ಸುದ್ದಿಬಿಂದು ಬ್ಯೂರೋ
ಬೆಂಗಳೂರು : ಮಹಿಳೆಯರಿಗೆ ಸರಕಾರಿ ಬಸ್ ನಲ್ಲಿ ಪ್ರಯಾಣಿಸಲು ಉಚಿತ ಸೇವೆ ಕಲ್ಪಿಸಿದ್ದು, ಪಾಸ್ ಮಾದರಿಯಲ್ಲಿ ಸ್ಮಾರ್ಟ್ ಕಾರ್ಡ್ ವಿತರಣೆಗೆ ಸರಕಾರ ಮುಂದಾಗಿದೆ.
ಮಹಿಳೆಯರಿಗೆ ಬಸ್ ನಲ್ಲಿ ಉಚಿತವಾಗಿ ಪ್ರಯಾಣಿಸಲು ಸರಕಾರ ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದು, ಪ್ರತಿಯೊಬ್ಬ ಮಹಿಳೆಯರು ಕಡ್ಡಾಯವಾಗಿ ಸ್ಮಾರ್ಟ್ ಕಾರ್ಡ್ ಮಾಡಿಸಿಕೊಳ್ಳಬೇಕಿದೆ. ಸರಕಾರ ಮಹಿಳೆಯರಿಗೆ ಈ ಮೂರು ತಿಂಗಳಲ್ಲಿ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡುವ ಗುರಿಯನ್ನ ಹೊಂದಿದ್ದು, ಬಸ್ ನಲ್ಲಿ ಉಚಿತ ಪ್ರಯಾಣ ಮಾಡಲು ಇಚ್ಛಿಸುವ ಮಹಿಳೆಯರು ಸ್ಮಾರ್ಟ್ ಕಾರ್ಡ್ ಪಡೆಯಲು ಅರ್ಜಿಯನ್ನ ಸಲ್ಲಿಸಬೇಕು.
ಮೂರು ತಿಂಗಳ ಒಳಗಾಗಿ ಹತ್ತಿರದ ಸೇವಾ ಸಿಂದು ಮೂಲಕ ಅರ್ಜಿಯನ್ಬ ಸಲ್ಲಿಸಬಹುದಾಗಿದೆ.ಬಸ್ ನಲ್ಲಿ ಉಚಿತವಾಗಿ ಪ್ರಯಾಣಿಸುವ ಮಹಿಳೆಯರ ಬಸ್ ಟಿಕೆಟ್ ಹಣವನ್ನ ಸರಕಾರವೆ ಭರಿಸಲಿದೆ. ಐಷಾರಾಮಿ ಬಸ್ ಗಳು ಹಾಗೂ ಅಂತರಾಜ್ಯ ಬಸ್ ಗಳಲ್ಲಿ ಪ್ರಯಾಣಿಸುವವರಿಗೆ ಈ ಉಚಿತ ಬಸ್ ಪಾಸ್ ಅಸ್ವಯಿಸುವುದಿಲ್ಲ.
ಉದಾರಣೆಗೆ ಭಟ್ಕಳದಿಂದ ಕಾರವಾರಕ್ಕೆ ಪ್ರಯಾಣಿಸುವವರು ಪಕ್ಕದ ಗೋವಾ ರಾಜ್ಯಕ್ಕೆ ಸಂಚರಿಸುವ ಬಸ್ ನಲ್ಲಿ ಪ್ರಯಾಣಿಸಿದರೆ ಅಂತಹವರಿಗೆ ಉಚಿತ ಸೇವೆ ಅನ್ವಯವಾಗುವುದಿಲ್ಲ.. ಜಿಲ್ಲೆಯ ಒಳಗಡೆ ಸಂಚರಿಸುವ ಬಸ್ ಗಳಲ್ಲಿ ಮಾತ್ರ ಈ ಸೇವೆ ಸಿಗಬಹುದಾಗಿದೆ.