ಕಾರವಾರ : ಲೋಕಸಭಾ ಚುನಾವಣೆ ಎಲ್ಲಾ ರಾಜಕೀಯ ಪಕ್ಷಗಳು ಸಿದ್ದವಾಗುತ್ತಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ ಸದ್ಯ ಬಿಜೆಪಿ ಅಧ್ಯಕ್ಷರ ಆಯ್ಕೆ ಕಸರತ್ತು ಆರಂಭವಾಗಿದ್ದು, ಹಿಂದೂಳಿದ ವರ್ಗಕ್ಕೆ ನೀಡಬೇಕೆನ್ನುವ ಬಗ್ಗೆ ಚಿಂತನೆ ನಡೆಯುತ್ತಿದ್ದು, ವಿನೋಧ ನಾಯ್ಕ ರಾಯಲ್ಕೇರಿ ಅವರ ಹೆಸರು ಸಹ ಮುಂಚೂಣಿಯಲ್ಲಿದೆ ಎನ್ನಲಾಗಿದೆ.

ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪ್ರಮುಖವಾಗಿ ಭಟ್ಕಳ ಗೋವಿಂದ ನಾಯ್ಕ ಹಾಗೂ ವಿನೋಧ ನಾಯ್ಕ ರಾಯಲ್ಕೇರಿ ಇವರಿಬ್ಬರ ಹೆಸರುಗಳಿದೆ. ಆದರೆ ಗೋವಿಂದ ಅವರಿಗೆ ಈಗಲಾಲೇ ಭಟ್ಕಳ ಕ್ಷೇತ್ರದಿಂದ ಎಂ ಎಲ್ ಟಿಕೇಟ್ ಹಾಗೂ ನಿಗಮಂಡಳಿ ಸೇರಿಸದಂತೆ ಪಕ್ಷದ ಹಲವು ಪ್ರಮುಖ ಸ್ಥಾನಮಾನ ನೀಡಲಾಗಿದೆ. ಈ ಕಾರಣಕ್ಕಾಗಿ ಬಿಜೆಪಿಯ ಹಳೆ ಮುಖದಲ್ಲೆ ಹೊಸಬರಾಗಿರುವ ವಿನೋಧ ನಾಯ್ಕ ರಾಯಲ್ಕೇರಿ ಅವರು ಹೆಸರು ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನದಲ್ಲಿ ಮುಂಚೂಣಿಯಲ್ಲಿರುವ ಹೆಸರಾಗಿದೆ ಎಂದು ಪಕ್ಷದ ಕಾರ್ಯಕರ್ತರೆ ಹೇಳಿಕೊಳ್ಳುತ್ತಿದ್ದಾರೆ.

ವಿನೋಧ ನಾಯ್ಕ ಅವರು ಕಳೆದ 20 ವರ್ಷಗಳಿಂದ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತನಾಗಿ ಪ್ರಾಮಾಣಿಕವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ ಈ ಹಿಂದೆ ಹೊನ್ನಾವರ ಕುಮಟಾ ವಿಧಾನಸಭಾ ಕ್ಷೇತ್ರದ ಕಾರ್ಯದರ್ಶಿಯಾಗಿ ಹೊನ್ನಾವರ ತಾಲ್ಲೂಕು ಅಧ್ಯಕ್ಷ ನಾಗಿ ಓಬಿಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ವ್ಯಾಪಾರಸ್ಥರ ಪ್ರಕೋಷ್ಠದ ಜಿಲ್ಲಾ ಸಂಚಾಲಕರಾಗಿ ಕಾರ್ಯನಿರ್ವಹಿಸಿದ್ದಾರೆ‌.

ಇನ್ನೂ ಹೊನ್ನಾವರ ಪಟ್ಟಣ ಪಂಚಾಯತ್ ಉಪಾಧ್ಯಕ್ಷನಾಗಿ ಹಾಗೂ ಪಟ್ಟಣ ಪಂಚಾಯತ್ ಚೇರ್ ಮೆನ್ ಆಗಿ ಹೊನ್ನಾವರ ಭಟ್ಕಳ ವಿಧಾನಸಭಾ ಕ್ಷೇತ್ರದ ಸಂಚಾಲಕನಾಗಿ ವಿಜಲೆನ್ಸಿ ಕಮಿಟಿಯ ಸದಸ್ಯನಾಗಿ ಬಿಎಸ್ಏನ್ಎಲ್ ಸಲಹಾ ಸಮಿತಿಯ ಸದಸ್ಯನಾಗಿ ವಿಜಯ ಸಂಕಲ್ಪ ಯಾತ್ರೆಯ ಜಿಲ್ಲಾ ಸಹ ಸಂಚಾಲಕರಾಗಿ ಈಗ ಜಿಲ್ಲಾ ಕಾರ್ಯದರ್ಶಿಯಾಗಿ ಪಕ್ಷದ ಅನೇಕ ಜವಾಬ್ದಾರಿಗಳನ್ನು ನಿಭಾಯಿಸುತ್ತಾ ಬಂದಿದ್ದಾರೆ ಪಕ್ಷದ ಏಳಿಗೆಗೆ ಬಹಳ ವರ್ಷಗಳಿಂದ ಪ್ರಾಮಾಣಿಕ ಕಾರ್ಯಕರ್ತನಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ‌.

ಇನ್ನೂ ಇವರು ಸಂಘ ಪರಿವಾರದ ಜೊತೆಗೆ ಕೂಡ ಉತ್ತಮ ಬಾಂಧವ್ಯ ಹೊಂದಿದ್ದು, ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ವಿಜಯೇಂದ್ರ ಅವರೊಂದಿಗೆ ಈ ಮೊದಲಿನಿಂದಲ್ಲೂ ಆತ್ಮೀಯವಾಗಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಬಿಜೆಪಿಗೆ ಭಾರೀ ಹಿನ್ನಡೆ ಆಗಿದೆ. ಈ ಕಾರಣಕ್ಕೆ ಲೋಕಸಭಾ ಚುನಾವಣೆಯಲ್ಲಿ ಪಕ್ಷವನ್ನ ಇನ್ನಷ್ಟು ಸಂಘಟನಾತ್ಮಕವಾಗಿ ಮಾಡಬೇಕು. ಹಾಗೂ ಜಿಲ್ಲೆಯಲ್ಲಿ ಹಿಂದೂಳಿದವರ‌ ಮತಗಳ‌ ಮೇಲೆ‌ ಕಣ್ಣೀಟ್ಟಿರುವ ಬಿಜೆಪಿ ಲೋಕಸಮರ ಗೆಲ್ಲಲು ರಣತಂತ್ರ‌ ರೂಪಿಸುತ್ತಿದೆ.