suddibindu.in
ಬೆಂಗಳೂರು: ಮಹಿಳೆಯೋರ್ವಳ ಅಪಹರಣ ಮಾಡಲಾಗಿದೆ ಎನ್ನುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿದ್ದ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರಿಗೆ ಜಾಮೀನು ಸಿಕ್ಕಿದ್ದು,ಆದರೆ ನಾಳೆ ಬಿಡುಗಡೆ ಭಾಗ್ಯ ಸಿಗಲಿದೆ.

ಜನಪ್ರತಿನಿಧಿ ನ್ಯಾಯಾಲಯದಲ್ಲಿ ಬೆಳಿಗ್ಗೆಯಿಂದ ನಡೆದ ಕಲಾಪದಲ್ಲಿ ಈಗಷ್ಟೇ ಜಾಮೀನು ನೀಡಿ, ನ್ಯಾಯಾಧೀಶರಾದ ಸಂತೋಷ ಗಜಾನನ ಭಟ್ ಅವರು ಆದೇಶ ನೀಡಿದ್ದಾರೆ. ರೇವಣ್ಣ ಅವರ ಪರವಾಗಿ ಸಿ.ವಿ.ನಾಗೇಶ ಅವರು ವಾದ ಮಂಡಿಸಿದ್ದರು. ಜಾಮೀನು ಸಿಕ್ಕ ನಂತರ ನ್ಯಾಯವಾದಿ ನಾಗೇಶ ಮಾತನಾಡಿ, ಇದು ರಾಜಕೀಯ ದುರುದ್ದೇಶದಿಂದ ಪ್ರಕರಣ ದಾಖಲಾಗಿತ್ತೆಂದು ಹೇಳಿದರು.