murder of two women with stones..

suddibindu.in
murder news ಕಲಬುರ್ಗಿ : ಕಲ್ಲಿನಿಂದ ಜಜ್ಜಿ ಇಬ್ಬರ ಮಹಿಳೆಯರ ಭೀಕರ ಹತ್ಯೆ (Murder) ಮಾಡಿರುವ ಘಟನೆ, ಕಲಬುರಗಿ (Kalburgi) ನಗರ ಹೊರವಲಯದ ತಾವರಗೇರ ಕ್ರಾಸ್ ಬಳಿ ನಡೆದಿದೆ.

ಕಲಬುರಗಿ ನಗರದ ನಿವಾಸಿಗಳಾಗಿರುವ ತಾಜ್‌ ಸುಲ್ತಾನ್‌ ಪುರದ ಚಂದಮ್ಮ(chandamma 53) ಹಾಗೂ ಕೆ ಕೆ ನಗರದ ಶರಣಮ್ಮ( ಶರಣಮ್ಮ 51) ಕೊಲೆಯಾದವರು. ಇಬ್ಬರು ಕಲಬುರಗಿ ಗಂಜ್‌ ಪ್ರದೇಶದಿಂದ ಕೂಲಿ ಕೆಲಸಕ್ಕೆಂದು (Kuli work) ಬಸ್‌ ಹಿಡಿದು ತಾವರಗೇರಾ ಕ್ರಾಸ್‌ಗೆ ತೆರಳಿದ್ದರು. ಅಲ್ಲಿಯೇ ಬೆಳಿಗ್ಗೆಯಿಂದ ಕೆಲಸ ಮಾಡುತ್ತಿದ್ದು, ಮಧ್ಯಾಹ್ನದ (Afternoon) ಹೊತ್ತಿಗೆ ಶವವಾಗಿದ್ದಾರೆ. ಕೊಲೆಯಾಗಿರುವುದನ್ನು ಗಮನಿಸಿದ ಸ್ಥಳೀಯರು ಕಲಬುರಗಿ ಗ್ರಾಮೀಣ ಠಾಣೆ ಪೊಲೀಸರಿಗೆ (Kalburgi rural police station) ಮಾಹಿತಿ ನೀಡಿದ್ದಾರೆ. ಅಲ್ಲಿಗೆ ಧಾವಿಸಿದ ಪೊಲೀಸರು ಎರಡೂ ಶವಗಳ ಮಹಜರು ನಡೆಸಿದರು. ಕಲ್ಲುಗಳನ್ನು ಎತ್ತಿ ಹಾಕಿ ಇಬ್ಬರನ್ನು ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಇಬ್ಬರ ಶವಗಳನ್ನು ಗುರುತಿಸಿ ನಂತರ ಕುಟುಂಬದವರಿಗೆ ಮಾಹಿತಿ ನೀಡಿದರು.

ಇದನ್ನೂ ಓದಿ

ಸ್ಥಳಕ್ಕೆ ಬೆರಳಚ್ಚು ತಜ್ಞರು (Fingerprint expert), ಶ್ವಾನ ದಳವನ್ನು (Dog Seward) ಕರೆ ತರಲಾಗಿತ್ತು. ಹಿರಿಯ ಪೊಲೀಸ್‌ ಅಧಿಕಾರಿಗಳೂ ಸ್ಥಳಕ್ಕೆ ಭೇಟಿ ನೀಡಿದ್ದರು. ಕೊಲೆ ಪ್ರಕರಣಗಳ ಪತ್ತೆಗೆ ತಂಡಗಳನ್ನು ರಚಿಸಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇಬ್ಬರು ಮಹಿಳೆಯರ ಕೊಲೆಯಾಗಿರುವ ಮಾಹಿತಿ ಆಧರಿಸಿ ಸ್ಥಳಕ್ಕೆ ಭೇಟಿ ನೀಡಿದಾಗ ಭೀಕರವಾಗಿ ಕೊಲೆ ಮಾಡಿರುವುದು ಕಂಡು ಬಂದಿತು. ಕುಟುಂಬವರು ನೀಡಿದ ದೂರಿನ (Complaint) ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದೇವೆ. ಕೊಲೆ ಮಾಡಿದವರ ವಿವರ ಮಾಹಿತಿ ಕಲೆ ಹಾಕಲಾಗುತ್ತಿದೆ. ಕೂಡಲೇ ಆರೋಪಿಗಳನ್ನು ಬಂಧಿಸಲಾಗುವುದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.