ಸುದ್ದಿಬಿಂದು ಬ್ಯೂರೋ ವರದಿ
Karwar:ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯಲ್ಲಿನ ರಾಷ್ಟ್ರೀಯ ಹೆದ್ದಾರಿ ರಾಜ್ಯ ಹೆದ್ದಾರಿಯಲ್ಲಿ ಭಾರೀ ಪ್ರಮಾಣದ ಹೊಂಡವಾಗಿ ವಾಹನ ಸವಾರರು ಪರದಾಡುವಂತಾಗಿದೆ. ಹೀಗಾಗಿ ಶೀಘ್ರದಲ್ಲಿ ಹೆದ್ದಾರಿಯಲ್ಲಿ ಉಂಟಾಗಿರುವ ಅವ್ಯವಸ್ಥೆಯನ್ನ ಸರಿ ಪಡಿಸಬೇಕುಲ್ಲದೆ ಹೋದರ ಉಗ್ರ ಹೋರಾಟ ಮಾಡುವುದಾಗಿ ಕರ್ನಾಟಕ ರಕ್ಷಣಾವೇದಿಕೆಯ ಜಿಲ್ಲಾಧ್ಯಕ್ಷ ಭಾಸ್ಕರ್ ಪಟಗಾರ ಎಚ್ಚರಿಕೆ ನೀಡಿದ್ದಾರೆ.
ಕಾರವಾರದ ಜಿಲ್ಲಾ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯು ಭೌಗೋಳಿಕವಾಗಿ ವಿಸ್ತೀರ್ಣ ಹೊಂದಿರುವ ಜಿಲ್ಲೆಯಾಗಿದ್ದು ಸಾಕಷ್ಟು ಗುಡ್ಡಗಾಡಿನಲ್ಲಿ ಜನವಸತಿ ಪ್ರದೇಶಗಳ ಜಾಸ್ತಿಯಾಗಿದ್ದು ರಾಷ್ಟ್ರೀಯ ಹೆದ್ದಾರಿಗಳು ರಾಜ್ಯ ಹೆದ್ದಾರಿಗಳು ಗ್ರಾಮೀಣ ರಸ್ತೆಗಳು ಸಾಕಷ್ಟು ಔದ್ಯೋಗಿಕ ವ್ಯಾಪಾರಿಕ ಪ್ರವಾಸೋದ್ಯಮ ರಸ್ತೆಗಳೇ ಮೂಲಭೂತವಾಗಿ ಜಿಲ್ಲೆಗೆ ತೀರಾ ಅವಶ್ಯಕತೆ ಇದೆ ಆದರೆ ಇತ್ತೀಚಿಗೆ ಸುರಿದ ಮಳೆಯಿಂದಾಗಿ ರಸ್ತೆಗಳು ಸಂಪೂರ್ಣ ಹಾಳಾಗಿ ಹೊಂಡ ಬಿದ್ದು ರಸ್ತೆ ಸಂಚಾರ ಮಾಡಲು ದಿನನಿತ್ಯ ಸಾವಿರಾರು ವಾಹನ ಸವಾರರು ಹರಸಾಹಸ ಪಡುವಂತಾಗಿದೆ.
ಪ್ರತಿ ವರ್ಷವೂ ಅಭಿವೃದ್ಧಿಯ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ರಸ್ತೆಯನ್ನು ಸರಿಪಡಿಸುವ ಕಾಮಗಾರಿಯನ್ನು ಮಾಡಿರುತ್ತಾರೆ ಆದರೆ ಮತ್ತೊಂದು ಮಳೆಗಾಲ ಪ್ರಾರಂಭವಾದರೆ ಅದೇ ದುಸ್ಥಿತಿ ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ. ಈ ವರ್ಷದ ಭಾರಿ ಮಳೆಗೆ ಜಿಲ್ಲೆಯ ಶಿರಸಿ, ಕುಮಟಾ ಭಟ್ಕಳ ಹೊನ್ನಾವರ ಮುಂಡಗೋಡ ಯಲ್ಲಾಪುರ ಅಂಕೋಲಾ ಸಂಪೂರ್ಣ ಹೆದ್ದಾರಿಗಳು ಗ್ರಾಮೀಣ ರಸ್ತೆಗಳು ತೀರ ಹದಗಟ್ಟಿದ್ದು ವಾಹನ ಸಂಚಾರ ಮಾಡಲು ಅಸಾಧ್ಯವಾಗಿದೆ.
ವಾಹನಗಳು ಈ ರಸ್ತೆಯಲ್ಲಿ ಸಂಚರಿಸಿ ಗ್ಯಾರೇಜ್ ಸೇರಬೇಕಾದ ಪರಿಸ್ಥಿತಿ ಇದೆ. ಹೀಗಾಗಿ ಕೂಡಲೇ ಸಂಬಂಧಪಟ್ಟ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಂದ ಸಂಪೂರ್ಣ ಹೊಂಡ ಬಿದ್ದಿರುವುದನ್ನು ಸರಿಪಡಿಸಿ ಕಾಮಗಾರಿಯನ್ನ ಕೂಡಲೇ ಕೈಗೊಂಡು ವಾಹನ ಸವಾರರಿಗೆ ಅನುಕೂಲ ಮಾಡಿಕೊಡಬೇಕು.
ಇಲ್ಲದೆ ಹೋದರೆ 15 ದಿನದ ಒಳಗಾಗಿ ಜಿಲ್ಲೆಯಲ್ಲಿರುವ ಎಲ್ಲಾ ರಸ್ತೆಗಳ ಹೊಂಡಗಳನ್ನ ಮುಚ್ಚಿ ವಾಹನ ಸವಾರರಿಗೆ ಸಾರ್ವಜನಿಕರಿಗೆ ಸಂಚಾರ ಮಾಡಲು ಅವಕಾಶ ಮಾಡಿಕೊಡಬೇಕು ಇಲ್ಲವಾದಲ್ಲಿ ರಸ್ತೆಯನ್ನು ಬಂದ್ ಮಾಡುವ ಮುಖಾಂತರ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಗಮನಿಸಿ