ಸುದ್ದಿಬಿಂದು ಬ್ಯೂರೋ
ಕುಮಟ : ಉತ್ತರಕನ್ನಡ ಜಿಲ್ಲೆ (Utarakannda)ಅಂದರೆ ಅದು ಪ್ರವಾಸಿಗರ ಸ್ವರ್ಗ ಅಂತ ಕರೆಯಲಾಗತ್ತೆ.ಆದರೆ ಪ್ರವಾಸಿಗರು (Tourists) ವಿಶ್ರಾಂತಿ ಪಡೆಯುವ ನೂರಕ್ಕೂ ಅಧಿಕ ರೆಸಾರ್ಟ್ ಗಳು (Resort) ಅಧಿಕೃತವಾಗದಿರುವುದು ದುರಂತವೇ ಸರಿ. ಈಗಾಗಲೇ ಕುಮಟ ತಾಲೂಕಿನ ಸುತ್ತಮುತ್ತ ಸರಿಸುಮಾರು 130ಕ್ಕೂ ಅಧಿಕ ರೆಸಾರ್ಟ್ ಗಳಿದ್ದು ಅದರಲ್ಲಿ 20ರಿಂದ 25ರೆಸಾರ್ಟ್ ಗಳು ಮಾತ್ರ ಪರವಾನಿಗೆ ಹೊಂದಿದೆ ಎನ್ನುವುದು ಇತ್ತಿಚೇಗೆ ಸ್ಥಳೀಯ ಆಡಳಿತ ನಡೆಸಿರುವ ಸರ್ವೆಯಿಂದ ಬಹಿರಂಗವಾಗಿದೆ.
ಕುಮಟ(kumta)ತಾಲೂಕಿನ ಬಾಡ ಕಡಲತೀರದಿಂದ ಗೋಕರ್ಣದವರೆಗೆ (Gokarna)130ಕ್ಕೂ ರೆಸಾರ್ಟ್ ಗಳಿವೆ. ಆದರೆ ಇಷ್ಟೊಂದು ರೆಸಾರ್ಟ್ ಗಳಲ್ಲಿ ಕೇವಲ 20ರಿಂದ 25. ರೆಸಾರ್ಟ್ ಗಳು ಅನಧಿಕೃತ ಎನ್ನುವುದು ತಾಲೂಕಾ ಆಡಳಿತ ನಡೆಸಿರುವ ತನಿಖೆಯಿಂದ ಪತ್ತೆಯಾಗಿದೆ. ಅದೆಷ್ಟೊ ರೆಸಾರ್ಟ್ ಗಳಿಗೆ ಸ್ಥಳೀಯ ಗ್ರಾಮ ಪಂಚಾಯತದ ಅನುನತಿಯೇ ಇಲ್ಲದೆ. ತಮ್ಮ ತಮ್ಮ ಖಾಸಗಿ, ಬಾಡಿಗೆ ಜಮೀನಿನಲ್ಲಿ ಬೃಹತ್ ಕಟ್ಟಡ ನಿರ್ಮಿಸಿಕೊಂಡು ರೆಸಾರ್ಟ್ ಗೆ ಅನುಮತಿಯನ್ನ ಪಡೆಯದೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.
ರೆಸಾರ್ಟ್ ನಡೆಸುವಾಗ ಸ್ಥಳೀಯ ಗ್ರಾಮ ಪಂಚಾಯತ ಹಾಗೂ ಪ್ರವಾಸೋದ್ಯಮ ಇಲಾಖೆಯ (Tourism Department) ಅನುಮತಿ ಪಡೆದೇ ರೆಸಾರ್ಟ್ ನಡೆಸಬೇಕು ಎನ್ನುವುದು ಕಾನೂನಿನಲ್ಲಿದೆ. ಆದರೆ ರೆಸಾರ್ಟ್ ನಡೆಸುವ ಹಣವಂತರು ಅವೇಲ್ಲವನ್ನ ಗಾಳಿಗೆ ತೂರಿರುವುದು ಸ್ಥಳೀಯವಾಗಿಯೇ ಹೊಂದಾಣಿಕೆ ಮಾಡಿಕೊಂಡು ರೆಸಾರ್ಟ್ ನಡೆಸುತ್ತಿದ್ದಾರೆ ಎನ್ನಲಾಗಿದೆ. ಗ್ರಾಮ ಪಂಚಾಯತದಿಂದ ಯಾವೇಲ್ಲಾ ರೆಸಾರ್ಟ್ ಗಳಿಗೆ ಅನುಮತಿ ಇದೆ ಎಂದು ತಾಲೂಕಾ ಆಡಳಿತ ಮಾಹಿತಿ ಕೇಳಿದೆ.ಆದರೆ ಬಹುತೇಕ ರೆಸಾರ್ಟ್ ಗಳಿಗೆ ಅನುಮತಿಯೇ ಇಲ್ಲದಿರುವುದು ಇದೀಗ ಗೋತ್ತಾಗಿದೆ.
ಗ್ರಾಮ ಪಂಚಾಯತ ಅನುಮತಿ ಇಲ್ಲದೆ ರಾಜಾರೋಷವಾಗಿ ಅಧಿಕೃತ ರೆಸಾರ್ಟ್ ಗಳಂತೆ ಕಾರ್ಯನಿರ್ವಹಿಸುತ್ತಿದೆ. ಅನುಮತಿ ಇಲ್ಲ ಎಂದು ಗ್ರಾಮ ಪಂಚಾಯತ ಪಿಡಿಓ ಹಾಗೂ ಕಾರ್ಯದರ್ಶಿಗಳ ಗಮನಕ್ಕೆ ಇದ್ದರೂ ಇದುವರೆಗೆ ಒಂದೇ ಒಂದು ನೋಟಿಸ್ ನೀಡದೆ ಇರುವುದು ಪಿಡಿಓ ಹಾಗೂ ಕಾರ್ಯದರ್ಶಿಗಳ ನಡೆ ಅನೇಕ ಅನುಮಾನಕ್ಕೆ ಎಡೆಮಾಡಿಕೊಡುವಂತಾಗಿದೆ. ಇನ್ನೂ ಹಲವು ರೆಸಾರ್ಟ್ ಗಳು CRZ ನಿಯಮವನ್ನ ಲೆಕ್ಕಿಸದೆ ತಲೆ ಎತ್ತರದ ಕಟ್ಟಡವನ್ನ ನಿರ್ಮಿಸಿಕೊಂಡು ಕಡಲತೀರಗಳು ಪಿತ್ರಾರ್ಜಿತ ಆಸ್ತಿ ಎನ್ನುವ ಹಾಗೆ ಸುತ್ತಲು ಆಳೆತ್ತರದ ಕಾಂಪೌಂಡ್ ನಿರ್ಮಿಸಿಕೊಂಡು ಒಳಗೊಳಗೆ ಇನ್ಯಾವೇಲ್ಲಾ ಆಟಪಠ ನಡೆಸುತ್ತಿದೆ ಎನ್ನುವುದು ಬಲ್ಲವರಿಗಷ್ಟೆ ಗೊತ್ತು.
ಅನಧಿಕೃತ ರೆಸಾರ್ಟ್ ಮೇಲೆ ಜಿಲ್ಲಾಡಳಿತದ ಕಣ್ಣು
ಉತ್ತರಕನ್ನಡ ಜಿಲ್ಲಾಧಿಕಾರಿಯಾಗಿರುವ ಗಂಗೂಬಾಯಿ ಮಾನಕರ್ ಅವರು, ಇತ್ತಿಚೇಗಷ್ಟೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಅನಧಿಕೃತ ರೆಸಾರ್ಟ್ ಗಳು ಇರುವ ಬಗ್ಗೆ ತಮ್ಮ ಗಮನಕ್ಕೆ ಬಂದಿದೆ. ಬಾಡ ಹಾಗೂ ಗೋಕರ್ಣ ಭಾಗದಲ್ಲಿ ಹೆಚ್ಚು ಅನಧಿಕೃತ ರೆಸಾರ್ಟ್ ಗಳು ಇದೆ ಎನ್ನುವ ಬಗ್ಗೆ ದೂರುಗಳು ಬಂದಿದೆ. ಆ ಬಗ್ಗೆ ಶೀಘ್ರದಲ್ಲಿ ಮಾಹಿತಿ ಪಡೆದು ಅನಧಿಕೃತವಾಗಿರುವ ರೆಸಾರ್ಟ್ ವಿರುದ್ದ ಕ್ರಮ ಜರುಗಿಸುವುದಾಗಿ ಹೇಳಿದ್ದು, ಇದಾದ ಬಳಿಕ ಸಂಬಂಧಿಸಿದ ಅಧಿಕಾರಿಗಳ ಜೊತೆ ಸಭೆ ನಡೆಸಿರುವ ಜಿಲ್ಲಾಧಿಕಾರಿಗಳು ರೆಸಾರ್ಟ್ ಗಳ ಬಗ್ಗೆ ಮಾಹಿತಿ ಕೇಳಿದ್ದಾರೆ ಎನ್ನಲಾಗಿದ್ದು, ಸಭೆ ಬಳಿಕ ಎಚ್ಚೆತ್ತುಕೊಂಡ ಸಂಬಂಧಿಸಿದ ಅಧಿಕಾರಿಗಳು ಅನಧಿಕೃತ ರೆಸಾರ್ಟ್ ಗಳ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆನ್ನಲಾಗಿದೆ.