ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ:ಉತ್ತರಕನ್ನಡ ಜಿಲ್ಲೆಯ ಗೋಕರ್ಣ ಭಾಗದಲ್ಲಿ‌ ಅನಧಿಕೃತವಾಗಿ ಬೋಟಿಂಗ್ ಉದ್ಯಮ‌ ನಡೆಸಲಾಗುತ್ತಿದ್ದು,ಇದರಿಂದಾಗಿ ಅಧಿಕೃತವಾಗಿ ಅನೇಕ ವರ್ಷಗಳಿಂದ‌ ಪ್ರವಾಸಿಗರಿಗೆ ಸುರಕ್ಷಿತವಾಗಿ ಬೋಟಿಂಗ್ ನಡೆಸುವವರಿಗೆ ಅನ್ಯಾಯವಾಗುತ್ತಿದೆ ಎಂದು ಓಂ ಬೀಚ್ ಟೂರಿಸ್ಟ್ ಅಸೋಸಿಯೇಷನ್ ಅಧ್ಯಕ್ಷ ಚಿದಾನಂದ ಲಕ್ಕುಮನೆ ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ

ಈ ಬಗ್ಗೆ ಜಿಲ್ಲಾ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯನ್ನ ಉದ್ದೇಶಿಸಿ ಮಾತನಾಡಿದ ಚಿದಾನಂದ ಲಕ್ಕುಮನೆ ಅವರು ಇಲ್ಲಿಗೆ ಬರುವ ಪ್ರವಾಸಿಗರೂ ಹೆಚ್ಚಿನ ಹೊರೆಯಾಗುತ್ತಿದೆ. ಹೀಗಾಗಿ ಅನಧಿಕೃತ ಬೋಟಂಗ್ ನಡೆಸುವವರ ವಿರುದ್ಧ ಸೂಕ್ತ‌ ಕ್ರಮ‌ ಜರಗಿಸುವುದರೊಂದಿಗೆ ಪ್ರವಾಸಿಗರಿಗೆ ಉಂಟಾಗುತ್ತಿರುವ ಹೊರೆ ತಪ್ಪಿಸಬೇಕಾಗಿದೆ.ಸರಕಾರದ ನಿಯಾಮಾನುಸಾರ ಎಲ್ಲಾ ದಾಖಲೆ ಹಾಗೂ ಪ್ರತಿ ತಿಂಗಳೂ ಜಿಲ್ಲಾಢಳಿತಕ್ಕೆ ಕಟ್ಟಬೇಕಾದ ಸುಲ್ಕವನ್ನ ಸರಿಯಾಗಿ ತುಂಬಿ ಗುತ್ತಿಗೆ ಆಧಾರದಲ್ಲಿ ಬೋಟಿಂಗ್ ನಡೆಸಿಕೊಂಡು ಬರುತ್ತಿದ್ದೇವೆ. ಸರಕಾರಕ್ಕೆ ಪ್ರತಿ ತಿಂಗಳೂ ಒಂದು ಲಕ್ಷಕ್ಕೂ ಹೆಚ್ಚಿನ ಹಣ ಪಾವತಿ ಮಾಡುತ್ತೆವೆ. ಆದರೆ ಸರಕಾರದ ಬೊಕ್ಕಸಕ್ಕೆ ಸರಿಯಾದ ಹಣ ಸಹ ಪಾವತಿ ಮಾಡದೆ. ಬರುವ ಪ್ರವಾಸಿಗರಿಗೂ ಸಹ ಸೂಕ್ತವಾದ ರಕ್ಷಣೆ ನೀಡದೆ ಅನಧಿಕೃತವಾಗಿ ಬೋಟಿಂಗ್ ದಂಧೆ ನಡೆಸುತ್ತಿದ್ದಾರೆ.

ಇಲ್ಲಿಗೆ ಬರುವ ಪ್ರವಾಸಿಗರಿಂದ ಹೆಚ್ಚಿನ ಹಣ ವಸೂಲಿ ಮಾಡಿ ಸರಕಾರಕ್ಕೂ ಶುಲ್ಕ ಕಟ್ಟದೆ ಮೋಸ ಮಾಡುತ್ತಿದ್ದಾರೆ.ಇದರಿಂದಾಗಿ ಪ್ರಮಾಣಿಕವಾಗಿ ಬೋಟಿಂಗ್ ಉದ್ಯೋಗ ಮಾಡುವವರಿಗೆ ತೊಂದರೆ ಉಂಟಾಗುತ್ತಿದೆ. ಇವರು ಮಾಡುವ ತಪ್ಪಿನಿಂದಾಗಿ ಪ್ರವಾಸೋದ್ಯಮ ಇಲಾಖೆಗೂ ಕೆಟ್ಟ ಹೆಸರು ಬಂದ ಹಾಗೆ ಆಗುತ್ತಿದೆ.ಇದರಿಂದಾಗಿ ಅಧಿಕೃತ ಬೋಟಿಂಗ್ ಉದ್ಯೋಗ ನಡೆಸುವವರು ನಷ್ಟ ಅನುಭವಿಸುವಂತಾಗುತ್ತಿದೆ.ಪ್ರವಾಸೋದ್ಯಮ ಇಲಾಖೆ ಬೋಟಿಂಗ್ ನಡೆಸಲು ನಮ್ಮಗೆ ಗುರುತು ಪಡಿಸಿದ ಸ್ಥಳದಲ್ಲೂ ಬಂದು ಬೋಟಿಂಗ್ ನಡೆಸುವ ಮೂಲಕ‌ ನಮ್ಮಗೂ ತೊಂದರೆ ನೀಡುತ್ತಿದ್ದಾರೆ.

ಗೋಕರ್ಣ ಸುತ್ತಮುತ್ತ ಬೀಚ್‌ಗಳಾದ ಹಾಪ್ ಮೂನ್, ಪ್ಯಾರಡೈಸ್ ಬೀಚ್ ಸೇರಿದಂತೆ 20ಕ್ಕೂ ಹೆಚ್ಚು ಕಡೆಯಲ್ಲಿ ಅನಧಿಕೃತವಾಗಿ ಈ ಬೋಟಿಂಗ್ ದಂಧೆ ನಡೆಸಲಾಗುತ್ತಿದೆ.ಅಲ್ಲದೆ ಅನಧಿಕೃತವಾಗಿ ಬೋಟಿಂಗ್ ಮಾಡುವವರು ಸಾಮರ್ಥ್ಯಕ್ಕಿಂತ ಹೆಚ್ಚು ಪ್ರವಾಸಿಗರನ್ನು ಕೂರಿಸಿಕೊಂಡು ಹೋಗುತ್ತಾರೆ. ಹೀಗಾಗಿ ಈ ಹಿಂದೆ ಬೋಟ್ ಮುಳುಗಡೆಯಾಗಿತ್ತು. ಈ ಬಗ್ಗೆ‌ ಜಿಲ್ಲಾ ಉಸ್ತುವಾರಿ ಸಚಿವರು ಸಭೆ ನಡೆಸಿ ಸಮಸ್ಯೆ ಬಗೆಹರಿಸಬೇಕಾಗಿದೆ ಎಂದು ಚಂದ್ರಕಾಂತ ಹರಿಕಾಂತ ಒತ್ತಾಯಿಸಿದ್ದಾರೆ.

ನಾಗರಾಜ ಹರಿಕಂತ್ರ, ಉಸ್ಮಾನ್ ಅಬ್ದುಲ್ ರೆಹಮಾನ ಸಂತೋಷ ಎಚ್ ಹರಿಕಂತ್ರ, ಚಂದ್ರಕಾಂತ್ ಅಂಬಿಗ, ದೇವಾನಂದ ನಾಯಕ ಹಾಗೂ ಮೊದಲಾದವರು ಹಾಜರಿದ್ದರು.

ಗಮನಿಸಿ