ಯಕ್ಷ ಅನಂದು ನಾಯ್ಕ,ನಿವೃತ್ತ ಮುಖ್ಯಾಧ್ಯಾಪಕಿ ಸುಶೀಲಾ ಆಗೇರ ಮುಂತಾದವರು ಉಪಸ್ಥಿತರಿದ್ದು ಮಾತಾನಾಡಿದರು.ಪತ್ರಕರ್ತ ಸುಭಾಷ್ ಕಾರೇಬೈಲ್ ಕಾರ್ಯಕ್ರಮವನ್ನು ನಿರೂಪಿಸಿದರು.


ಪಿಯುಸಿ ದ್ವಿತೀಯ ಪರೀಕ್ಷೆಯಲ್ಲಿ ರಾಜ್ಯಕ್ಕೆ 8 ನೇ ರ್ಯಾಂಕ್ ಪಡೆದ ಮಾನ್ಯ ಮಂಜುನಾಥ ನಾಯ್ಕ,ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಹಾಗೂ ಜಿಲ್ಲೆಗೆ ನಾಲ್ಕನೇ ಸ್ಥಾನ ಪಡೆದ ಅಶ್ವಿನಿ ಬಾಲಕೃಷ್ಣ ನಾಯ್ಕ, ತಾಲೂಕಿಗೆ ದ್ವಿತೀಯ ಸ್ಥಾನ ಪಡೆದ ಶ್ರೀನಿಧಿ ಸುರೇಶ ನಾಯ್ಕ, ತ್ರಿಶಾ ನಾಗರಾಜ ರಾಯ್ಕರ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.