ಕಾರವಾರ: ಶಿರೂರು ಗುಡ್ಡ ಕುಸಿತ ದುರಂತಕ್ಕೆ ಸಂಬಂಧಿಸಿ ಶಾಸಕರರಾದ ಸತೀಶ ಶೈಲ್ ಅವರ ಕಾರ್ಯ ಪ್ರಶಂಸೆಯ ಅಲ್ಲದೇ ಮಾನವೀಯ ಮೌಲ್ಯತೆ ಮೇರೆದ ಅವರಿಗೆ ಅಭಿನಂದನಾರ್ಹ ಹಾಗೂ ಇನ್ನಿತರರ ಶೋಧ ಕಾರ್ಯ ಮುಂದುವರಿಯಲಿ ಎಂದು ಸರ್ಕಾರಕ್ಕೆ ಹೋರಾಟಗಾರ ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ.
ಅವೈಜ್ಞಾನಿಕ ಕಾಮಗಾರಿಯಿಂದ ಉಂಟಾದ ದುರಂತ ದುರದಷ್ಟಕರವಾಗಿದ್ದು,ನೈಸರ್ಗಿಕ ವಿಕೋಪದಿಂದ ಸರ್ಕಾರ ಮತ್ತು ಜಿಲ್ಲಾಡಳಿತದ ಕಾರ್ಯ ಗಮನಾರ್ಹವಾದ್ದದ್ದು ಎಂದು ಅವರು ಇಂದು ದುರಂತ ಸ್ಥಳಕ್ಕೆ ಭೇಟಿ ನೀಡಿ ಇನ್ನಿತರರ ಶೋಧ ಕಾರ್ಯ ಪರಿಶೀಲಿಸಿದ ಸಂದಂರ್ಭದಲ್ಲಿ ಮೇಲಿನಂತೆ ಹೇಳಿದರು.
ಜನಪ್ರತಿನಿಧಿಯಾಗಿ ವೈಯಕ್ತಿಕ ಮತ್ತು ಕ್ಷೇತ್ರದ ಹಿತಾಶಕ್ತಿಯಿಂದ ಅದಿನಿಂದ ಇಂದಿನವರೆಗೂ ಶಾಸಕ ಸತೀಶ್ ಸೈಲ್ ಅವರ ಕಾರ್ಯ, ಕಳಕಳಿ, ಮುತುವರ್ಜಿ ಮತ್ತು ಬದ್ಧತೆ ಹಾಗೂ ಅವರು ಮೃತರ ಕುಟುಂಬಕ್ಕೆ ನೀಡಿದ ವಯಕ್ತಿಕ ಆರ್ಥಿಕ ಸಹಾಯ ಇನ್ನಿತರ ಜನಪ್ರತಿನಿಧಿಗಳಿಗೂ ಮಾದರಿಯಾದದ್ದು ಎಂದು ಅವರು ಹೇಳಿದರು.
ಅಲ್ಲದೇ ದುರಂತದಲ್ಲಿ ಉಂಟಾದ ಚರ ಮತ್ತು ಸ್ಥಿರ ಆಸ್ತಿ ನಷ್ಟಕ್ಕೆ ಹೆಚ್ಚಿನ ಪರಿಹಾರ ಹಾಗೂ ದುರಂತವನ್ನ ಮರುಕಳಿಸಿದಂತೆ ಜಿಲ್ಲಾಡಳಿತವು ಮಾಸ್ಟರ್ ಯೋಜನೆ ನಿರೂಪಿಸುವುದು ಸೂಕ್ತವೆಂದು ಜಿಲ್ಲಾಡಳಿತಕ್ಕೆ ಸಲಹೆ ಅವರು ನೀಡಿದರು.
ಕಾರ್ಯ ಮುಂದುವರೆಯಲಿ
ಇನ್ನಿತರ ಶೋಧದ ಕಾರ್ಯ ಮುಂದುವರೆಯುವದು ಅವಶ್ಯವಿದ್ದು ಜಿಲ್ಲಾಡಳಿತವು ಈ ದಿಶೆಯಲ್ಲಿ ಸೂಕ್ತ ಕ್ರಮ ಜರುಗಿಸುವದು ಅವಶ್ಯ ಎಂದು ರವೀಂದ್ರ ನಾಯ್ಕ ತಿಳಿಸಿದ್ದಾರೆ.
ಗಮನಿಸಿ