suddibindu.in
Kumta:ಕುಮಟಾ : ತಾಲೂಕಿನ ಬರ್ಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಕಿಮಾನಿ ಸಮೀಪದ ಅಘನಾಶಿನಿ ನದಿಯಲ್ಲಿ ಅಪರಿಚಿತ ಮಹಿಳೆ ಓರ್ವಳ ಶವ ಇಂದು ರವಿವಾರ ಬೆಳಿಗ್ಗೆ ಪತ್ತೆಯಾಗಿದೆ.

ನದಿಯಲ್ಲಿ ಶವವಾಗಿ ಪತ್ತೆಯಾಗಿರುವ ಮೃತ ಮಹಿಳೆಗೆ ಸುಮಾರು 45-50ವರ್ಷ ಆಗಿರಬಹುದು ಎಂದು ಅಂದಾಜಿಸಲಾಗಿದೆ. ಇಂದು ಬೆಳಿಗ್ಗೆ ಮಹಿಳೆಯ ಶವ ನದಿಯಲ್ಲಿ ತೇಲಿಕೊಂಡು ಬಂದಿದೆ. ಇದನ್ನ ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಪತ್ತೆಯಾಗಿರುವ ಮಹಿಳೆ ಸೀರೆ ಉಟ್ಟಿರುವ ಸ್ಥಿತಿಯಲ್ಲಿದ್ದು, ಇದುವರೆಗೆ ಗುರುತು ಪತ್ತೆಯಾಗಿಲ್ಲ.ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ