ಸುದ್ದಿಬಿಂದು ಬ್ಯೂರೋ
ಕಾರವಾರ: ಜಗದೀಶ ಶೆಟ್ಟರ್(Jagadish Shetter) ಅವರದ್ದು ಹಿಂದು ರಕ್ತ ಎಂದು ಹೇಳುವ ಈಶ್ವರಪ್ಪ (Eshwarappa) ಅವರು ಯಾವಾಗ ಬ್ಲಡ್ ಟೆಸ್ಟ್ ಮಾಡಿದ್ದಾರೆ ಗೊತ್ತಿಲ್ಲ. ಬಹುಶಃ ಅವರ ಪಕ್ಷದಲ್ಲಿದ್ದವರಿಗೆ, ಪಕ್ಷಕ್ಕೆ ಬರುವವರಿಗೆ ಅವರು ಆಗಾಗ ಬ್ಲಡ್ ಟೆಸ್ಟ್ ಮಾಡ್ತಾರೋ ಏನೋ ಗೊತ್ತಿಲ್ಲ. ಜಗದೀಶ ಶೆಟ್ಟರ್ ಹಿಂದೂನೆ, ನಾನೂ ಹಿಂದೂನೆ, ನಮ್ಮ ರಕ್ತನೂ ಒಂದೇ ಇದೆ.ಜಗದೀಶ್ ಶೆಟ್ಟರ್ ನಮ್ಮನ್ನ ನಂಬಿಕೊಂಡು ಬಂದಿದ್ದಾರೆಂದು ಉತ್ತರಕನ್ನಡ ( Utarakannda) ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ(Minister Mankalu Vaidya )ಅವರು ಈಶ್ವರಪ್ಪ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಕಾರವಾರದಲ್ಲಿ(karwar) ನಡೆದ ಜನತಾ ದರ್ಶನ ಕಾರ್ಯಕ್ರಮದ(Janata Darshan)ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಮಂಕಾಳು ವೈದ್ಯ ಅವರು ನಮ್ಮ ಪಕ್ಷಕ್ಕೆ ಯಾರೇ ಬಂದರೂ ಸ್ವಾಗತ ಇದೆ, ಪಕ್ಷದಿಂದ ಹೊರಗೆ ಹೋಗುವವರಿಗೂ ಸ್ವಾಗತ ಮಾಡಿಯೇ ಕಳುಹಿಸ್ತೇವೆ.ಕಳೆದ ಬಾರಿ ಬಿಜೆಪಿಗೆ ಹೋಗಿದ್ದ 16 ಮಂದಿ ಕಾಂಗ್ರೆಸ್ ಶಾಸಕರು ಈಗ ಬಿಜೆಪಿ ಬೇಡ ಎನ್ನುತ್ತಿದ್ದಾರೆ.ಅವರ ಬ್ಲಡ್ ಚೆಕ್ ಮಾಡಿದ್ದಾರೋ ಇಲ್ವೋ ಗೊತ್ತಿಲ್ಲ ಅವರು ಮತ್ತೆ ಈಗ ವಾಪಸ್ ಕಾಂಗ್ರೆಸ್ ಗೆ ಬರುತ್ತಿದ್ದಾರೆಂದರು.

ಉಚಿತವಾಗಿ ಏನನ್ನೂ ಕೊಡಬಾರದು ಎನ್ನುವ ಇನ್ಫೋಸಿಸ್ ನಾರಾಯಣಮೂರ್ತಿ ಹೇಳಿಕೆಗೆ ಪ್ರತಿಕ್ರಿಯಿಸಿದ ವೈದ್ಯ ಅವರು.ಜನ ಉಚಿತ ಗ್ಯಾರೆಂಟಿ ಯೋಜನೆಗಳಿಗೆ ಕಾಂಗ್ರೆಸ್ ಸರ್ಕಾರವನ್ನ ಅಭಿನಂದಿಸುತ್ತಿದ್ದಾರೆ ಜನರಿಗಿಂತ ಮುಖ್ಯವಾಗಿ ಬೇರೆಯವನ್ನ ಮಾತನ್ನ ನಾನು ತೆಗೆದುಕೊಳ್ಳುವುದಿಲ್ಲ. ಉಚಿತ ಬಸ್ ಪ್ರಯಾಣ, ಗೃಹಲಕ್ಷ್ಮೀ, ಅನ್ನಭಾಗ್ಯ ಯೋಜನೆಗಳಿಂದ ಜನರಿಗೆ ಅನುಕೂಲವಾಗಿದೆ.ನಾವು ಸಾಮಾನ್ಯ ಜನರ ಕೆಲಸ ಮಾಡ್ತಿದ್ದೇವೆ. ಜನರಿಗಿಂತ ಯಾರೂ ನಮಗೆ ದೊಡ್ಡವರಲ್ಲ ಎಂದರು.

ಪಂಚರಾಜ್ಯ ಚುನಾವಣಾ ಮತಎಣಿಕೆ ವಿಚಾರ ಐದು ರಾಜ್ಯಗಳ ಚುನಾವಣೆ ವಿಚಾರ ಐದು ರಾಜ್ಯಗಳಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಮಂಕಾಳು ವೈದ್ಯ ಅವರು ವಿಶ್ವಾಸದ ಮಾತುಗಳನ್ನ ಆಡಿದರು.