ಹಾಸನ : ಪ್ರೇಮ ವೈಫಲ್ಯದಿಂದಾಗಿ ಆಕೆಯ ಪ್ರೀಯಕರನೆ ಪ್ರೀಯತಮೆಯ ಕುತ್ತಿಗೆ ಸೀಳಿ ಬರ್ಬರವಾಗಿ ಕೊಲೆಗೈದಿರುವ ಘಟನೆ ಹಾಸನ ಜಿಲ್ಲೆಯ ಅಗಿಲೆ ಬಳಿಯ ಕುಂತಿಬೆಟ್ಟದಲ್ಲಿ ನಡೆದಿದೆ.

ಇಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದ ಸುಚಿತ್ರಾ(20) ಕೊಲೆಯಾದ ಯುವತಿಯಾಗಿದ್ದಾಳೆ.ಅದೆ ಕಾಲೇಜಿನ ತೇಜಸ್ ಸುಚಿತ್ರಾಳನ್ನ ಪ್ರೀತಿಸುತ್ತಿದ್ದ ಎನ್ನಲಾಗಿದೆ. ಇವರಿಬ್ಬರ ನಡುವಿನ ಪ್ರೀತಿ ಕೆಲ ದಿನಗಳಿಂದ ಲವ್ ಬ್ರೇಕಪ್ ಆಗಿತ್ತು ಎನ್ನಲಾಗಿದೆ. ಈತ ಪ್ರೀತಿಯನ್ನ ಸುಚಿತ್ರಾ ನಿರಾಕರಿಸಿದ್ದಳು ಎನ್ನಲಾಗಿದೆ. ನಿನ್ನ ಜೊತೆ ಏನೋ ಮಾತನಾಡಬೇಕಿದೆ ಅಂತಾ ಹೇಳಿ ಯುವತಿಯನ್ನ ಒಂಟಿಯಾಗಿ ಕುಂತಿ ಬೆಟ್ಟಕ್ಕೆ ಕರೆದುಕೊಂಡು ಹೋಗಿ ಪಾಪಿ ಪ್ರೀಯರ ಪ್ರೀಯತಮೆತನ್ನ‌‌ ಕತ್ತು ಸೀಳಿ‌ ಕೊಲೆಗೈದಿದ್ದಾನೆ.

ಈ ವೇಳೆ ಪ್ರೀತಿ ವಿಚಾರವಾಗಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದ್ದು, ಆಕೆ ತಾನು ನಿನ್ನನ್ನು ಪ್ರೀತಿಸಲ್ಲ ಎಂದು ಹೇಳಿದ್ದಾಳೆ ಎನ್ನಲಾಗಿದ್ದು,‌ ಇದಕ್ಕೆ ಸಿಟ್ಟಾದ ತೇಜಸ್ ಆಕೆಯ ಕುತ್ತಿಗೆ ಸೀಳಿ ಕೊಲೆ ಮಾಡಿದ್ದಾನೆ.

ಇಬ್ಬರೂ ಕೂಡ ಮೊಸಳೆಹೊಸಳ್ಳಿ ಸರಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಮಾಡುತ್ತಿದ್ದರು. ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಹಾಸನ ಗ್ರಾಮಾಂತ‌ರ ಪೊಲೀಸರು ಆರೋಪಿ ತೇಜಸ್‌ ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.