ಸುದ್ದಿಬಿಂದು ಬ್ಯೂರೋ
ಕಾರವಾರ : ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಆರು ತಿಂಗಳ ಪುರೈಸಿದ್ದು, ಇದುವರೆಗೂ ನೇಮಕವಾಗದ ನಿಗಮಂಡಳಿಗೆ ಅಧ್ಯಕ್ಷರ ಆಯ್ಕೆಪ್ರಕ್ರಿಯೆ ಬಾಕಿ ಉಳಿದುಕೊಂಡಿತ್ತು. ಆದರೆ ಇದೀಗ ಈ ನಿಗಮ ಮಂಡಳಿಯ ಅಧ್ಯಕ್ಷರ ಆಯ್ಕೆಯ ಮೊದಲ ಪಟ್ಟಿ ಇಂದು ಸಂಜೆ ಒಳಗೆ ಫೈನಲ್ ಆಗುವ ಸಾಧ್ಯತೆ ಇದೆ.
ಈಗಾಗಲೆ ಮೊದಲ ಹಂತದ ನಿಗಮ ಮಂಡಳಿ ಆಯ್ಕೆಗೆ ಹೆಸರು ಅಂತಿಮವಾಗಿದ್ದು, ತೆಲಂಗಾಣ ಚುನಾವಣಾ ಪ್ರಚಾರದಲ್ಲಿರುವ ಸುರ್ಜೇವಾಲ ಅವರು ಇಂದು ಬೆಂಗಳೂರಿಗೆ ವಾಪಸ್ ಆಗಲಿದ್ದು, ಮಧ್ಯಾಹ್ನ 3ಗಂಟೆಗೆ ಸಭೆ ನಡೆಯಲಿದೆ.ಸಭೆ ಬಳಿಕ ಅಂತಿಮ ಮುದ್ರೆ ಒತ್ತಲಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಇದೆ.ಮಂತ್ರಿ ಮಂಡದಲ್ಲಿ ಸಚಿವ ಸ್ಥಾನಸಿಗದ ಕೆಲವು ಶಾಸಕರಿಗೆ ನಿಗಮ ಮಂಡಳಿಯಲ್ಲಿ ಅವಕಾಶ ನೀಡುವ ಸಾಧ್ಯತೆ ಇದೆ.
ಉ.ಕ ಜಿಲ್ಲೆಯ ಇಬ್ಬರೂ ಶಾಸಕರಿಗೆ ನಿಗಮಂಡಳಿಯಲ್ಲಿ ಸ್ಥಾನ ಸಾಧ್ಯತೆ
ಉತ್ತರಕನ್ನಡ ಜಿಲ್ಲೆಯಲ್ಲಿ ಸದ್ಯ ಇಬ್ಬರೂ ಶಾಸಕರ ಹೆಸರು ಮುಚ್ಚುಣಿಯಲ್ಲಿದ್ದು ಶಿರಸಿ ಕ್ಷೇತ್ರ ಶಾಸಕ ಭೀಮಣ್ಣ ನಾಯ್ಕ ಹಾಗೂ ಕಾರವಾರ ಶಾಸಕ ಸತೀಶ ಸೈಲ್ ಅವರ ಹೆಸರು ಕೂಡ ಪಟ್ಟಿಯಲ್ಲಿದೆ ಎನ್ನುವ ಬಗ್ಗೆ ಕಾಂಗ್ರೆಸ್ ಮೂಲಗಳಿಂದ ತಿಳಿದು ಬಂದಿದ್ದು, ಇಬ್ಬರೂ ಶಾಸಕರು ಸಿ ಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ ಅವರ ಆಪ್ತರಾಗಿದ್ದು, ಹೀಗಾಗಿ ಇವರಿಬ್ಬರ ಹೆಸರನ್ನ ಸಿ ಎಂ ಹಾಗೂ ಡಿ ಸಿ ಎಂ ಪ್ರಸ್ತಾಪಿಸಿದ್ದು, ಪಟ್ಟಿಯಲ್ಲಿದೆ ಎನ್ನಲಾಗಿದೆ.