ಸುದ್ದಿಬಿಂದು ಬ್ಯೂರೋ ವರದಿ
ಅಂಕೋಲಾ : ತಾಲೂಕಿನ ಶಿರೂರು ಗುಡ್ಡಕುಸಿತ ಉಂಟಾಗಿ 75ದಿನ ಕಳೆದಿದ್ದು, ಮೂರನೇ ಹಂತದ ಕಾರ್ಯಚರಣೆಯಲ್ಲಿ ಲಾರಿ ಚಾಲಕ ಅರ್ಜುನ್ ಮೃತ ದೇಹ ಪತ್ತೆಯಾದ ಬೆನ್ನಲೇ ಇದೀಗ ವಿದ್ಯುತ್ ಟವರ್ ಸಿಕ್ಕಿರುವ ಸ್ಥಳದಲ್ಲೆ ಮೂಳೆ ಪತ್ತೆಯಾಗಿದ್ದು, ಯಾರಿಗೆ ಸೇರಿದ್ದು, ಎನ್ನುವುದು ತಿಳಿದು ಬರಬೇಕಿದೆ.
ಶಿರೂರು ಘಟನೆಯಲ್ಲಿ ಹನ್ನೊಂದು ಮಂದಿ ನಾಪತ್ತೆಯಾಗಿದ್ದರು. ಇದುವರೆಗೆ 9ಮಂದಿಯ ಶವ ಪತ್ತೆಯಾಗಿರಲಿಲ್ಲ.ಜಗನ್ನಾಥ ನಾಯ್ಕ ಹಾಗೂ ಲೋಕೇಶ ನಾಯ್ಕ ಅವರ ಪತ್ತೆಗಾಗಿ ಮೂರನೇ ಹಂತದಲ್ಲಿ ಕಾರ್ಯಚರಣೆ ನಡೆಸಲಾಗುತ್ತಿದ್ದು, ಈ ನಡುವೆ ಇಂದು ಮಧ್ಯಹ್ನಾ ಹೊತ್ತಲ್ಲಿ ಮೂಳೆಯೊಂದು ಪತ್ತೆಯಾಗಿದೆ.
ಕಳೆದ ಎರಡು ದಿನಗಳ ಹಿಂದೆ ವಿದ್ಯುತ್ ಟವರ್ ಪತ್ತೆಯಾಗಿತ್ತು.ಅದೆ ಸ್ಥಳದಲ್ಲಿ ಇಂದು ಮೂಳೆ ಸಹ ಪತ್ತೆಯಾಗಿದೆ. ಇದೆ ಸ್ಥಳದಲ್ಲಿ ಆಲದ ಮರ ಸಹ ಸಿಲುಕಿಕೊಂಡಿದ್ದು, ಅದೆ ಆಲದ ಮರದಲ್ಲೇ ಮೃತ ಲೋಕೇಶ ಹಾಗೂ ಜಗನ್ನಾಥ ಅವರ ಮೃತ ದೇಹ ಸಿಲಿಕೊಂಡಿರಬಹುದು ಎಂದು ಅಂದಾಜಿಸಲಾಗಿತ್ತು. ಇಂದು ಅದೆ ಸ್ಥಳದಲ್ಲಿ ಸಿಕ್ಕಿರುವ ಮೂಳೆ ಮನುಷ್ಯನದ್ದೆ ಎಂದು ಹೇಳಲಾಗುತ್ರಿದೆ. ಆದರೆ ಅದು ಜಗನ್ನಾಥ ಅಥವಾ ಲೋಕೇಶನದ್ದೊ ಇಲ್ಲ ಮೊನ್ನೆಯಷ್ಟೆ ಸಿಕ್ಕಿರುವ ಅರ್ಜುನ್ ಮೂಳೆನಾ ಎನ್ನುವುದು ಡಿಎನ್‌ಎ ತಪಾಷಣೆಯ ನಂತರಲ್ಲೇ ತಿಳಿದು ಬರಬೇಕಿದೆ.
ಸ್ಥಳದಲ್ಲೇ ಬಿಡುಬಿಟ್ಟಿರುವ ಶಾಸಕ ಸತೀಶ ಸೈಲ್
ಗಂಗಾವಳಿ ನದಿಯಲ್ಲಿ ಶೋಧ ಕಾರ್ಯ ತೀವೃಗೊಂಡಿದೆ.ಮೂಳುಗು ತಜ್ಞ ಕಾರ್ಯಚರಣೆ ಮಾಡುವ ಸಂದರ್ಭದಲ್ಲಿ ಮನುಷ್ಯನ ಮೂಳೆ ಪತ್ತೆಯಾಗಿದೆ. ಕಾರ್ಯಚರಣೆ ಸಂದರ್ಭಲ್ಲಿ ಶಾಸಕ ಸತೀಶ್ ಸೈಲ್ ಕೂಡ ಸ್ಥಳದಲ್ಲೇ ಹಾಜರಿದ್ದು, ಅದರು. ಶಾಸಕರು ಕಾರ್ಯಚರಣೆ ವೇಳೆಯಲ್ಲಿ ಇನ್ನೊಂದು ದೋಣಿಯಲ್ಲಿ ಕುಳಿತು ಕಾರ್ಯಚರಣೆ ವೀಕ್ಷಣೆ ಮಾಡುತ್ತಿರುವಾಗ ಮುಳುಗು ತಜ್ಞರ ಕೈಗೆ ನದಿಯ ಆಳದಲ್ಲಿದ್ದ ಮೂಳೆ ಪತ್ತೆಯಾಗಿದೆ…ಅದನ್ನ ಶಾಸಕ ಸತೀಶ್ ಸೈಲ್ ಕೂಡ ಪರಿಶೀಲನೆ ನಡೆಸಿದ್ದು, ಸಿಕ್ಕಿರುವ ಮೂಳೆಯನ್ನ ವೈದ್ಯಕೀಯ ತಪಾಸಣೆ ಬಳಿಕ ಈ ಮೂಳೆ ಯಾರಿಗೆ ಸೇರಿದ್ದು ಎನ್ನುವುದು ತಿಳಿದು ಬರಬೇಕಿದೆ..
ಗಮನಿಸಿ